ಕಂದಾಯ ಇಲಾಖೆ ಈ ಸೇವಾ ಶುಲ್ಕಗಳ ಬಗ್ಗೆ ಸ್ಪಷ್ಟನೆ, ವಿವರ
ಬೆಂಗಳೂರು, ಜನವರಿ 02: ಕರ್ನಾಟಕದ ಕಂದಾಯ ಇಲಾಖೆ ವಿವಿಧ ಸೇವೆಗಳ ಶುಲ್ಕಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶವು 1/1/2024ರಿಂದಲೇ ಜಾರಿಗೆ ಬಂದಿದ್ದು, ಇಲಾಖೆ ಸೇವೆಗಳನ್ನು ಪಡೆಯುವಾಗ ಪರಿಷ್ಕೃತ ಶುಲ್ಕಗಳನ್ನು ಜನರು ಪಾವತಿ ಮಾಡಬೇಕಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್. ಗುರುಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂಮಾಪನ) ಆದೇಶ ಹೊರಡಿಸಿದ್ದಾರೆ. ಆದೇಶವು ಸಾರ್ವಜನಿಕರಿಂದ 11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯನ್ವಯ ಸ್ವೀಕರಿಸುವ ಶುಲ್ಕವನ್ನು ಪಾವತಿಸಿಕೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ವಿವಿಧ ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.

ಆದೇಶದ ವಿವರಗಳು; ಆದೇಶದ ಪ್ರಸ್ತಾವನೆಯಲ್ಲಿ ಮೋಜಿಣಿ ವ್ಯವಸ್ಥೆ ಅಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಕೆಳಕಂಡಂತೆ ನಿಗದಿಪಡಿಸಲಾಗಿತ್ತು ಎಂದು ಹೇಳಿದೆ.
11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ನಗರ ಪ್ರದೇಶ ರೂ. 2500 (2 ಎಕರೆ ವರೆಗೆ), 1000 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ) ಗರಿಷ್ಠ 5 ಸಾವಿರ ರೂ.ಗಳು. ಗ್ರಾಮೀಣ ಪ್ರದೇಶದಲ್ಲಿ 2000 ರೂ. (2 ಎಕರೆ ವರೆಗೆ), ರೂ. 400 (ಎರಡು ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ) 400 ರೂ. ಮತ್ತು ಗರಿಷ್ಠ 4000 ರೂ.ಗಳು.
ಹದ್ದುಬಸ್ತು ಶುಲ್ಕ ನಗರ ಪ್ರದೇಶ ರೂ. 2000 (2 ಎಕರೆ ವರೆಗೆ), 400 ರೂ. (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ) ಗರಿಷ್ಠ 4 ಸಾವಿರ ರೂ.ಗಳು. ಗರಿಷ್ಠ 4 ಸಾವಿರ ರೂ.ಗಳು. ಗ್ರಾಮೀಣ ಪ್ರದೇಶ ರೂ. 1500 (2 ಎಕರೆ ವರೆಗೆ), 300 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ) ಗರಿಷ್ಠ 3 ಸಾವಿರ ರೂ.ಗಳು.
ಸರ್ಕಾರದ ಆದೇಶದಲ್ಲಿ ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಪಾವತಿಸುತ್ತಿರುವ ಸೇವಾ ಶುಲ್ಕವನ್ನು 800 ರಿಂದ 1200 ರೂ. ಗಳಿಗೆ ಹಾಗೂ ಬಹುಮಾಲೀಕತ್ವದ ಪ್ರತಿ ಹೆಚ್ಚುವರಿ ಬ್ಲಾಕಿಗೆ ರೂ 150 ರಿಂದ 200 ರೂ.ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ. ನಂತರ ಮೋಜಿಣಿ ವ್ಯವಸ್ಥೆಯಡಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಪುನರ್ ಪರಿಷ್ಕರಣೆ ಮಾಡಿ ಈ ಕೆಳಗಿನಂತೆ ನಿಗದಿ ಮಾಡಲಾಗಿದೆ.
11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ನಗರ ಪ್ರದೇಶ ರೂ. 2500 (2 ಎಕರೆ ವರೆಗೆ), 1000 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ಗ್ರಾಮೀಣ ಪ್ರದೇಶದಲ್ಲಿ 1500 ರೂ. (2 ಎಕರೆ ವರೆಗೆ), ರೂ. 400 (ಎರಡು ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ಹದ್ದುಬಸ್ತು ನಗರ ಪ್ರದೇಶ ರೂ. 2000 (2 ಎಕರೆ ವರೆಗೆ), 400 ರೂ. (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ಗ್ರಾಮೀಣ ಪ್ರದೇಶ ರೂ. 500 (2 ಎಕರೆ ವರೆಗೆ), 300 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ನೋಟಿಸ್ ಶುಲ್ಕ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜುದಾರರಿಗೆ ರೂ. 25.
ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಜಮೀನಿನಲ್ಲಿ 'ಸ್ವಾವಲಂಬಿ ಆಪ್' ಮೂಲಕ ಸ್ವಯಂ ಸರ್ವ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿ ಅರ್ಜಿಗೆ ರೂ.1000 ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಲಾಗಿದೆ.
ಅರ್ಜಿ ಶುಲ್ಕವನ್ನು ನಿರ್ದಿಷ್ಟವಾಗಿ ಪಹಣಿ ಕಾಲಂ-3 ಅಥವಾ ಕಾಲಂ-9 ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಪಹಣಿಯ ಕಾಲಂ-3 ರಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಪ್ರಸ್ತಾವನೆ ಹೇಳಿದೆ.
ಅದೇ ರೀತಿಯಲ್ಲಿ, ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸುವ ಸಲುವಾಗಿ ಪಹಣಿಯ ಕಾಲಂ-3 ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಆದರೆ ಪಹಣಿಯ ಕಾಲಂ-3 ರ ವಿಸ್ತೀರ್ಣ ಹೆಚ್ಚಿಗೆ ಇದ್ದು ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪ್ರಸ್ತಾಪಿಸಿರುತ್ತಾರೆ.
ಜೊತೆಗೆ, ಅರ್ಜಿದಾರರು/ ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ. ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗದಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.
ಪ್ರಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ, ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.
ಆದೇಶದಲ್ಲಿ ಏನಿದೆ?; 29/12/2023ರ ಆದೇಶದಲ್ಲಿ ಸರ್ಕಾರ ಮೋಜಿಣಿ ವ್ಯವಸ್ಥೆಯಡಿ ಸ್ವೀಕೃತವಾಗುವ ವಿವಿಧ ರೀತಿಯ ಅರ್ಜಿಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಹಣಿಯ ಕಾಲಂ-9ರಲ್ಲಿನ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಮಾತ್ರ ಪಾವತಿಸಿಕೊಳ್ಳಲು ಆದೇಶಿಸಿದೆ.
11ಇ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ನಗರ ಪ್ರದೇಶ ರೂ. 2500 (2 ಎಕರೆ ವರೆಗೆ), 1000 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ಗ್ರಾಮೀಣ ಪ್ರದೇಶದಲ್ಲಿ 1500 ರೂ. (2 ಎಕರೆ ವರೆಗೆ), ರೂ. 400 (ಎರಡು ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ).
ಹದ್ದುಬಸ್ತು ನಗರ ಪ್ರದೇಶ ರೂ. 2000 (2 ಎಕರೆ ವರೆಗೆ), 400 ರೂ. (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ಗ್ರಾಮೀಣ ಪ್ರದೇಶ ರೂ. 500 (2 ಎಕರೆ ವರೆಗೆ), 300 (2 ಎಕರೆಗಿಂತ ಹೆಚ್ಚಿದ್ದಲ್ಲಿ ಭಾಗಶಃ ಎಕರೆಗೆ). ನೋಟಿಸ್ ಶುಲ್ಕ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜುದಾರರಿಗೆ ರೂ. 25. ಎಂದು ನಿಗದಿ ಮಾಡಲಾಗಿದೆ.
'ಸ್ವಾವಲಂಬಿ' ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ರೂ.1000 ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಿರುವುದನ್ನು ಮುಂದುವರೆಸಿದೆ.
-
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications