ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆ ಜಾರ್ಜ್ ತಲೆದಂಡ: ತೆರೆಯ ಹಿಂದಿನ ರಾಜಕೀಯ ನಾಟಕಗಳು

By ಬಾಲರಾಜ್ ತಂತ್ರಿ
|
Google Oneindia Kannada News

ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಮೊದಲು ಟವೆಲ್ ಕೊಡವಿಕೊಂಡಿದ್ದು ಸಿದ್ದರಾಮಯ್ಯ. ರಾಜಕೀಯವಾಗಿ ವಿರೋಧಿಗಳ ತಪ್ಪನ್ನು ಎಳೆ ಎಳೆಯಾಗಿ ಜನರ ಮುಂದಿಡುವ ಶಕ್ತಿಯಿರುವುದು ಬಿಎಸ್ವೈ ಮತ್ತು ಎಚ್ಡಿಕೆಗೆ ಎನ್ನುವುದು ಸಿಎಂಗೆ ಗೊತ್ತಿರದ ವಿಚಾರವೇನೂ ಅಲ್ಲ.

ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎನ್ನುವ ಶೀತಲ ಸಮರಕ್ಕೆ, ಸಂದರ್ಭಕ್ಕೆ ತಕ್ಕಂತೇ ತಾತ್ಕಾಲಿಕ ಪರಿಹಾರ ಹೈಕಮಾಂಡ್ ಕಂಡುಕೊಳ್ಳುತ್ತಿದ್ದರೂ ಅದು ಯಾವತ್ತಿದ್ದರೂ ಪಕ್ಷದ ಪಾಲಿಗೆ ಸೆರಗಿನ ಕೆಂಡ ಎನ್ನುವುದು ವರಿಷ್ಠರಿಗೂ ಗೊತ್ತಿರುವ ವಾಸ್ತವತೆ. (ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು)

ಈ ಹಿಂದೆ ಕೂಡಾ ಕೆಲವೊಂದು ವಿಚಾರದಲ್ಲಿ ತಮ್ಮ ಬೆಂಬಲಕ್ಕೆ ಯಾರೂ ನಿಲ್ಲುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದು ಗೌಪ್ಯವಾಗಿ ಉಳಿದಿಲ್ಲ. ಪಕ್ಷದ ಸಭೆಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ್ದೂ ಉಂಟು, ಆದರೂ ಆಪ್ತ ವಲಯದವರನ್ನು ಬಿಟ್ಟರೆ ಸಿಎಂ ಬೆನ್ನಿಗೆ ನಿಲ್ಲುತ್ತಿರುವವರ ಸಂಖ್ಯೆಯಲ್ಲಿ ಮಹತ್ತರ ಬದಲಾವಣೆಯಾಗಿಲ್ಲ.

ಕೆಜೆ ಜಾರ್ಜ್ ವಿಚಾರದಲ್ಲೂ ಇದು ಹೊರತಾಗಿರಲಿಲ್ಲ. ಆಪ್ತ ವಲಯದಲ್ಲಿರುವವರನ್ನು ಬಿಟ್ಟರೆ ಸಿದ್ದರಾಮಯ್ಯ ಬೆನ್ನಿಗೆ ಹಿರಿಯ ಸಹದ್ಯೋಗಿಗಳು ನಿಲ್ಲಲಿಲ್ಲ. ಸಂಪುಟ ಸಭೆಯಲ್ಲಿ ಜಾರ್ಜ್ ಬೆಂಬಲಕ್ಕೆ ನಿಲ್ಲುವಂತೆ ಫರ್ಮಾನು ಹೊರಡಿಸಿದರೂ ಉಪಯೋಗಕ್ಕೆ ಬರಲಿಲ್ಲ. (ಜಾರ್ಜ್ ರಾಜೀನಾಮೆ, ಕನ್ನಡ ಪತ್ರಿಕೆಗಳ ಹಣೆಬರಹಗಳು)

ಸದನದೊಳಗೆ ಮತ್ತು ಹೊರಗೆ ಬಹುತೇಕ ಹಿರಿಯ ಸಚಿವರು ನಿರ್ಲಿಪ್ತರಾಗಿ ಉಳಿದರು. ಜುಲೈ ಏಳರಂದು ಗಣಪತಿ ಆತ್ಮಹತ್ಯೆ ಪ್ರಕರಣ ಹೊರಬೀಳುತ್ತಿದ್ದಂತೇ, ಹೆಚ್ಚಿನ ಸಚಿವರು ಜಾರ್ಜ್ ರಾಜೀನಾಮೆ ಪಡೆಯುವುದೇ ಸೂಕ್ತ ಎನ್ನುವ ಸಲಹೆಯನ್ನು ಸಿಎಂಗೆ ನೀಡಿದ್ದರು ಎನ್ನಲಾಗುತ್ತಿದೆ. ಮುಂದೆ ಓದಿ..

ಅರ್ಕಾವಟಿ ಡಿನೋಟಿಫಿಕೇಶನ್

ಅರ್ಕಾವಟಿ ಡಿನೋಟಿಫಿಕೇಶನ್

ಅಂದು ಅರ್ಕಾವಟಿ ಡಿನೋಟಿಫಿಕೇಶನ್ ವಿಚಾರದಲ್ಲಿ ಸಿದ್ದರಾಮಯ್ಯ ತೀವ್ರ ಒತ್ತಡದಲ್ಲಿದ್ದಾಗ ಸಿಎಂ ಬೆನ್ನಿಗೆ ನಿಂತವರು ಜಾರ್ಜ್. ಅಂದಿನ ಉಪಕಾರಕ್ಕೆ ಪ್ರತ್ಯುಪಕಾರ ಸಲ್ಲಿಸಲೋ ಎನ್ನುವಂತೆ ಜಾರ್ಜ್ ರಕ್ಷಣೆಗೆ ನೇರವಾಗಿ ಸಿದ್ದರಾಮಯ್ಯ ನಿಂತಿದ್ದರು.

ಸಿಎಂ ನಿಲುವು ಮತ್ತು ಧೋರಣೆ

ಸಿಎಂ ನಿಲುವು ಮತ್ತು ಧೋರಣೆ

ಜುಲೈ ಏಳರಿಂದ ಜುಲೈ 18ರ ವರೆಗೆ ದಿನದಿಂದ ದಿನಕ್ಕೆ ಪಕ್ಷದ ವರ್ಚಸ್ಸು ಹಾಳಾಗುತ್ತಾ ಬಂತು. ಮುಖ್ಯಮಂತ್ರಿಗಳು ಹೇಳಿದರೆ ರಾಜೀನಾಮೆ ನೀಡುತ್ತೇನೆ ಎನ್ನುವ ಜಾರ್ಜ್ ಹೇಳಿಕೆಯಿಂದ ಸಿಎಂ ನಿಲುವು ಮತ್ತು ಧೋರಣೆಯೇ ಚರ್ಚೆಯ ವಿಷಯವಾಯಿತು.

ಹೈಕಮಾಂಡ್ ಮತ್ತು ಸಿದ್ದರಾಮಯ್ಯ

ಹೈಕಮಾಂಡ್ ಮತ್ತು ಸಿದ್ದರಾಮಯ್ಯ

ಜಾರ್ಜ್ ರಾಜೀನಾಮೆ ನೀಡಲು ಸಿದ್ದರಿದ್ದರೂ ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯುತ್ತಿಲ್ಲ. ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಇಬ್ಬರೂ ಜಾರ್ಜ್ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಸಂದೇಶ ರಾಜ್ಯದ ಜನತೆಗೆ ರವಾನೆಯಾಯಿತು. ಆದರೆ ಇದ್ಯಾವುದಕ್ಕೂ ಮುಖ್ಯಮಂತ್ರಿಗಳು ತಲೆ ಕೆಡೆಸಿಕೊಳ್ಳಲಿಲ್ಲ.

ಹಿರಿಯ ಸಚಿವರ ಸಭೆ

ಹಿರಿಯ ಸಚಿವರ ಸಭೆ

ಸದನ ನಡೆಯುತ್ತಿರುವಾಗಲೇ ಹೊರಬಿದ್ದ ಮಡಿಕೇರಿ ಜೆಎಂಎಫ್‌ಸಿ ಕೋರ್ಟಿನ ಆದೇಶದಿಂದ ತಳಮಳಕ್ಕೊಳಗಾದ ಮುಖ್ಯಮಂತ್ರಿಗಳು ತುರ್ತಾಗಿ ಹಿರಿಯ ಸಚಿವರ ಸಭೆಯನ್ನು ಕರೆದರು. ಪರಮೇಶ್ವರ್, ಟಿ ಬಿ ಜಯಚಂದ್ರ, ಆರ್ ವಿ ದೇಶಪಾಂಡೆ, ಮಹಾದೇವ ಪ್ರಸಾದ್, ರಮೇಶ್ ಕುಮಾರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಹಿರಿಯ ಸಚಿವರ ಒತ್ತಡ

ಹಿರಿಯ ಸಚಿವರ ಒತ್ತಡ

ಎಲ್ಲಾ ಸಚಿವರು ಜಾರ್ಜ್ ರಾಜೀನಾಮೆ ಪಡೆಯುವುದೇ ಸೂಕ್ತ ಎನ್ನುವ ಒತ್ತಡ ಹೇರಿದ್ದರಿಂದ ಸಿದ್ದರಾಮಯ್ಯ ಬೇರೆ ದಾರಿಯಿಲ್ಲದೇ ಹೈಕಮಾಂಡ್ ಅನುಮತಿ ಪಡೆದು ಜಾರ್ಜ್ ಗೆ ರಾಜೀನಾಮೆ ನೀಡುವಂತೆ ಸೂಚಿಸಿದರು.
ಕಣ್ಣೀರು ಇಡುತ್ತಲೇ ರಾಜೀನಾಮೆ ನೀಡಿದ ಜಾರ್ಜ್ ಅವರನ್ನು ಸಮಧಾನಿಸುತ್ತಾ, ನಿರ್ದೋಷಿಯಾಗಿ ನ್ಯಾಯಾಲಯ ತೀರ್ಪು ನೀಡಿದ ತಕ್ಷಣ ಮತ್ತೆ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಈ ಸಮಯದಲ್ಲಿ ಅಭಯ ನೀಡಿದರು ಎನ್ನುವ ಮಾಹಿತಿಯಿದೆ.

ಪಕ್ಷದ ವರ್ಚಸ್ಸಿಗೆ ಧಕ್ಕೆ

ಪಕ್ಷದ ವರ್ಚಸ್ಸಿಗೆ ಧಕ್ಕೆ

ಜಾರ್ಜ್ ವಿಚಾರದಲ್ಲಿನ ಸರಕಾರದ ರಕ್ಷಣಾತ್ಮಕ ಧೋರಣೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದಂತೂ ಹೌದು. ರಾಜಕೀಯವಾಗಿ ಪ್ರಬುದ್ದರಾಗಿರುವ ಸಿದ್ದರಾಮಯ್ಯಗೆ, ಪಕ್ಷದ ನಿರ್ಣಾಯಕ ಘಟ್ಟದಲ್ಲಿ ತಾನು ಏಕಾಂಗಿಯೇ ಎನ್ನುವ ಸಂದೇಹ ಕಾಡಿದರೂ ಕಾಡುತ್ತಿರಬಹುದು..

English summary
Sources in Karnataka Congress says, most of the senior ministers not supported CM Siddaramaiah in the K J George issue and CM accepted George resignation under extreme pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X