ಕಲಬುರಗಿ : ಪ್ರಕಾಶ್ ಭೂತಿ ಎನ್‌ಕೌಂಟರ್, ಸಿಐಡಿ ತನಿಖೆ

ಕಲಬುರಗಿ, ನವೆಂಬರ್ 03 : ರೌಡಿ ಶೀಟರ್ ಪ್ರಕಾಶ್ ಭೂತಿ ಎನ್‌ಕೌಂಟರ್ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ. ಅಕ್ಟೋಬರ್ 31 ರಂದು ಅಫಜಲ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಕಾಶ್ ಭೂತಿ ಮೃತಪಟ್ಟಿದ್ದ. ಗುಂಡಿನ ಚಕಮಕಿಯಲ್ಲಿ ಪೊಲೀಸರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಶಾನ್ಯ ವಲಯ ಐಜಿಪಿ ಸುನೀಲ್‌ ಅಗರ್‌ವಾಲ್‌ ಅವರು ಮಂಗಳವಾರ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಎನ್‌ಕೌಂಟರ್ ಪ್ರಕರಣದ ಕುರಿತು ಸ್ಪಷ್ಟವಾದ ತನಿಖೆಯಾಗಬೇಕು ಎಂಬ ಕಾರಣದಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಡಿಜಿ-ಐಜಿಪಿ ಅವರ ನಿರ್ದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದ್ದಾರೆ. [ಕಲಬುರಗಿಯಲ್ಲಿ 50ಲಕ್ಷ ಮೌಲ್ಯದ ಗಾಂಜಾ ವಶ]

Sunil Agarwal

ಪೊಲೀಸರು ರೌಡಿ ಶೀಟರ್ ಪ್ರಕಾಶ್ ಭೂತಿ (27) ಅನ್ನು ಹಿಡಿಯಲು ಹೋದಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಗುಂಡೇಟಿನಿಂದ ಗಾಯಗೊಂಡ ಪೇದೆ ಜಗನ್ನಾಥ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ]

ಹೇಗಾಯಿತು ಎನ್‌ಕೌಂಟರ್? : ಅಕ್ಟೋಬರ್ 31ರ ಶನಿವಾರ ರಾತ್ರಿ ಅಫಜಲ್ಪುರ ಠಾಣೆ ಪಿಎಸ್‌ಐ ಸುರೇಶ್ ಬೆಂಡೆಗುಂಬುಳ ಮತ್ತು ಪೇದೆ ಜಗನ್ನಾಥ್ ಗಸ್ತು ತಿರುಗುತ್ತಿದ್ದಾಗ ಅಫಜಲ್ಪುರದ ಹೊರವಲಯದಲ್ಲಿ ರಸ್ತೆಬದಿಯಲ್ಲಿ ಪ್ರಕಾಶ್ ಭೂತಿ ನಿಂತಿದ್ದನ್ನು ಗಮನಿಸಿದ್ದರು.

ಅವನನ್ನು ಹಿಡಿಯಲು ಹೋದಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ತಕ್ಷಣ ಸುರೇಶ್ ಬೆಂಡೆಗುಂಬುಳ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಪ್ರಕಾಶ್ ಭೂತಿ ಮೃತಪಟ್ಟಿದ್ದ. ಈಗ ಈ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+