ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?
Recommended Video

ಬೆಂಗಳೂರು, ಮಾರ್ಚ್ 25: ನಿಖಿಲ್ ಕುಮಾರಸ್ವಾಮಿ ಅವರು ಇಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಆಸ್ತಿ ವಿವರ ಸೇರಿದಂತೆ ಇನ್ನೂ ಕೆಲವು ವಿವರಗಳನ್ನು ಅವರು ಆಯೋಗಕ್ಕೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ, ಅವರು ಪೆರಿಯಾರ್ ವಿವಿಯಿಂದ ಬಿಬಿಎ ಪದವಿ ಪಡೆದಿದ್ದಾರೆ. ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಹಣಕಾಸು ವರ್ಷದಲ್ಲಿ 71.47 ಲಕ್ಷ ಆದಾಯ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಅವರ ಒಟ್ಟು ಆದಾಯ 1.06 ಕೋಟಿ ರೂಪಾಯಿಗಳು.
ನಿಖಿಲ್ ಕುಮಾರಸ್ವಾಮಿ ಅವರ ವಿವಿದ ಬ್ಯಾಂಕುಗಳ ಖಾತೆಯಲ್ಲಿ 1.09 ಕೋಟಿ ರೂಪಾಯಿ ಹಣವಿದೆ. ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅವರು 76 ಲಕ್ಷ ರೂಪಾಯಿ ಬಂಡವಾಳ ತೊಡಗಿಸಿದ್ದಾರೆ.

ಅಪ್ಪನಿಗೇ ಒಂದು ಕೋಟಿ ಸಾಲ ಕೊಟ್ಟಿರುವ ನಿಖಿಲ್
ನಿಖಿಲ್ ಕುಮಾರಸ್ವಾಮಿ ಅವರು 10.57 ಕೋಟಿ ಹಣವನ್ನು ಸಾಲವಾಗಿ ಹಾಗೂ ಮುಂಗಡವಾಗಿ ವಿವಿಧ ವ್ಯಕ್ತಿಗಳು, ಸಂಸ್ಥೆಗಳಿಗೆ ನೀಡಿದ್ದಾರೆ. ಬನಶ್ರೀ ಗಾರ್ಡನ್ಸ್‌ಗೆ 60 ಲಕ್ಷ, ಎಚ್.ಜಿ.ಶ್ರೀನಿವಾಸ ಎಂಬುವರಿಗೆ 1.27 ಕೋಟಿ, ಎಚ್‌ಆರ್‌ಎಂ ಸಾದಿಕುಲ್ಲಾ ಎಂಬುವರಿಗೆ 25 ಲಕ್ಷ, ತಂದೆ ಕುಮಾರಸ್ವಾಮಿ 1.10 ಕೋಟಿ, ಕಸ್ತೂರಿ ಮೀಡಿಯಾಕ್ಕೆ 1.74 ಕೋಟಿ ನೀಡಿದ್ದಾರೆ. ಸೈಟ್ ಒಂದರ ಖರೀದಿಗೆ 2.45 ಕೋಟಿ ಮತ್ತು ಲ್ಯಾಂಬರ್ಗಿನಿ ಕಾರು ಖರೀದಿಗೆ 4.15 ಕೋಟಿ ಮುಂಗಡ ನೀಡಿದ್ದಾರೆ.

ನಿಖಿಲ್ ಬಳಿ ಇರುವ ಕಾರುಗಳಷ್ಟು?
ನಿಖಿಲ್ ಕುಮಾರಸ್ವಾಮಿ ಅವರ ಬಳಿ 3.34 ಕೋಟಿ ಮೌಲ್ಯದ ರೇಂಜ್ ರೋವರ್ ಕಾರಿದೆ. ಜೊತೆಗೆ ಒಂದು 23.03 ಲಕ್ಷ ಮೌಲ್ಯದ ವ್ಯಾನಿಟಿ ವ್ಯಾನ್ ಇದೆ. ಈಗ ಲೆಂಬೋರ್ಗಿನಿ ಕಾರಿಗೆ ಮುಂಗಡ ನೀಡಿದ್ದಾರೆ. ನಿಖಿಲ್ ಅವರ ಬಳಿ 4.55 ಲಕ್ಷ ಮೌಲ್ಯದ ಚಿನ್ನದ ಆಭರಣಗಳಿವೆ. ಇತರ ಮೂಲಗಳಿಂದ ಅವರಿಗೆ 1.60 ಕೋಟಿ ನಿಯಮಿತವಾಗಿ ಆದಾಯ ಬರುತ್ತಿದೆ.

ನಿಖಿಲ್ ಹೆಸರಿಗಿರುವ ಸ್ಥಿರಾಸ್ತಿ ಎಷ್ಟು?
ನಿಖಿಲ್ ಕುಮಾರಸ್ವಾಮಿ ಬಳಿ 28 ಕೋಟಿ ಮೌಲ್ಯದ ಕೃಷಿಯೇತರ ಆಸ್ತಿ ಇದೆ. ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ ಯಾವುದೇ ಕೃಷಿ ಜಮೀನಿಲ್ಲ. ನಿಖಿಲ್ ಕುಮಾರಸ್ವಾಮಿ ಅವರ ವೈಯಕ್ತಿಕ ಸಾಲವೂ ಹೆಚ್ಚಿಗೆ ಇದೆ. ಅವರು ಒಟ್ಟು 23.84 ಕೋಟಿ ಸಾಲ ಮಾಡಿದ್ದಾರೆ. 11.52 ಕೋಟಿ ಮುಂಗಡ ಪಡೆದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಒಟ್ಟು ಆಸ್ತಿ?
ನಿಖಿಲ್ ಕುಮಾರಸ್ವಾಮಿ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ಒಟ್ಟು ಮೌಲ್ಯ 55.57 ಕೋಟಿ ರೂಪಾಯಿಗಳಾಗುತ್ತದೆ. ನಿಖಿಲ್ ಕುಮಾರಸ್ವಾಮಿ ಅವರ ತಾಯಿಯಷ್ಟೇನೂ ಶ್ರೀಮಂತರಲ್ಲ, ಅವರ ತಾಯಿ ಅನಿತಾ ಅವರು ಕಳೆದ ಉಪಚುನಾವಣೆಗೆ ಸ್ಪರ್ಧಿಸಿದ್ದಾಗ ನೂರು ಕೋಟಿ ಆಸ್ತಿ ಲೆಕ್ಕ ತೋರಿಸಿದ್ದರು.












Click it and Unblock the Notifications