ಸ್ವೀಡನ್ ಗೆ ಬರುವಂತೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ

ಬೆಂಗಳೂರು, ಜು. 2 : ತಮ್ಮ ದೇಶಕ್ಕೆ ಅಧ್ಯಯನ ಪ್ರವಾಸಕ್ಕೆ ಬರುವಂತೆ ಸ್ಪೀಡನ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದೆ. ಕೋಲಾರ ಬಳಿ ಸ್ವೀಡನ್ ಹೊಂದಿರುವ ಟ್ರಕ್ ಮತ್ತು ಬಸ್ ನಿರ್ಮಾಣ ಘಟಕಕ್ಕೆ ಅಗತ್ಯ ಸೌಲಭ್ಯ ನೀಡುವ ಭರವಸೆವನ್ನು ಸಿದ್ದರಾಮಯ್ಯ ನಿಯೋಗಕ್ಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಕಚೇರಿಯಲ್ಲಿ ಹೆರಾಲ್ಡ್ ಸ್ಯಾಡ್ ಬರ್ಗ್ ನೇತೃತ್ವದ ಸ್ವೀಡನ್ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಆ 17 ರಿಂದ 21ರವರೆಗೆ ಅಧ್ಯಯನ ಪ್ರವಾಸಕ್ಕೆ ಆಗಮಿಸುವಂತೆ ನಿಯೋಗ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದೆ.

ಕಸದ ಸಮಸ್ಯೆ ನಿವಾರಣೆ ಮುಂತಾದ ವಿಚಾರಗಳ ಕುರಿತಾಗಿ ಅಧ್ಯಯನ ನಡೆಸಲು ಸ್ವೀಡನ್ ಗೆ ಬರುವಂತೆ ನಿಯೋಗ ಆಹ್ವಾನ ನೀಡಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಡನ್ ನಿಯೋಗದ ಭೇಟಿಯ ನಂತರ ಹೇಳಿಕೆ ನೀಡಿದ್ದಾರೆ.

ಸ್ವೀಡನ್ ನಿಯೋಗಕ್ಕೆ ಫೆಬ್ರವರಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದೇನೆ. ಸ್ಪೀಡನ್ ಕಂಪನಿಗಳು ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಲು ಎಫ್ ಡಿಐ ಮೂಲಕ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Sweden

ಭೇಟಿಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಕೋಲಾರ ಬಳಿಯಲ್ಲಿರುವ ಸ್ವೀಡನ್ ಟ್ರಕ್ ಮತ್ತು ಬಸ್ ನಿರ್ಮಾಣ ಘಟಕಕ್ಕೆ ಅಗತ್ಯ ಸೌಲಭ್ಯ ನೀಡುವ ಭರವಸೆವನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+