ಸಿದ್ದರಾಮಯ್ಯ ಮೇಲೆ 300 ಕೋಟಿ ರು ಭೂಹಗರಣ ಹೊರಿಸಿದ ಬಿಜೆಪಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 11 : ಬಿಜೆಪಿ ಎಂಎಲ್ಸಿ ಬಿ.ಜೆ ಪುಟ್ಟಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನ ವಿರುದ್ಧ ಮಾಡಿದ ಭೂಹಗರಣ ಆರೋಪ ಠುಸ್ ಆದ ಬೆನ್ನಲ್ಲಿಯೇ ಇದೀಗ ಮತ್ತೊಂದು ಭೂಹಗರಣದ ಪ್ರಕರಣವನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.

ಯತೀಂದ್ರನ ಮೇಲೆ ಆರೋಪ ಹೊರಿಸಿದರೆ ತಕ್ಕ ಶಾಸ್ತಿ ಮಾಡ್ತೀನಿ: ಸಿಎಂ

300 ಕೋಟಿ ರು. ಭೂಹಗರಣ ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಿಸಿದ್ದಾರೆ. ಬೆಂಗಳೂರಿನ ಭೂಪಸಂದ್ರದಲ್ಲಿ ಸರ್ವೇ ನಂಬರ್ 20ರಲ್ಲಿ 6.26 ಎರಕೆಯನ್ನು ಜಮೀನನ್ನು ಸಿದ್ದರಾಮಯ್ಯ ಅವರು 2016ರ ಜೂನ್ ನಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಗರಣ ಸಂಬಂಧ ಎಸಿಬಿಗೆ ದೂರು ನೀಡುವುದಾಗಿ ಪುಟ್ಟಸ್ವಾಮಿ ತಿಳಿಸಿದ್ದಾರೆ.

CM Siddaramaiah denotified Rs 300 Cr worth land violating SC guidelines, alleges BJP

ಸಿದ್ದರಾಮಯ್ಯ ನಾನು ನ್ಯಾಯಯುತವಾಗಿ ಇದ್ದೇನೆ ಎಂದೆಲ್ಲಾ ಹೇಳುತ್ತಾರೆ. ಆದರೆ, ಅವರು ಮಾಡಿರುವ ಹಗರಣ ಅವರು ಎಷ್ಟು ನ್ಯಾಯಯುತವಾಗಿದ್ದಾರೆ ಎನ್ನುವುದು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ನನ್ನ ಹೆಸರಿಗೆ ಕಳಂಕ ತರಲು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಂದೆ ಅದೇ ಅವರಿಗೆ ತಿರುಗುಬಾಣವಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಮಗನ ಒಡೆತನದ ಸಂಸ್ಥೆಗೆ ಭೂಮಿ ನೀಡಿದ್ದಾರೆ ಎಂಬ ಬಿಜೆ ಪುಟ್ಟಸ್ವಾಮಿ ಅವರ ಆರೋಪವನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ ಅವರು ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state BJP launched a scathing attack against Chief Minister Siddaramaiah for denotifyng Rs 300 Crore worth land violating Supreme Court guidelines in Bhoopasandra village of Bengaluru North district. BJP MLC B J Puttaswamy, BJP spokesperson G Madhusudan and MLA Ravi Subramanya released the documents to the media to justify their claim.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ