ಚಳಿಗಾಲ ಅಧಿವೇಶನ 2024: ಉತ್ತರ ಕರ್ನಾಟಕದವರ ವಲಸೆ ತಪ್ಪಿಸಬೇಕು: ಸಿದ್ದರಾಮಯ್ಯ ಅಪ್ಡೇಟ್ಸ್

ಬೆಳಗಾವಿ, ಡಿಸೆಂಬರ್ 08: ಕರ್ನಾಟಕ ಚಳಿಗಾಲ ಅಧಿವೇಶವನು ಇದೇ ಡಿಸೆಂಬರ್ 9ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಯಾಗಬೇಕು ಎನ್ನುವ ಆಗ್ರಹ ಮೊದಲನಿಂದಲೂ ಇದೆ. ಇದೀಗ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಅಪ್ಡೇಟ್ಸ್ ನೀಡಿದ್ದಾರೆ.

ನಾಳೆ ಸೋಮವಾರದಿಂದ (ಡಿಸೆಂಬರ್‌ 9)ದಿಂದ ಆರಂಭವಾಗುವ ಚಳಿಗಾಲದ ಕಲಾಪದಲ್ಲಿ ಉತ್ತರ ಕರ್ನಾಟಕದ ಬಗ್ಗೆ, ಇಲ್ಲಿನ ಸಮಸ್ಯೆ ಹಾಗೂ ಅಭಿವೃದ್ಧಿಯ ಬಗ್ಗೆ ಹೆಚ್ಚು ಚರ್ಚೆಯಗಬೇಕು ಎನ್ನುವ ಒತ್ತಾಯ ಇದೆ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಿ ಜನ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ನಗರಗಳಿಗೆ ಹಾಗೂ ಉತ್ತರ ಭಾರತದ ಕಡೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದರು. ಈ ಮೂಲಕ ಉತ್ತರ ಕರ್ನಾಟಕಕ್ಕೆ ಜ್ವಲಂತ ಸಮಸ್ಯೆಗಳು ಈ ಬಾರಿಯ ಸದನದಲ್ಲಿ ಹೆಚ್ಚು ಸ್ಥಾನ ಪಡೆಯಲಿವೆಯೇ ಎಂದು ಕಾದು ನೋಡಬೇಕಿದೆ.

CM Siddaramaiah Response about Uttara Karnataka Issues Discussion in Winter Session 2024

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಪ್ರಸ್ತಾಪಿಸಬೇಕು. ಹೆಚ್ಚು ಚರ್ಚೆ ಆಗಬೇಕೆಂಬುದು ನಮ್ಮ ಉದ್ದೇಶವು ಹೌದು. ಸೋಮವಾರದಿಂ ಎರಡು ವಾರ ಕಲಾಪ ನಡೆಯಲಿದೆ. ವಿರೋಧ ಪಕ್ಷಗಳು ಅಧಿವೇಶನ ನಡೆಸುವುದಕ್ಕೆ ಹೇಗೆ, ಸಹಕಾರ ಹೇಗೆ ನೀಡುತ್ತವೆ ಎಂದು ನೋಡಬೇಕಿದೆ ಎಂದು ಸಿಎಂ ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಂಕಷ್ಟ ಇದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಾರೆ. ಆದರೆ, ಬೇರೆ ರಾಜ್ಯಗಳಲ್ಲಿ ಬಿಜೆಪಿ ಅವರೇ ಗ್ಯಾರಂಟಿ ಘೋಷಣೆ ಮಾಡುತ್ತಿದ್ದು, ಅವರದ್ಧ ದ್ವಂಧ್ವ ನೀತಿ ಎಂದು ಕಿಡಿ ಕಾರಿದರು. ಇದರ ಮೂಲಕವೇ ಬಿಜೆಪಿ ಅವರಿಗೆ ಸ್ಪಷ್ಟ ನಿಲುವು ಇಲ್ಲ ಬರೀ ಸುಳ್ಳು ಅಪ್ರಚಾರ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅಧಿವೇಶನ ಮೊದಲೇ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆಬಜೆಟ್ ನಲ್ಲಿ ಘೋಷಣೆ ಮಾಡಿರುವಯಾವ ಕೆಲಸ ದುಡ್ಡು ಇಲ್ಲದೆ ನಿಂತಿದಿದೆ ಬಿಜೆಪಿ ಅವರು ಸಾಬೀತು ಮಾಡಲಿ ಎಂದು ಬಹಿರಂಗವಾಗಿ ಸವಾಲೆಸೆದರು.

ಬಳ್ಳಾರಿಯಲ್ಲಿ ಬಾಣಂತಿಯ ಸಾವು ಪ್ರಕರಣ ನಿಜವಾಗಿದೆ. ಸಭೆ ಮಾಡಿ ಕಳಪೆ ಔಷಧಿ ಪೂರೈಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ, ಆ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜೊತೆಗೆ ಪೂರೈಕೆದಾರರನ್ನು ವಿಚಾರಣೆ ನಡೆಸಲು ಹೇಳಲಾಗಿದೆ. ಜೊತೆಗೆ ಡ್ರಗ್ ಕಂಟ್ರೋಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಳ್ಳಾರಿ ಆಸ್ಪತ್ರೆ ಪ್ರಕರಣ ಕುರಿತು ಅವರು ಸ್ಪಷ್ಟಪಡಿಸಿದರು.

ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಮಿಟಿ ರಚನೆ ಮಾಡಲಾಗಿದೆ. ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೆವೆ. ಒಂದು ವೇಳೆ ಔಷಧೀಯ ತಯಾರಿಕೆ ಸಂಸ್ಥೆ ಕಳಪೆ ಔಷಧಿ ಸರಬರಾಜು ಮಾಡಿರುವುದು ನಿಜವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾವನಪ್ಪಿರುವ ಬಾಣಂತಿಯರ ಕುಟುಂಬಕ್ಕೆ 05 ಲಕ್ಷ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+