ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಮಾತಿಗೆ ನೇರವಾಗಿಯೇ ಎದಿರೇಟು ನೀಡಿದ ಕುಮಾರಸ್ವಾಮಿ

By Manjunatha
|
Google Oneindia Kannada News

Recommended Video

ಸಿದ್ದರಾಮಯ್ಯ ಮಾತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜೂನ್ 25: ಇಷ್ಟು ದಿನ ತೆರೆ ಮರೆಯಲ್ಲಿದ್ದ ಸಿದ್ದರಾಮಯ್ಯ-ಕುಮಾರಸ್ವಾಮಿ ನಡುವಿನ ಮುನಿಸು ಈಗ ಹೊರಗೆ ಕಾಣಿಸಿಕೊಂಡಿದೆ. ಪರಸ್ಪರರು ತಮ್ಮ ಭಿನ್ನಾಭಿಪ್ರಾಯಗಳನ್ನು ನೇರವಾಗಿ ಹೊರಹಾಕಿದ್ದಾರೆ.

ನಿನ್ನೆಯಷ್ಟೆ ಸಾಲಮನ್ನಾದ ಔಚಿತ್ಯದ ಬಗ್ಗೆ ಹಾಗೂ ಸಾಲಮನ್ನಾದಿಂದ ರಾಜ್ಯಕ್ಕೆ ಆಗುವ ಹೊರೆಯ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರಿಗೆ ಇಂದು ಕುಮಾರಸ್ವಾಮಿ ಅವರು ಮಾತಿನ ಛಾಟಿ ಬೀಸಿದ್ದಾರೆ.

ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..

ಸಾಲಮನ್ನಾ ಬಗ್ಗೆ ಬೇರೆಯವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ, ಸಾಲಮನ್ನಾ ಮಾಡಿದರೆ ನನಗೆ ಕಮಿಷನ್ ಸಿಗುವುದಿಲ್ಲ, ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ ಸಾಲ ಮನ್ನಾ ಮಾಡಿಯೇ ಸಿದ್ಧ ಎಂದು ಕುಮಾರಸ್ವಾಮಿ ಅಬ್ಬರಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಬ್ಯಾಂಕ್ ವ್ಯವಸ್ಥಾಪಕರು, ನಿರ್ದೇಶಕರ ಸಭೆಯಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಸಾಲಮನ್ನಾ ನಿರ್ಣಯವನ್ನು ಆಡಿಕೊಳ್ಳುತ್ತಿದ್ದಾರೆ

ಸಾಲಮನ್ನಾ ನಿರ್ಣಯವನ್ನು ಆಡಿಕೊಳ್ಳುತ್ತಿದ್ದಾರೆ

ಸಿದ್ದರಾಮಯ್ಯ ಅವರ ಹೆಸರು ಹೇಳದೆ ಅವರೆಡೆಗೆ ಗುರಿ ಇಟ್ಟು ಮಾತಿನ ಬಾಣ ಬಿಟ್ಟಿದ್ದಾರೆ. 'ಸಾಲಮನ್ನಾ ಮಾಡಲು ಹಣ ಎಲ್ಲಿಂದ ತರುತ್ತಾರೆ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ರಾಜ್ಯದ ಮೇಲೆ 53 ಸಾವಿರ ಕೋಟಿ ಹೊರೆ ಹೊರಿಸುತ್ತಿದ್ದಾರೆ ಆದರೆ ನಾನು ಸಾಲಮನ್ನಾ ಮಾಡಿಯೇ ಸಿದ್ಧ' ಎಂದು ಅವರು ಹೇಳಿದ್ದಾರೆ.

ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?

ಮುಖ್ಯಮಂತ್ರಿ ಸ್ಥಾನವನ್ನು ಭಿಕ್ಷೆ ಕೊಟ್ಟಿಲ್ಲ

ಮುಖ್ಯಮಂತ್ರಿ ಸ್ಥಾನವನ್ನು ಭಿಕ್ಷೆ ಕೊಟ್ಟಿಲ್ಲ

ನನಗೆ ಮುಖ್ಯಮಂತ್ರಿ ಸ್ಥಾನವನ್ನು ಭಿಕ್ಷೆ ಕೊಟ್ಟವರಂತೆ ಕೆಲವರು ಮಾತನಾಡುತ್ತಿದ್ದಾರೆ ಆದರೆ ನಾನು ಯಾರ ಹಂಗಿನಲ್ಲೂ ಇಲ್ಲ ಅಧಿಕಾರದಲ್ಲಿ ಇರುವಷ್ಟು ದಿನ ಬದ್ಧತೆಯಿಂದ ಕೆಲಸ ಮಾಡುತ್ತೇನೆ, ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇನೆ' ಎಂದರು.

ಸಂಪನ್ಮೂಲ ಕ್ರೂಢೀಕರಣ ಗೊತ್ತು

ಸಂಪನ್ಮೂಲ ಕ್ರೂಢೀಕರಣ ಗೊತ್ತು

ಹೊರೆ ಆಗದಂತೆ ಸಾಲಮನ್ನಾ ಮಾಡಲು ಸಂಪನ್ಮೂಲ ಕ್ರೂಢೀಕರಣ ಹೇಗೆ ಮಾಡಬೇಕು ಎಂದು ನನಗೆ ಗೊತ್ತು ಎಂದ ಕುಮಾರಸ್ವಾಮಿ ಅವರು, ಕಳೆದ ಬಾರಿಯ 20 ತಿಂಗಳ ಆಡಳಿತ ಅವಧಿಯಲ್ಲಿ ಈ ಬಗ್ಗೆ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಅವರ ಪ್ರತಿ ಮಾತು ಸಿದ್ದರಾಮಯ್ಯ ಅವರ ಪ್ರಶ್ನೆಗಳಿಗೆ ಉತ್ತರದಂತೇ ಇದ್ದವು.

ಪರಮೇಶ್ವರ್ ಅವರನ್ನು ಪ್ರಶ್ನೆ

ಪರಮೇಶ್ವರ್ ಅವರನ್ನು ಪ್ರಶ್ನೆ

ಬಜೆಟ್ ಮಂಡನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರ ಬಳಿಯೂ ನಿನ್ನೆ ಅಸಮಾಧಾನ ತೋಡಿಕೊಂಡಿದ್ದರು. ಸಾಲಮನ್ನಾವು ರಾಜ್ಯ ಬೊಕ್ಕಸಕ್ಕೆ ಹೊರೆ ಆಗಲಿದೆ. ಹೊಸ ಬಜೆಟ್ ಬದಲಿಗೆ ಕಳೆದ ಬಜೆಟ್ ಅನ್ನೇ ಮುಂದುವರೆಸಿದರೆ ಸಾಕು' ಎಂದಿದ್ದರು.

ರಾಹುಲ್ ಗಾಂಧಿ ಅನುಮತಿ ಎಂಬುದು ಸುಳ್ಳು

ರಾಹುಲ್ ಗಾಂಧಿ ಅನುಮತಿ ಎಂಬುದು ಸುಳ್ಳು

ಬಜೆಟ್ ಮಂಡಿಸಲು ರಾಹುಲ್ ಗಾಂಧಿ ಅವರ ಅನುಮತಿ ಪಡೆದಿದ್ದೇನೆ ಎಂಬುದು ಸುಳ್ಳು ಎಂದಿರುವ ಎಚ್‌ಡಿಕೆ, ಸಮನ್ವಯ ಸಮಿತಿಯಲ್ಲಿ ತೀರ್ಮಾನಿಸಿಯೇ ಈ ನಿರ್ಣಯ ಕೈಗೊಂಡಿದ್ದೇನೆ ಎಂದರು. ಆದರೆ ಈ ಸುಳ್ಳು ಸುದ್ದಿಯನ್ನು ಯಾರು, ಏಕೆ? ಹರಡುತ್ತಿದ್ದಾರೆಯೋ ಗೊತ್ತಿಲ್ಲ ಎಂದರು. ನಿನ್ನೆ ಸೋರಿಕೆ ಆಗಿರುವ ವಿಡಿಯೋ ಒಂದರಲ್ಲಿ ಸಿದ್ದರಾಮಯ್ಯ ಅವರೇ 'ರಾಹುಲ್ ಗಾಂಧಿಯನ್ನು ಭೇಟಿಯಾಗಿ ಬಜೆಟ್‌ಗೆ ಅನುಮತಿ ಪಡೆದಿದ್ದಾರೆ' ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಇದನ್ನು ನೋಡಿಕೊಂಡು ಕೂರಬೇಕೆ

ಮುಖ್ಯಮಂತ್ರಿಯಾಗಿ ಇದನ್ನು ನೋಡಿಕೊಂಡು ಕೂರಬೇಕೆ

ರಾಜಕೀಯ ಮೇಲಾಟಗಳಿಂದ ಬೇಸತ್ತಿರುವ ಮುಖ್ಯಮಂತ್ರಿಗಳು, ಅಧಿಕಾರಿ ಸ್ವೀಕಾರ ಮಾಡಿ ತಿಂಗಳಾಯಿತು ಇನ್ನೂ ಇದನ್ನೆಲ್ಲಾ ನೋಡಿಕೊಂಡು ಕೂತಿರಬೇಕೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಅಹಂಕಾರಿ ಎಂದ ಎಚ್‌ಡಿಕೆ

ಸಿದ್ದರಾಮಯ್ಯರನ್ನು ಪರೋಕ್ಷವಾಗಿ ಅಹಂಕಾರಿ ಎಂದ ಎಚ್‌ಡಿಕೆ

ನಾನು ಅಧಿಕಾರಿಗಳ ಜೊತೆಗೆ ಸೌಮ್ಯದಿಂದಲೇ ವರ್ತಿಸುತ್ತೇನೆ, ಬೇರೆಯವರ ರೀತಿ ಅಹಂಕಾರದಿಂದ ವರ್ತಿಸಿ ಬೆದರಿಸಿ ಕೆಲಸ ಮಾಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಬಜೆಟ್ ಮಂಡಿಸಿಯೇ ಸಿದ್ಧ

ಬಜೆಟ್ ಮಂಡಿಸಿಯೇ ಸಿದ್ಧ

ಕಳೆದ ಬಜೆಟ್ ಮಂಡಿಸಿದಾಗ ಇದ್ದ ಸುಮಾರು 100 ಶಾಸಕರು ಈ ಬಾರಿ ಇಲ್ಲ. ಹಳೆಯ ಬಜೆಟ್‌ ಅಂಗೀಕರಿಸಿ ಲೇಖಾನುದಾನ ಪಡೆದರೆ ಹೊಸ ಶಾಸಕರಿಗೆ ತೊಂದರೆಯಾಗುತ್ತದೆ. ಅವರೇನಾದರೂ ಹಕ್ಕುಚ್ಯುತಿ ಮಂಡಿಸಿದರೆ ಏನು ಮಾಡುವುದು ಹಾಗಾಗಿಯೇ ಹೊಸ ಬಜೆಟ್ ಅನ್ನು ಜುಲೈ 5 ರಂದು ಮಂಡಿಸುತ್ತಿದ್ದೇವೆ ಎಂದರು.

English summary
CM Kumaraswamy said he will definitely present budget on July 5. He said some one saying that how CM will arrange sources for loan waive off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X