NWKRTC ಗೆ 700 ಹೊಸ ಬಸ್: ಉತ್ತರ ಕರ್ನಾಟಕಕ್ಕೆ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ...New Busstand

ಬೆಳಗಾವಿ, ಅಕ್ಟೋಬರ್ 05: ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ 10,000 ಹೊಸ‌ ನೇಮಕಾತಿ ಮಾಡಿದ್ದೇವೆ. ಇದೀಗ ಈ ಭಾಗಕ್ಕೆ 700 ಹೊಸ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರಯಾಣಿಕರಿಗೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50ರಷ್ಟು ಅನುದಾನದ ಅಡಿಯಲ್ಲಿ ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ವಾಯವ್ಯ ಸಾರಿಗೆ ಸಂಸ್ಥೆಗೆ 700 ಹೊಸ ಬಸ್ಸುಗಳು ಹಾಗೂ ಬೆಳಗಾವಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಘೋಷಿಸಿದರು.

CM siddaramaiah Announced 700 New Buses for NWKRTC 100 EV Buses for Belagavi City

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಒಟ್ಟು 49.20 ಕೋಟಿ ರೂಪಾಯಿ ವೆಚ್ಚವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಯಪಾಲಿನ ಅನುದಾನ ಒದಗಿಸಿವೆ. ಒಟ್ಟು ವಿಸ್ತೀರ್ಣ : 02 ಎಕರೆ 19 ಗುಂಟೆ ಪ್ರದೇಶದಲ್ಲಿ ತಲೆ ಎತ್ತಿರುವ ನಿಲ್ದಾಣ ಇಂದು ಲೋಕಾರ್ಪಗೊಂಡಿತು.

ಬೆಳಗಾವಿಯಲ್ಲಿ 5 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ, ರೂ.24 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಘಟಕ ಸ್ಥಾಪನೆ ಮಾಡಲಾಗಿದೆ. ಇದಕ್ಕೂ ಸಹ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಶೇಕಡಾ 50ರ ಅನುದಾನ ನೀಡಲಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ ನೇಮಕಾತಿ ನಡೆದಿದೆ. 215 ಕ್ಕೂ ಹೆಚ್ಚು ಪ್ರಶಸ್ತಿ‌ ಪುರಸ್ಕಾರಗಳು ದೊರೆತಿವೆ. ಶಕ್ತಿ‌ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು, ಒಟ್ಟು 565.48 ಕೋಟಿ ಮಹಿಳಾ ಟಿಕೇಟ್ ವಿತರಣೆಯಾಗಿದೆ. ಇದಕ್ಕೆ ರೂ.14456 ಕೋಟಿ ವೆಚ್ಚವಾಗಿದೆ ಎಂದು ಸಾರಿಗೆ ಇಲಾಖೆಯಲ್ಲಿನ ಅಭಿವೃದ್ಧಿ, ಸರ್ಕಾರದ ಸಾಧನೆ ಬಗ್ಗೆ ಅವರು ವಿವರಿಸಿದರು.

ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯು ಎರಡು ವಿಶ್ಚ ದಾಖಲೆಗಳಲ್ಲಿ ಗೋಲ್ಡನ್‌ ‌ಬುಕ್‌ ಆಪ್ ವರ್ಲ್ಡ್ ರೆಕಾರ್ಡ್ಸ್ ( Golden Book of World Records) ಮತ್ತು ಇಂಟರ್ ನ್ಯಾಶನಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ( International Book of World Records ) ಗಳಲ್ಲಿ ಸೇರ್ಪಡೆಯಾಗಿದೆ. ಇದು ಶಕ್ತಿ‌ ಯೋಜನೆಯ ಯಶಸ್ಸು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ನೂತನ ಬಸ್‌ ನಿಲ್ದಾಣದಲ್ಲಿ ಏನೇನಿವೆ?

ಬಸ್ ನಿಲ್ದಾಣದಲ್ಲಿ 28 ಅಂಕಣಗಳು,1365 ಸಾರಿಗೆ ಸರತಿಗಳು ನಿರ್ಗಮನ, 56 ಬಡಾವಣೆಗಳು ಒಳಗೊಂಡಂತೆ ಉಪನಗರದ 87 ಸ್ಥಳಗಳಿಗೆ ಒಟ್ಟು 143 ಸ್ಥಳಗಳಿಗೆ 21 ಕಿಮೀ ವ್ಯಾಪ್ತಿಯಲ್ಲಿ ಬಸ್ ಸೌಲಭ್ಯ, ಪ್ರತಿ ದಿನ ಸುಮಾರು 96 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಬಹುದಾದಷ್ಟು ವಿಶಾಲವಾಗಿದೆ. ಅಗತ್ಯ ಎಲ್ಲ ಮೂಲಸೌಕರ್ಯ ಹೊಂದಿದೆ.

ನೂತನ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ತಳಮಹಡಿ ಮತ್ತು ಐದು(5) ಮಹಡಿ, ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ಶಿಶುಗಳಿಗೆ ಹಾಲುಣಿಸುವ ಪ್ರತ್ಯೇಕ ಕೊಠಡಿ, ವಿಕಲಚೇತನರ ಪ್ರತ್ಯೇಕ ರಾಂಪ್ ವ್ಯವಸ್ಥೆ, ಪೊಲೀಸ್ ಚೌಕಿ, ವಿಭಾಗೀಯ ಕಚೇರಿ, , ಸಬ್-ವೇ ಸಂಪರ್ಕ, ಲಿಫ್ಟ್, ಎಸ್ಕಲೇಟರ್ ಸೌಲಭ್ಯ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+