ಕರ್ನಾಟಕ ಸಿಎಂ vs ಉತ್ತರಪ್ರದೇಶ ಸಿಎಂ ಟ್ವಿಟ್ಟರ್ ವಾರ್

Posted By:
Subscribe to Oneindia Kannada

ಬೆಂಗಳೂರು, ಜನವರಿ 08: ವಿಜಯನಗರದ ಎಂ.ಸಿ. ಲೇಔಟ್ ನಲ್ಲಿರುವ ಬಿಜಿಎಸ್ ಮೈದಾನದಲ್ಲಿ ಭಾನುವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ಕರ್ನಾಟಕ ಪರಿವರ್ತನಾ ಯಾತ್ರೆ ಯಶಸ್ವಿಯಾಗಿದ್ದು, ಬಿಜೆಪಿ ನಾಯಕರ ಉತ್ಸಾಹ ಹೆಚ್ಚಿಸಿದೆ. ಆದರೆ, ಬಿಜೆಪಿ ನಾಯಕರ ಉತ್ಸಾಹಕ್ಕೆ ಭಂಗ ಬರುವಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಕೆಣಕಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌‌ ಅವರು ಬೆಂಗಳೂರಿಗೆ ಭೇಟಿ ನೀಡಿದ ಬೆನ್ನಲ್ಲೇ, ಯೋಗಿ ಆದಿತ್ಯನಾಥ್ ಅವರನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ್ಸು ಎಚ್ಚೆತ್ತುಕೊಂಡು, ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿ ಟ್ವೀಟ್ ದಾಳಿ ಮಾಡಿದರು.

ಕರ್ನಾಟಕಕ್ಕೆ ಸ್ವಾಗತ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ವಿಟ್ಟರ್ ಮೂಲಕ ಸ್ವಾಗತಿಸಿದ್ದ ಸಿಎಂ ಸಿದ್ದರಾಮಯ್ಯಗೆ ಟ್ವಿಟ್ಟರ್ ಮೂಲಕವೇ ಪ್ರತಿ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಅವರ ಟ್ವೀಟ್, ಅದಕ್ಕೆ ಬಂದ ಪ್ರತಿ ಟ್ವೀಟ್ ಗಳ ವಿವರ ಮುಂದಿದೆ..

ಹಿಂದೂತ್ವವಾದ ಮಂಡಿಸಿದ ಯೋಗಿ ಆದಿತ್ಯನಾಥ್

ಹಿಂದೂತ್ವವಾದ ಮಂಡಿಸಿದ ಯೋಗಿ ಆದಿತ್ಯನಾಥ್

ವಿಜಯನಗರದಲ್ಲಿ ಭಾನುವಾರದಂದು ನಡೆದ ಜನ ಪರಿವರ್ತನಾ ಸಮಾವೇಶದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಹಿಂದೂತ್ವವಾದವನ್ನು ಮಂಡಿಸಿದರು. ಗೋಹತ್ಯೆ ನಿಷೇಧ, ಮೌಢ್ಯ ಪ್ರತಿಬಂಧಕ ಕಾಯ್ದೆ, ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಹೇಳಿದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಉತ್ತರಿಸಿದರು.

ಟ್ವೀಟ್ ಮಾಡಿ, ಯೋಗಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

ನಮ್ಮ ರಾಜ್ಯಕ್ಕೆ ನಿಮಗೆ ಸ್ವಾಗತ, ನಮ್ಮಿಂದ ನೀವು ಕಲಿಯುವುದು ಸಾಕಷ್ಟಿದೆ. ನೀವು ಇಲ್ಲಿ ಬಂದಾಗ ದಯವಿಟ್ಟು ಇಂದಿರಾ ಕ್ಯಾಂಟೀನ್ ಹಾಗೂ ರೇಷನ್ ಶಾಪ್ ಭೇಟಿ ಕೊಡಿ. ಇದರಿಂದ ಆಹಾರ ಕ್ಷಾಮ, ಸಾವು ನೋವಿನ ಬಗ್ಗೆ ಮುಂದೆ ನಿಮ್ಮ ರಾಜ್ಯದಲ್ಲಿ ಮಾತನಾಡಲು ನಿಮಗೆ ಸಹಾಯವಾಗುತ್ತದೆ ಎಂದು ಟ್ವೀಟ್ ಮಾಡಿದರು.

ವಿಜಯನಗರದ ಪರಿವರ್ತನಾ ಯಾತ್ರೆಯಲ್ಲಿ ಮೋದಿ ಮೋಡಿ!

ಯೋಗಿ ಆದಿತ್ಯನಾಥ್ ಟ್ವೀಟ್ ಉತ್ತರ

ನನ್ನನ್ನು ಸ್ವಾಗತಿಸಿದ್ದಕ್ಕೆ ಸಿದ್ದರಾಮಯ್ಯ ಅವರೇ ನಿಮಗೆ ಧನ್ಯವಾದಗಳು. ಕರ್ನಾಟಕದಲ್ಲಿ ನಿಮ್ಮ ಆಡಳಿತ ಅವಧಿಯಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಳಲ್ಪಟ್ಟೆ. ದಕ್ಷ, ಪ್ರಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸುದ್ದಿಯಿದೆ. ನಿಮ್ಮ ಮೈತ್ರಿ ಪಕ್ಷಗಳು ಉತ್ತರಪ್ರದೇಶದಲ್ಲಿ ಮಾಡಿ ಹೋಗಿರುವ ಅನಾಹುತಗಳು, ಕಾನೂನು ಬಾಹಿರ ಕೆಲಸಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಯುಪಿ ಸಿಎಂ ಆಗಿ ನಾನು ದುಡಿಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಯೋಗಿ ಆದಿತ್ಯನಾಥ್ ರವರು ಬೆಂಗಳೂರಿಗೆ ಬಂದಿದ್ದೇ ತಡ, ಹಿಂದೂ ದ್ವೇಷ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧಾರ್ಮಿಕತೆಯ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ! ಇನ್ನೆರಡು ಬಾರಿ ಯೋಗಿ ಕರ್ನಾಟಕಕ್ಕೆ ಬಂದರೆ @siddaramaiah ನವರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರೂ ಆಶ್ಚರ್ಯವಿಲ್ಲ! ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಈ ದೇಶದ ದೊಡ್ಡ ಸಮಸ್ಯೆ : ಯೋಗಿ ಆದಿತ್ಯನಾಥ್

ಗೋಮಾಂಸ ನಿಷೇಧದ ಬಗ್ಗೆ ದಿನೇಶ್ ಗುಂಡೂರಾವ್

ಯೋಗಿ, ನೀವು ನಿಮ್ಮ ಉತ್ತರಪ್ರದೇಶದಲ್ಲಿ ಏಕೆ ಬೀಫ್ ನಿಷೇಧ ಹೇರಬಾರದು. ನಿಮ್ಮ ರಾಜ್ಯವೇ ಅತಿ ಹೆಚ್ಚು ಗೋಮಾಂಸ ಸೇವನೆ ಹಾಗೂ ರಫ್ತು ಮಾಡುತ್ತಿರುವುದು. ಜಾತಿ, ಮತ, ಆಹಾರ ಪದ್ಧತಿ, ವಸ್ತ್ರ ಸಂಹಿತೆ ಮೂಲಕ ಭಾರತವನ್ನು ವಿಭಜಿಸುವುದನ್ನು ನಿಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಪ್ರಶ್ನೆ ಎಸೆದ ಸಿದ್ದರಾಮಯ್ಯ

ಕೆಜೆಪಿಯಲ್ಲಿದ್ದಾಗ ಒಂದು ರೀತಿ, ಬಿಜೆಪಿಗೆ ಬಂದ ಮೇಲೆ ಒಂದು ರೀತಿ ಮುಂದೆ ಯಾರಿಗೆ ಜೈ ಎನ್ನುತ್ತೀರಿ ಯಡಿಯೂರಪ್ಪ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ.

ಯೋಗಿ - ನಿರ್ಮಲಾನಂದ ಹೋಲಿಕೆ ಮಾಡಿದ ಡಿವಿಎಸ್

ಯೋಗಿ ಆದಿತ್ಯನಾಥ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಗಳಿಬ್ಬರು ನಾಥ ಪಂಥದವರು, ಒಕ್ಕಲಿಗರಿಗೂ ಯೋಗಿಗೂ ಆಪ್ತ ನಂಟಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿದರು. ಆದರೆ, ಇದರಿಂದ ಸಾರ್ವಜನಿಕರು ಕೆರಳಿ, ಒಕ್ಕಲಿಗರಿಗೂ ಯೋಗಿಗೂ ಯಾವುದೇ ನಂಟಿಲ್ಲ, ನಿರ್ಮಲಾನಂದ ಸ್ವಾಮೀಜಿಗೆ ಹೋಲಿಸಬೇಡಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh Chief Minister Yogi Adityanath and Karnataka Chief Minister Siddaramaiah engaged in a war of words on Twitter, hours after Adityanath entered Bengaluru with a massive rally in the poll-bound state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ