ಚಿಕ್ಕಮಗಳೂರು ಜಿಲ್ಲೆಯಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆ

Posted By:
Subscribe to Oneindia Kannada

ಚಿಕ್ಕಮಗಳೂರು, ಜನವರಿ 05: ನಿನ್ನೆ ಹಾಸನ ಜಿಲ್ಲೆಯಲ್ಲಿ 1000 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಲಿದ್ದಾರೆ.

ನವಕರ್ನಾಟಕ ನಿರ್ಮಾಣ ಯಾತ್ರೆ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಡೂರು, ತರಿಕೆರೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿರುವ ಸಿದ್ದರಾಮಯ್ಯ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಹಾಸನ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ

ಬೆಳಿಗ್ಗೆ 10.30ಕ್ಕೆ ಮೂಡಿಗೆರೆ, 2.30ಕ್ಕೆ ಕಡೂರು ಮತ್ತು ಕೊನೆಗೆ 4 ಗಂಟೆಗೆ ತರಿಕೆರೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಕಾಂಗ್ರೆಸ್ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಮನಗರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

ಸಿದ್ದರಾಮಯ್ಯ ಅವರು ಮುಖ್ಯವಾಗಿ ಕೋಮುವಾದದ ವಿರುದ್ಧ ಮಾತನಾಡಿಲಿದ್ದಾರೆ ಎನ್ನಲಾಗಿದೆ ಜೊತೆಗೆ ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಬಗ್ಗೆ ಜನರ ಗಮನ ಸೆಳೆಯಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ...

ನಬಾರ್ಡ್ ಯೋಜನೆಯಲ್ಲಿ ಚೆಕ್ ಡ್ಯಾಂ

ನಬಾರ್ಡ್ ಯೋಜನೆಯಲ್ಲಿ ಚೆಕ್ ಡ್ಯಾಂ

ಚಿಕ್ಕಮಗಳೂರು ತಾಲ್ಲೂಕಿನ ಹಿರೇ ಕೊಳಲೆ ಹಾಗೂ ಚೆಕ್ ಡ್ಯಾಂಗಳ ನಿರ್ಮಾಣಕ್ಕಾಗಿ ನಬಾರ್ಡ್ ಯೋಜನೆಯಡಿ ರೂ.171 ಲಕ್ಷ ಒದಗಿಸಲಾಗಿದೆ. ರಾಜ್ಯ ವಲಯದಲ್ಲಿ 1532 ಲಕ್ಷ ಅನುದಾನವನ್ನು ಒದಗಿಸಲಾಗಿದೆ. ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ 25 ಕೋಟಿ ರೂಗಳ ಅನುದಾನ ಒದಗಿಸಲಾಗಿದೆ.

ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಹಣ

ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಹಣ

ಬಾಳೆಹೊನ್ನೂರು ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ (ಎನ್.ಹೆಚ್. 27 ಭದ್ರಾ ನದಿಗೆ) ರೂ. 1279 ಲಕ್ಷ ಮಂಜೂರು ಮಾಡಲಾಗಿದೆ. ಕೊಪ್ಪ ತಾಲ್ಲೂಕು ಬಾಳಗಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣವು ಆಗಿದ್ದಯ ಇದಕ್ಕಾಗಿ 200 ಲಕ್ಷ. ರೂಗಳನ್ನು ವೆಚ್ಚ ಮಾಡಲಾಗಿದೆ.

ನೂತನ ಕಾರಾಗೃಹ ಮಂಜೂರು

ನೂತನ ಕಾರಾಗೃಹ ಮಂಜೂರು

ಚಿಕ್ಕಮಗಳೂರು ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗಿರುತ್ತದ್ದು ರಕ್ತ ವಿದಳನ ಘಟಕವೂ ಸಹ ಮಂಜೂರಾಗಿರುತ್ತದೆ. ತರೀಕೆರೆಗೆ ನೂತನ ಕಾರಗೃಹವನ್ನು ಮಂಜೂರು ಮಾಡಲಾಗಿದ್ದು, ರೂ. 50 ಕೋಟಿ ಮೌಲ್ಯದ ವಿಶೇಷ ರಸ್ತೆ ಪ್ಯಾಕೇಜ್ ಘೋಷಿಸಲಾಗಿದೆ.

ಗರ್ಭಿಣಿ, ಬಣಂತಿಯರಿಗೆ ಪೌಷ್ಠಿಕ ಆಹಾರ

ಗರ್ಭಿಣಿ, ಬಣಂತಿಯರಿಗೆ ಪೌಷ್ಠಿಕ ಆಹಾರ

ಜಿಲ್ಲೆಗೆ ನಾಲ್ಕು ವರ್ಷಗಳಲ್ಲಿ 163 ಅಂಬೇಡ್ಕರ್ ಭವನ, 76 ಬಾಬು ಜಗಜೀವನರಾಮ್ ಭವನಗಳು ಮಂಜೂರು ಆಗಿದ್ದು, ಈ ಭವನಗಳ ನಿರ್ಮಾಣಕ್ಕೆ ರೂ. 23 ಕೋಟಿ ಅನುದಾನ ಒದಗಿಸಲಾಗಿದೆ. ಮಾತೃಪೂರ್ಣ ಯೋಜನೆಯಡಿಯಲ್ಲಿ 13,920 ಫಲಾನುಭವಿಗಳು ಅಂಗನವಾಡಿಯಲ್ಲಿ ನೊಂದಾಯಿಸಿಕೊಂಡಿದ್ದು, ಇವರಲ್ಲಿ 8626 ಗರ್ಬಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಹಾಜರಾಗಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಿದ್ದಾರೆ.

1285 ಕೃಷಿ ಹೊಂಡ

1285 ಕೃಷಿ ಹೊಂಡ

16 ರಿಂದ 18 ವರ್ಷ ವಯಸ್ಸಿನ 1808 ಕಿಶೋರಿಯರನ್ನು ವೃತ್ತಿಪರ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಗುರುತಿಸಲಾಗಿದೆ. ಇದಕ್ಕಾಗಿ ರೂ. 246.42 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆ ಅಡಿ ಜಿಲ್ಲೆಗೆ 1285 ಕೃಷಿ ಹೊಂಡಗಳನ್ನು 28 ಪಾಲಿ ಹೌಸ್‍ಗಳ ನಿರ್ಮಾಣಕ್ಕೆ ರೂ. 1077.13 ಲಕ್ಷ ವೆಚ್ಚ ಮಾಡಲಾಗಿದೆ.

ಪಡಿತರ ಚೀಟಿಗೆ 1600 ಕೋಟಿ

ಪಡಿತರ ಚೀಟಿಗೆ 1600 ಕೋಟಿ

50 ರಿಂದ 100 ಹಾಸಿಗೆಗಳಿಗೆ ಉನ್ನತೀಕರಿಸಿದ ಕೊಪ್ಪ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನು ಕಟ್ಟಡಕ್ಕೆ ರೂ. 313 ಲಕ್ಷ. ವೆಚ್ಚ ಮಾಡಲಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಎ.ಎ.ವೈ, ಬಿ.ಪಿ.ಎಲ್, ಎ.ಪಿ.ಎಲ್ ಸೇರಿದಂತೆ ಒಟ್ಟು 2,86,474 ಪಡಿತರ ಚೀಟಿದಾರರಿದ್ದು, ಇದಕ್ಕಾಗಿ ಒಟ್ಟು ರೂ. 1600 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. 12,597 ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲಾಗಿದೆ.

ನೀರಾವರಿ ಯೋಜನೆಗೆ 12 ಕೋಟಿ

ನೀರಾವರಿ ಯೋಜನೆಗೆ 12 ಕೋಟಿ

ಜಿಲ್ಲೆಯಲ್ಲಿ ಹನಿ ನೀರಾವರಿಗಾಗಿ ರೂ. 784.14 ಲಕ್ಷ ವೆಚ್ಚ ಮಾಡಲಾಗಿದ್ದು ನೀರಾವರಿ ಅಭಿವೃದ್ಧಿಗೆ ಮಹತ್ತರವಾದ ಕ್ರಮಗಳನ್ನ ಕೈಗೊಳ್ಳಲಾಗಿದೆ. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಇದಾಗಿದ್ದು ಈ ಯೋಜನೆಗೆ ರೂ. 12 ಕೋಟಿ ಅನುದಾನ ಒದಗಿಸಲಾಗಿದೆ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah's Nava Karnataka Nirmana Yathre reached Chikmagalur district today. He is inaugurating crores worth development programs here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ