4 ದಿನಗಳ ನಂತರ ಒಬ್ಬರ ಮುಖ ಒಬ್ಬರು ನೋಡಿಕೊಂಡ ಸಿದ್ದು, ಡಿಕೆಶಿ
ನವದೆಹಲಿ, ಮೇ 19: ಚುನಾವಣಾ ಪ್ರಚಾರದ ವೇಳೆ ಹಲವು ಬಾರಿ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೆಹಲಿಯಲ್ಲಿದ್ದರೂ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡಿರಲಿಲ್ಲ.
ಇದಕ್ಕೆ ಮುಖ್ಯಮಂತ್ರಿ ಎನ್ನುವ ಕನಸಿನ ಗಾದಿ. ಇಬ್ಬರು ನಾಯಕರು ನಾಲ್ಕು ದಿನ ರಾಷ್ಟ್ರ ರಾಜಧಾನಿಯಲ್ಲಿದ್ದರೂ ಮುಖಾಮುಖಿಯಾಗಿರಲಿಲ್ಲ. ಸಿದ್ದರಾಮಯ್ಯ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದರೆ, ಡಿಕೆಶಿ ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿದ್ದರು.

ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಅವರನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಹಲವು ಬಾರಿ ಭೇಟಿಯಾಗಿದ್ದರು ಕೂಡಾ, ಅದೆಲ್ಲಾ ಪ್ರತ್ಯೇಕವಾಗಿ ಮೀಟಿಂಗ್ ನಡೆಸಿಕೊಂಡು ಬಂದಿದ್ದರು. ಮುಖ್ಯಮಂತ್ರಿ ಹುದ್ದೆಗೆ ನಾನಾ, ನೀನಾ ಎನ್ನುವ ಆಂತರಿಕ ಜಟಾಪಟಿ ಇದ್ದಿದ್ದರಿಂದ, ಇಬ್ಬರನ್ನು ಒಟ್ಟಿಗೆ ಕೂರಿಸಿ ಮೀಟಿಂಗ್ ಮಾಡುವ ಸಾಹಸಕ್ಕೆ ಹೈಕಮಾಂಡ್ ಕೂಡಾ ತಲೆಹಾಕಿರಲಿಲ್ಲ.
#WATCH | Congress leader Siddaramaiah arrives at the residence of party leader KC Venugopal in Delhi pic.twitter.com/a0QGVafORH
— ANI (@ANI) May 18, 2023
ಈಗ, ಮುಂದಿನ ಸಿಎಂ ಯಾರು ಎನ್ನುವ ಗೊಂದಲ ದೂರವಾಗಿದೆ. ಬ್ರೇಕ್‌ಫಾಸ್ಟ್ ಎನ್ನುವ ಹೆಸರಿನಲ್ಲಿ ರಾಜಕೀಯ ಮೀಟಿಂಗ್ ನಡೆದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿದ್ದಾರೆ.

ಈಗಾಗಲೇ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ವೇಣುಗೋಪಾಲ್ ಮನೆಗೆ ಆಗಮಿಸಿದ್ದಾರೆ. ಅಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಮುಖಾಮುಖಿಯಾಗಿದ್ದಾರೆ. "ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ದ" ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರದಲ್ಲಿ ಬಹಳಷ್ಟು ಗೊಂದಲಗಳಿದ್ದವು. ಕೊನೆಗೆ, ಸಿದ್ದರಾಮಯ್ಯ ಸಿಎಂ ಮತ್ತು ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಎನ್ನುವ ನಿರ್ಧಾರಕ್ಕೆ ಎಐಸಿಸಿ ಬಂದಿದೆ. ಈ ಬಗ್ಗೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ.












Click it and Unblock the Notifications