ಸರ್ವರಿಗೂ ಅವಕಾಶ ನೀಡುವ ನವ ಕರ್ನಾಟಕ ನಿರ್ಮಿಸೋಣ: ಬೊಮ್ಮಾಯಿ

ಬಾಗಲಕೋಟೆ, ಫೆಬ್ರವರಿ 26: ನವ ಕರ್ನಾಟಕದಲ್ಲಿ ಎಲ್ಲರಿಗೂ ಅವಕಾಶವಿರುವ, ಸಮೃದ್ಧಿ ಇರುವ ನಾಡು ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಜಿಲ್ಲೆಯಲ್ಲಿನ ಬಂಡಿಗಣಿ ಮಠ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನ ನಿರ್ಮಾಣಕ್ಕೆ ಭಾನುವಾರ ಅಡಿಗಲ್ಲು ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

CM Bommai Called To Build A New Karnataka That Provides Opportunities For All

ಕಾಯಕ ಹಾಗೂ ಕರ್ತವ್ಯದಲ್ಲಿ ಬಹಳ ವ್ಯತ್ಯಾಸವಿದೆ. ಕರ್ತವ್ಯದಿಂದ ಬಂದ ಉತ್ಪಾದನೆಗಳನ್ನು ದಾಸೋಹ ಮೂಲಕ ನೀಡಿದಾಗ ಅದು ಕಾಯಕ ಆಗುತ್ತದೆ. ಕಾಯಕನಿಷ್ಠೆಯನ್ನು ಪರಮಪೂಜ್ಯರು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಭಕ್ತಿ ಎಂಬುವುದು ಉತ್ಕೃಷ್ಟ ಪ್ರೀತಿ. ಕರಾರುರಹಿತ ಪ್ರೀತಿ ಭಕ್ತರಲ್ಲಿ ಬಂದಾಗ ಭಗವಂತ ಆಶೀರ್ವಾದ ಮಾಡುತ್ತಾನೆ.

ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ: ಸಿಎಂ

ಶಾಸಕ ಸಿದ್ದು ಸವದಿ ಅವರ ನೇತೃತ್ವದಲ್ಲಿ ಈ ಭಾಗಲಕೋಟೆ ಜಿಲ್ಲಾ ಭಾಗದಲ್ಲಿ ಈ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳು ಆಗಿವೆ. ಎಲ್ಲ ರಂಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಮ್ಮ ಶಾಸಕರು ಮಾಡುತ್ತಿದ್ದಾರೆ ಎಂದು ಅವರ ಕಾರ್ಯ ಬೊಮ್ಮಾಯಿ ಶ್ಲಾಘಿಸಿದರು.

CM Bommai Called To Build A New Karnataka That Provides Opportunities For All

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಎಲ್ಲೆಡೆ ಅಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದುಕೊಂಡಿವೆ. ಜೊತೆಗೆ ಜೊತೆಗೆ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿಗೆ ಮಧ್ಯೆ ವಾಕ್ಸಮರ, ಆರೋಪ ಪತ್ಯಾರೋಪಗಳು ಮುಂದುವರಿದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+