ರಾಜ್ಯದ ಎಲ್ಲಾ ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು, ನವೆಂಬರ್ 9: ರಾಜ್ಯದ ಎಲ್ಲಾ ಕುರಿಗಾಹಿಗಳಿಗೆ ತಲಾ 20 ಕುರಿ ಹಾಗೂ 1 ಮೇಕೆಯನ್ನು ಉಚಿತವಾಗಿ ನೀಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ರಾಜ್ಯದ ಪ್ರತಿಯೊಬ್ಬ ಕುರಿಗಾಹಿಯು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು, ಎಲ್ಲಾ ಕುರಿಗಾಹಿಗಳಿಗೆ ತಲಾ 20 ಕುರಿ ಹಾಗೂ 1 ಮೇಕೆಯನ್ನು ಉಚಿತವಾಗಿ ನೀಡುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಈ ಯೋಜನೆಗಾಗಿ ₹324 ಕೋಟಿಯನ್ನು ಮೀಸಲಿರಿಸಲಾಗಿದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.
ಈ ಹಿಂದೆ ಹಾವೇರಿ ಜನ ಸಂಕಲ್ಪ ಯಾತ್ರೆಯಲ್ಲಿ ಈ ಬಗ್ಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಪ್ರತಿಯೊಬ್ಬ ಕುರಿಗಾರರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಮೂಲಕ ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಘೋಷಿಸಿದ್ದರು. ಅಲ್ಲದೇ ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ 324 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುರಿಗಾರರಿದ್ದಾರೆ. ಅವರಿಗೆ ಒಂದು ಒಳ್ಳೆಯ ಸುದ್ದಿ ನಾನು ಕೊಡುತ್ತಿದ್ದೇನೆ. ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದ್ದರು.

ಕುರಿಗಾಹಿಗಳ ಬದುಕು, ಬಿಸಿಲು ಮಳೆಯಲ್ಲಿ ಸಿಲುಕುಕೊಂಡು ಸಂಕಷ್ಟದಲ್ಲಿದೆ. ಅವರಿಗೆ ಸಹಾಯ ಮಾಡುವ ಕನಿಷ್ಟ ಆಲೋಚನೆ ಈ ಹಿಂದೆ ಸಿದ್ದರಾಮಯ್ಯನವರಿಗೆ ಬರಲಿಲ್ಲ. ಈಗ ನಾವು ಮಾಡುತ್ತಿದ್ದೇವೆ. ಯುವಕರು, ಬಡವರು, ರೈತರ ಪರವಾಗಿ ಕೆಲಸ ಮಾಡುವ ತಾಕತ್ತು ಬಿಜೆಪಿ ಸರ್ಕಾರಕ್ಕೆ ಮಾತ್ರ ಇದೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದರು.
ವಿಧಾನ ಸಭಾ ಚುನಾವಣೆ ಸಿದ್ಧತೆ ಎಂಬಂತೆ ನಡೆಸುತ್ತಿರುವ ಜನ ಸಂಕಲ್ಪ ಯಾತ್ರೆಯಲ್ಲಿ ನೀಡಿದ ಹೇಳಿಕೆಯನ್ನು ಸಿಎಂ ಇದೀಗ ಅಧಿಕೃತವಾಗಿ ಘೋಷಣೆ ಮಾಡಿರುವುದು ಕುರಿಗಾಹಿಗಳಿಗೆ ಸಂತಸ ತಂದಿದೆ. ಇನ್ನು ಮುಂದಿನ ತಿಂಗಳಿನಿಂದ ಆರಂಭಗೊಳ್ಳುವ ಈ ಯೋಜನೆಯ ರೂಪರೇಷೆಗಳ ಬಗ್ಗೆ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಬೇಕಿದೆ.












Click it and Unblock the Notifications