ಲೋಕಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗಾಗಿ ಸಚಿವರೊಂದಿಗೆ ಸಿಎಂ ರಾತ್ರೋರಾತ್ರಿ ಸಭೆ: ಇಲ್ಲಿದೆ ಪಟ್ಟಿ

ಬೆಂಗಳೂರು, ಫೆಬ್ರವರಿ 22: ಲೋಕಸಭಾ ಚುನಾವಣೆಗೆ ಕೆಲವು ದಿನಗಳ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಸಿದ್ದತೆ ನಡೆಸಿದ್ದು,ಬಿಜೆಪಿ ಹಾಗೂ ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಗಳಿಗಾಗಿ ಕಸರತ್ತು ಮುಂದುವರೆಸಿವೆ.

ಹೌದು, ಲೋಕಸಭಾ ಚುಣಾವಣೆಗಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಚುನಾವಣಾ ಚಾಣಾಕ್ಷ ಅಮಿತ್‌ ಶಾ ಜೊತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ರೆ, ಇತ್ತ ನಿನ್ನೆ( ಬುಧವಾರ) ರಾತ್ರೋರಾತ್ರಿ ಖಾಸಗಿ ಹೋಟೆಲೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರ ಜೊತೆಗೆ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

CM Siddaramaiah Held Midnight Meeting with Ministers to Choose Suitable Candidates for the LS Poll

ಕಾಂಗ್ರೆಸ್‌ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ?

ಬೆಳಗಾವಿ : ಸತೀಶ್ ಜಾರಕಿಹೊಳಿ ಅಥವಾ ಜಾರಕಿಹೊಳಿ ಪುತ್ರಿ

ಚಾಮರಾಜನಗರ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್‌ ಬೋಸ್‌

ಚಿಕ್ಕೋಡಿ : ಲಕ್ಷ್ಮಣ್ ಸವದಿ ಪುತ್ರ ಅಥವಾ ಗಣೇಶ್ ಹುಕ್ಕೇರಿ ಶಿಫಾರಸ್ಸು ಸಾಧ್ಯತೆ

ಹಾವೇರಿ: ಹೆಚ್​ಕೆ ಪಾಟೀಲ್

ಮಂಗಳೂರು: ಯು ಟಿ ಖಾದರ್‌ ಅಥವಾ ಮಿಥುನ್‌ ರೈ

ಬಾಗಲಕೋಟೆ : ಸರ್ ನಾಯಕ್, ವೀಣಾ ಕಾಶಪ್ಪನವರ್ ಅಥವಾ ಸಂಯುಕ್ತ ಶಿವಾನಂದ ಪಾಟೀಲ್

ಕಲಬುರ್ಗಿ : ಮಲ್ಲಿಕಾರ್ಜುನ್ ಖರ್ಗೆ ಅಳಿಯ, ರಾಧಾಕೃಷ್ಣ ಹೆಸರು ಮುಂಚೂಣಿಯಲ್ಲಿ

ಉತ್ತರಕನ್ನಡ: ಆರ್​ವಿ ದೇಶಪಾಂಡೆ

ಮೈಸೂರು :ಲಕ್ಷ್ಮಣ್ ಹಾಗೂ ಶುಶ್ರುತ್ ಗೌಡ, ಯತೀಂದ್ರ ಸಿದ್ದರಾಮಯ್ಯ

ಬಳ್ಳಾರಿ: ಸೌಪರ್ಣಿಕಾ ತುಕಾರಾಂ ಅಥವಾ ವಿ.ಎಸ್‌.ಉಗ್ರಪ್ಪ

ಬೆಂಗಳೂರು ಉತ್ತರ : ಸಚಿವ ಕೃಷ್ಣಭೈರೇಗೌಡ

CM Siddaramaiah Held Midnight Meeting with Ministers to Choose Suitable Candidates for the LS Poll

ಬೆಂಗಳೂರು ದಕ್ಷಿಣ: ಪ್ರಿಯಾಕೃಷ್ಣ

ಹಾಸನ : ಮಾಜಿ ಸಚಿವ ಬಿ.ಶಿವರಾಂ

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅಥವಾ ವಿನಯ್ ಕುಮಾರ್‌

ಚಿತ್ರದುರ್ಗ: ಎಚ್.ಆಂಜನೇಯ

ತುಮಕೂರು: ಮುದ್ದೇಹನುಮೇಗೌಡ

ಶಿವಮೊಗ್ಗ : ನಟ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌

ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ

ಬೆಂಗಳೂರು ಗ್ರಾಮಾಂತರ: ಹಾಲಿ ಸದಸ್ಯ ಡಿ.ಕೆ.ಸುರೇಶ್‌

ಬೆಂಗಳೂರು ಕೇಂದ್ರ: ಸಚಿವ ಕೆ.ಜೆ.ಜಾರ್ಜ್‌, ಬಿ ಕೆ ಹರಿಪ್ರಸಾದ್

ಧಾರವಾಡ: ಶಿವಲೀಲಾ ಕುಲಕರ್ಣಿ

ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ

ಬೀದರ್‌: ಸಾಗರ್‌ ಖಂಡ್ರೆ

ಕೋಲಾರ: ಕೆ.ಎಚ್ ಮುನಿಯಪ್ಪ

ರಾಯಚೂರು : ಬಿವಿ ನಾಯಕ್

ದಕ್ಷಿಣ ಕನ್ನಡ: ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ

ಮಂಡ್ಯ : ಸ್ಟಾರ್‌ ಚಂದ್ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+