ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರ್ತಾರಾ ಇಲ್ಲವೋ ಎಂಬ ಅನುಮಾನ; ಆದರೆ, ನಾನೇ ರಾಜ್ಯಾಧ್ಯಕ್ಷ ಎಂದ ಸಿಎಂ ಇಬ್ರಾಹಿಂ
ಬೆಂಗಳೂರು, ನವೆಂಬರ್ 20: ಲೋಕಸಭಾ ಚುನಾವಣೆ ಹಿನ್ನಲೆ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದ ಸಿಎಂ ಇಬ್ರಾಹಿಂ ಕೆಲ ದಿನಗಳ ಹಿಂದೆಯಷ್ಟೇ ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿದ್ದು, ಇದೀಗ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಹೌದು, ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಇನ್ನೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ. ಹೆಚ್ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನವಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರ್ತಾರಾ ಇಲ್ಲವೋ ಎಂಬ ಅನುಮಾನವಿದೆ. ಆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಿರ್ಧಾರ ಆಗಲಿದೆ. ನಿಮ್ಮ ಮಗನಿಗಾಗಿ ಈ ತರ ಮಾಡಿದ್ರೆ ಏನು ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿ ನಿರ್ಧಾರ ಕೈಗೊಂಡರೆ ಏನು ಮಾಡುತ್ತಾರೆ? ಒಬ್ಬ ವ್ಯಕ್ತಿ ತೆಗೆಯುತ್ತಿಲ್ಲ. ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮಾಡಿ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ? ನಿಮ್ಮ ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ಇಬ್ರಾಹಿಂ ಒತ್ತಾಯಿಸಿದ್ದಾರೆ.

ಇನ್ನೂ ನಾನು ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು ಪ್ರಧಾನಿ ಆದವ್ರು,ಪಾರ್ಟಿಯನ್ನು ನಡೆಸಿದ್ದಾರೆ. ಅವರು ತಪ್ಪುಗಳ ಮೇಲೆ ತಪ್ಪು ಮಾಡ್ತಿದ್ದಾರೆ, 2-3 ಮೆಂಬರ್ಸ್ ಸೇರಿ ನನ್ನ ತೆಗೆಯಬೇಕು. ಆದರೆ, ತಪ್ಪು ಮಾಡಿದ್ದಾರೆ. ರಾಷ್ಟ್ರೀಯ ಸಮಿತಿ ಸಭೆ ಕೆರೆದಿದರು. ನಾನು ಕರೆದಿದಲ್ಲ. ಭಾಗಹಿಸಿದ್ದೆನೆ. ದೇವೇಗೌಡರಿಗೆ ಇನ್ನೊಂದು ಚಾನ್ಸ್ ಕೊಡೋಣ ಅಂತ ಚರ್ಚೆಯಾಗಿದೆ, 9 ನೇ ತಾರೀಖಿನೊಳಗೆ ಮೈತ್ರಿ ನಿಲುವು ಬದಲಾಯಿಸಬೇಕು. ಬೆಂಗಳೂರಿನಲ್ಲಿ ಸಭೆ ಮಾಡೋ ಬಗ್ಗೆ ಚರ್ಚೆ ಮಾಡಲಾಗಿದೆ. ನನ್ನನ್ನ ತೆಗೆದಿದ್ದು ತಪ್ಪು.ಕೋರ್ಟಿಗೆ ಹೋಗುತ್ತೆನೆ ಎಂದು ಹೇಳಿದರು.
ಯಾರನ್ನು ಕೇಳದೆಯೇ ಅಮಿತ್ ಶಾ ಬಳಿ ಹೋಗಿದ್ದಕ್ಕೆ ಕುಮಾರಸ್ವಾಮಿ ಅವರನ್ನ ತಗಿಯಬೇಕಿತ್ತು. ಒಬ್ಬ ಮಗನಿಗೆ ಎಷ್ಟು ಜನರನ್ನ ಬಲಿ ಕೊಡಬೇಕು, ದಸರಾ ಆದ್ಮೆಲೆ ಕರಿತಿತಿ ಅಂದ್ರೂ ಕರೆದ್ರಾ?
ವಿಜಯೇಂಧ್ರ, ಅಶೋಕ್ ಮುಂದೆ ಕುಮಾರಸ್ವಾಮಿ ಕೈ ಕಟ್ಟಿ ನಿಲ್ಲಬೇಕಾ? ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಬಿಜೆಪಿಗರಿಗೆ ಮೈತ್ರಿ ಬೇಕಿಲ್ಲ. ಇವರೇ ಮೈಮೇಲೆ ಬಿದ್ದು ಹೋಗ್ತಿದ್ದಾರೆ. ಕುಮಾರಸ್ವಾಮಿ ಗೆದ್ದರಲ್ವಾ? 20 ಸಾವಿರ ಅಲ್ಪಸಂಖ್ಯಾತ ಮತಗಳು ಬಂದಿದೆ, ಯಾರನ್ನ ನೋಡಿ ವೋಟ್ ಹಾಕಿದ್ರು ಎಂದು ಪ್ರಶ್ನಿಸಿದ ಅವರು, ಶಿವಕುಮಾರ್ ಗೆ ಬೆಂಬಲ ಕೊಡ್ತಿನಿ ಅಂದ್ರಿ ಯಾರನ್ನ ಕೇಳಿ ಹೇಳಿದ್ರಿ? ನಿಮ್ಮದು ಪಾರ್ಟಿಯಾ ಅಥವಾ ಪ್ರೈವೇಟ್ ಕಂಪನಿಯಾ? ನೀವು ಬಿಜೆಪಿ ಗೆ ಹೋದರೆ ಅದನ್ನ ನಾವು ಒಪ್ಪಲ್ಲ. 9 ನೇ ತಾರೀಖು ನ್ಯಾಶನಲ್ ಕೌನ್ಸಿಲ್ ಮೀಟಿಂಗ್ ಇದೆ ಎಂದು ಹೇಳಿದರು.
ದತ್ತಮಾಲೆ ಹಾಕುವ ಕುರಿತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಈಗಾಗಲೇ ಮಾಲೆ ಹಾಕ್ಕೊಂಡಿದ್ದಾರೆ. ಸ್ವಾಮಿಯೇ ಅಮಿತ್ ಶಾ ಅಪ್ಪ ಅಂತ ಹೇಳ್ತಾರೆ, ಸಿಟಿ ರವಿನೂ ಫ್ರೀ ಇದ್ದಾನೆ ಕರ್ಕೊಂಡ್ ಹೋಗಿ. ನೀವು ಮಾಲೆ ಹಾಕೋದು ತಪ್ಪಲ್ಲ. ನಾನು ದೊಡ್ಡ ಹಿಂದು ಅಂತ ಅಮಿತ್ ಶಾಗೆ ತೋರಿಸಿಲು ಹೊರಟಿದ್ದಿರಿ, ದತ್ತಮಾಲೆ ಹಾಕಿಕೊಂಡು ಬಂದು ಗೆದ್ದು ಬನ್ನಿ. ಬೇಕಾದ್ರೆ ದೇವೇಗೌಡರನ್ನ ಕರೆದುಕೊಂಡು ಹೋಗಿ ಎಂದು ಸಿಎಂ ಇಬ್ರಾಹಿಂ ಹೇಳಿದರು.












Click it and Unblock the Notifications