ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಬಿಟ್ಟು ಸೂಕ್ತ ಸಲಹೆ ನೀಡಿ: ಯಡಿಯೂರಪ್ಪ

ಬೆಂಗಳೂರು, ಜುಲೈ 21: ವಿರೋಧ ಪಕ್ಷದವರು ಟೀಕೆ ಟಿಪ್ಪಣಿಯನ್ನು ಇನ್ನಾದರೂ ಕಡಿಮೆ ಮಾಡಿ ಸೂಕ್ತ ಸಲಹೆಗಳನ್ನು ನೀಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.

Recommended Video

      ಕೊರೊನ ನಿಯಂತ್ರಣಕ್ಕೆ 5T ಸೂತ್ರ ಹೇಳಿದ ಯಡಿಯೂರಪ್ಪ | Oneindia Kannada

      ಇನ್ನುಮುಂದೆ ಲಾಕ್‌ಡೌನ್ ಬಗ್ಗೆ ಲಾಕ್‌ಡೌನ್ ಬಗ್ಗೆ ಯಾವ ಅಧಿಕಾರಿಗಳೂ ಮಾತನಾಡಬಾರದು ಎಂದು ತಿಳಿಸಲಾಗಿದೆ. ಲಾಕ್‌ಡೌನ್ ಮಾತ್ರ ಕೊರೊನಾ ಸೋಂಕು ನಿವಾರಣೆಗೆ ಪರಿಹಾರವಲ್ಲ. ಹೀಗಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಲ್ಲಾ ಪ್ರತಿಪಕ್ಷ ನಾಯಕರು ಟೀಕೆ ಬಿಟ್ಟು ಸೂಕ್ತ ಸಲಹೆಯನ್ನು ನೀಡಿ ಎಂದರು.

      ಕೊವಿಡ್ ವಸ್ತುಗಳ ಖರೀದಿಯಲ್ಲಿ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ. ಏನಾದರೂ ಅನುಮಾನಗಳಿದ್ದಲ್ಲಿ ಬೇರೆಯವರ ಹತ್ತಿರ ಮಾತನಾಡುವುದಕ್ಕಿಂತ ಸರ್ಕಾರದ ಬಳಿ ಬಂದು ಕೇಳಿ ನಾವು ಉತ್ತರ ನೀಡುತ್ತೇವೆ.

      CM BSY Appealed Opposition To Reduce Criticism And Give Appropriate Advice

      ಪಕ್ಷ ಬೇಧ ಮರೆತು ನಾವೆಲ್ಲಾ ಒಟ್ಟಾಗಿ , ಒಂದಾಗಿ ಈ ಪರಿಸ್ಥಿತಿಯನ್ನು ಎದುರಿಸಬೇಕಿದೆ. ನಾವೆಲ್ಲಾ ಕೊರೊನಾ ತಡೆಯುವ ಪ್ರಯತ್ನ ಮಾಡೋಣ, ಜನರಲ್ಲಿ ಗೊಂದಲ ಆಗದಂತೆ ಹೇಳಿಕೆ ನೀಡಬೇಕು ಎಂದು ವಿಪಕ್ಷದವರಲ್ಲಿ ಕೇಳಿಕೊಂಡಿದ್ದಾರೆ.

      ಸುಮಾರು 7.25 ಕೋಟಿರೂ. ನೀಡಿ ಕಬ್ಬಿಣದ ಮಂಚ ಹಾಗೂ ಹಾಸಿಗೆಗಳನ್ನು ಕೊಳ್ಳಲಾಗಿದೆ. ಹಾಗೆಯೇ ಆ ಹಾಸಿಗೆಗಳನ್ನು ಮರು ಬಳಕೆ ಮಾಡುವುದಿಲ್ಲ ಅದನ್ನು ಸುಡಲಾಗುತ್ತದೆ. ಮಂಚವನ್ನು ಮಾತ್ರ ಮರು ಬಳಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

      ರಾಜ್ಯಾದ್ಯಂತ ಯಾವ ಜಿಲ್ಲೆಗಳಲ್ಲೂ ಲಾಕ್‌ಡೌನ್ ಇರುವುದಿಲ್ಲ. ಕಂಟೇನ್ಮೆಂಟ್ ಝೋನ್‌ಗಳಲ್ಲಿ ಮಾತ್ರ ಲಾಕ್‌ಡೌನ್ ಮುಂದುವರೆಯಲಿದೆ. ಕೊರೊನಾ ಸೋಂಕಿತರ ಜೊತೆ ಸೌಜನ್ಯದಿಂದ ವರ್ತಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

      ಈಗಾಗಲೇ ಅಗತ್ಯವಿರುವ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ, ಬೂತ್ ಮಟ್ಟದಲ್ಲಿಯೂ ವ್ಯವಸ್ಥೆ ಮಾಡುತ್ತೇವೆ. ಜನರಲ್ಲಿ ಧೈರ್ಯ ತುಂಬಿಸುವ ಕೆಲಸವನ್ನು ಮಾಧ್ಯಮ ಮಾಡಬೇಕೆಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+