ಇಂದಿನಿಂದ ಸಿಎಂ ದುಬೈ, ಯುಎಇ ಪ್ರವಾಸ

ಇಂದು (ಏ. 27) ದುಬೈಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಆನಂತರ ಯುಎಇಗೂ ಭೇಟಿ, ಆನಂತರ ಏ. 30ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಬೆಂಗಳೂರು, ಏಪ್ರಿಲ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ದುಬೈ ಹಾಗೂ ಯುಎಇ ಪ್ರವಾಸಕ್ಕೆ ತೆರಳಲಿದ್ದಾರೆ.

ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಪ್ರವಾಸದ ವಿವರಗಳನ್ನು ಬಿಡುಗಡೆ ಮಾಡಿದೆ.

CM Siddaramaiah's Dubai, UAE tour begins on April 27

ಇಂದು (ಏ. 27) ದುಬೈಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಏ. 28ರಂದು ಮಧ್ಯಾಹ್ನ ದುಬೈನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ಎನ್ ಆರ್ ಐ ಫೋರಂ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ದುಬೈನ ಭಾರತೀಯ ಧೂತಾವಾಸ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಏಪ್ರಿಲ್ 29ರಂದು ಸಿದ್ದರಾಮಯ್ಯ ಅವರು, ಅಬುಧಾಬಿಯಲ್ಲಿರುವ ಶೇಖ್ ಝಾಯೇದ್ ಮಸೀದಿಗೆ ಭೇಟಿ ನೀಡಲಿದ್ದಾರೆ.

ಅದು ಪುನಃ ದುಬೈಗೆ ಆಗಮಿಸಲಿರುವ ಅವರು, ಅಲ್ಲಿನ ಫಾರ್ಚ್ಯೂನ್ ಪಾರ್ಕ್ ಹೋಟೆಲ್ ನಲ್ಲಿ ಕರ್ನಾಟಕ ಮೂಲದ ಉದ್ಯಮಿಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅದರ ಮರುದಿನ (ಏಪ್ರಿಲ್ 30) ಅವರು ಬೆಂಗಳೂರಿಗೆ ಮರಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+