ಮಹಾದಾಯಿ ಸಮಸ್ಯೆ ಇತ್ಯರ್ಥಕ್ಕೆ ಪರಿಕ್ಕರ್ ಗೆ ಸಿಎಂ ಪತ್ರ

Subscribe to Oneindia Kannada

ಬೆಂಗಳೂರು, ಜುಲೈ 12: ಮಹಾದಾಯಿ ಸಮಸ್ಯೆ ಇತ್ಯರ್ಥ ಸಲುವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮಹಾದಾಯಿ ನದಿ ಕೊಳ್ಳದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವ ಸಂಬಂಧ ಅವರು ಪತ್ರ ಬರೆದಿದ್ದಾರೆ.

ಈ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವ ಸಭೆ ನಡೆಸುವ ಪ್ರಸ್ತಾಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮುಂದೆ ಇಡಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳು ಜೂನ್ 30ರಂದು ಫಡ್ನಾವೀಸ್ ಗೆ ಪತ್ರ ಬರೆದಿದ್ದರು. ಇದಕ್ಕೆ ಫಡ್ನಾವೀಸ್ ಸಕಾರಾತ್ಮಕವಾಗಿ ಸ್ಪಂದಿಸಿ ಜುಲೈ 7ರಂದು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.

ಏನಿದು ಕಳಸಾ-ಬಂಡೂರಿ ಯೋಜನೆ?

CM Siddaramaiah wrote a letter to Goa CM to resolve Mahadayi problem

ಇದೀಗ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಫಡ್ನಾವೀಸ್ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಭೆಯ ಸಾಂಭಾವ್ಯ ದಿನಾಂಕವನ್ನು ನೀಡುವಂತೆ ಕೋರಿದ್ದನ್ನು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ

ಸ್ನೇಹ ಮತ್ತು ಸೌಹಾರ್ದ ನೆಲೆಯಲ್ಲಿ ಮಹಾದಾಯಿ ಸಮಸ್ಯೆ ಇತ್ಯರ್ಥ ಪಡಿಸುವುದಕ್ಕೆ ದೇವೇಂದ್ರ ಫಡ್ನಾವೀಸ್ ಒಪ್ಪಿಗೆ ನೀಡಿದ್ದಾರೆ. ನೀವು ಇದಕ್ಕೆ ಸ್ಪಂದಿಸಿದರೆ ನಾವು ನಮ್ಮಲ್ಲೇ ಸನುಕೂಲಕರವಾದ ದಿನ ಸಭೆಯನ್ನು ನಡೆಸಬಹುದು ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnatak chief minister Siddaramaiah wrote letter to Goa CM Manohar Parrikar to participate in the meeting of Chief Ministers of Mahadayi basin to resolve Mahadayi problem.
Please Wait while comments are loading...