ಪ್ರಮಾಣವಚನ ಸ್ವೀಕರಿಸುವವರ ಹೆಸರು ಪ್ರಕಟಿಸಿದ ಸಿಎಂ ಯಡಿಯೂರಪ್ಪ!

ಬೆಂಗಳೂರು, ಜ. 13: ಇಂದು (ಜ.13) ಮಧ್ಯಾಹ್ನ 3.50ಕ್ಕೆ ಪ್ರಮಾಣವಚನ ಸ್ವೀಕಾರ ಮಾಡಲಿರುವವರ 7 ಶಾಸಕರ ಹೆಸರುಗಳನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಆ ಮೂಲಕ ಸಂಪುಟವನ್ನು ಸೇರುವವರು ಯಾರು ಎಂಬ ಕುತೂಹಲವನ್ನು ತಣಿಸಿದ್ದಾರೆ. ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ವಿಧಾನಸೌಧದಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಅವರು ಸಂಪುಟ ಸೇರುತ್ತಿರುವವರ ಹೆಸರುಗಳನ್ನು ಓದಿ ಹೇಳಿದರು.

ನೂತನವಾಗಿ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ರಾಜಭವನಕ್ಕೆ ಈಗಾಗಲೇ ಕಳುಹಿಸಿದ್ದೇವೆ ಎಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಜೊತೆಗೆ ಅಬಕಾರಿ ಸಚಿವ ಎಚ್. ನಾಗೇಶ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ನಾಗೇಶ್ ಅವರ ಮನವೊಲಿಸುತ್ತೇನೆ, ಆ ಸ್ಥಾನವನ್ನು ಖಾಲಿ ಇಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿರುವ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿ ಹೀಗಿದೆ:

1. ಉಮೇಶ್ ಕತ್ತಿ-ಹುಕ್ಕೇರಿ ಶಾಸಕ

2. ಅರವಿಂದ್ ಲಿಂಬಾವಳಿ-ಮಹದೇವಪುರ ಶಾಸಕ

3. ಎಸ್. ಅಂಗಾರ-ಸುಳ್ಯ ಶಾಸಕ

4. ಮುರುಗೇಶ್ ನಿರಾಣಿ-ಬೀಳಗಿ ಶಾಸಕ

5. ಎಂಟಿಬಿ ನಾಗರಾಜ್-ವಿಧಾನ ಪರಿಷತ್ ಸದಸ್ಯ

6. ಆರ್. ಶಂಕರ್-ವಿಧಾನ ಪರಿಷತ್ ಸದಸ್ಯ

7. ಸಿ.ಪಿ. ಯೋಗೇಶ್ವರ್-ವಿಧಾನ ಪರಿಷತ್ ಸದಸ್ಯ

CM Yediyurappa Finalizes The Name Of MLAs To Take Oath As Ministers Today

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+