ಸ್ಥಳೀಯ ಸಂಸ್ಥೆ ಫಲಿತಾಂಶ: ಗೆದ್ದಿದ್ದು ಯಾರು? ಬಿದ್ದಿದ್ದು ಯಾರು?!
Recommended Video

ಬೆಂಗಳೂರು, ಸೆಪ್ಟೆಂಬರ್ 03: ಕುತೂಹಲ ಕೆರಳಿಸಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು(ಸೆ.03) ಹೊರಬಿದ್ದಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದರೆ, ಉಳಿದೆಡೆ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಹಲವೆಡೆ ಫಲಿತಾಂಶ ಅತಂತ್ರವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
102(ಒಟ್ಟು 105) ಸ್ಥಳೀಯ ಸಂಸ್ಥೆಗಳಲ್ಲಿ ಆಗಸ್ಟ್ 31 ರಂದು ಮತದಾನ ನಡೆದಿತ್ತು. ಶೇ.67 ರಷ್ಟು ಮತದಾನ ದಾಖಲಾಗಿತ್ತು.
ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನಲಾಗುತ್ತಿರುವ ಈ ಫಲಿತಾಂಶದ ಮೂಲಕ ಕಾಂಗ್ರೆಸ್ ಮತ್ತೆ ತನ್ನ ಪಾರುಪತ್ಯ ಸಾಧಿಸಿದೆಯಾ? ಅಥವಾ ತುಮಕೂರಿನಂಥ ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಳ್ಳುವ ಮೂಲಕ ಮೈತ್ರಿ ಸರ್ಕಾರಕ್ಕೆ ಸವಾಲೆಸೆದಿದೆಯಾ? ಟ್ವಿಟ್ಟಿಗರು ಏನಂತಾರೆ ಕೇಳಿ...
| Array |
ಕಾಂಗ್ರೆಸ್ ಗೆದ್ದಿದೆ ಎನ್ನುವವರು ಹೋಲಿಕೆ ಮಾಡಿ ನೋಡಿ!
ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎನ್ನುವವರು 2013 ರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಹೋಲಿಕೆ ಮಾಡಿ ನೋಡಿ. ಸರಾಸರಿ ಸೀಟುಗಳಲ್ಲಿ ನಾಲ್ಕು ಕಡಿಮೆಯಾಗಿದೆ. ಮತ್ತು ಬಿಜೆಪಿ 16 ರಷ್ಟು ಸೀಟುಗಳನ್ನು ಹೆಚ್ಚಿಸಿಕೊಂಡಿದೆ ಎಂದು ರಾಜು ಟ್ವೀಟ್ ಮಾಡಿದ್ದಾರೆ.
| Array |
ನಗರದ ಮತದಾರರು ಕಾಂಗ್ರೆಸ್ಸನ್ನು ಆಯ್ಕೆ ಮಾಡಿಕೊಂಡಿದ್ದಾರೆ
ನಗರದ ಮತದಾರರು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜುಮ್ಲಾ ಮತ್ತು ಅಭಿವೃದ್ಧಿಗಳಲ್ಲಿ ಜನರು ತಮ್ಮ ಮತ ಯಾವುದಕ್ಕೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದು ಶಮಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.
| Array |
ಕಾರ್ಯಕರ್ತರಿಗೆ ಧನ್ಯವಾದಗಳು
ಕಾಂಗ್ರೆಸ್ ಎಂದಿಗೂ ನಂ.1 ಪಕ್ಷ ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ, ಬೆಮಬಲಿಸಿದ, ಕಾರ್ಯಕರ್ತರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು ಎಂದಿದ್ದಾರೆ ದಿನೇಶ್ ಗುಂಡೂರಾವ್.
|
ಕಾಂಗ್ರೆಸ್ ಮೇಲೆ ನಂಬಿಕೆ
ಜನರು ಮುಂದೆಬಂದು ಕಾಂಗ್ರೆಸ್ಸಿಗೆ ಮತ ಹಾಕಿದ್ದಕ್ಕೆ ಧನ್ಯವಾದಗಳು. ಎಲ್ಲೆಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಲಾಗಿತ್ತೋ ಅಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ. ಜನರಿಗೆ ಕಾಗ್ರೆಸ್ ಮೇಲಿದ್ದ ನಂಬಿಕೆ ವಾಪಸ್ ಬಂದಿದೆ ಎಂದಿದ್ದಾರೆ ಸಯ್ಯದ್ ಮಖ್ಬೂಲ್.












Click it and Unblock the Notifications