'169 ಬಾರಿ ರೇಪ್ ಆಗುವವರೆಗೆ ಯಾರಾದ್ರೂ ಸುಮ್ಮನಿರ್ತಾರಾ?'
ಬೆಂಗಳೂರು, ಸೆಪ್ಟೆಂಬರ್. 25: 'ಯಾರಾದರೂ 169 ಸಾರಿ ಅತ್ಯಾಚಾರ ಮಾಡುವವರೆಗೆ ಸುಮ್ಮನೆ ಇರುತ್ತಾರಾ? ಜ್ಯೋತಿಷಯನ್ನು ಕೇಳಿ ಅತ್ಯಾಚಾರ ದೂರು ದಾಖಲು ಮಾಡುತ್ತಾರಾ? ಪ್ರೇಮಲತಾ ದಿವಾಕರ್ ನೀಡಿರುವ ಹೇಳಿಕೆಗಳು ಒಂದಕ್ಕೊಂದು ಸಂಬಂಧವಿಲ್ಲ ಆದರೆ ಪ್ರಕರಣದ ಸಮಗ್ರ ತನಿಖೆಗೆ ಮಠ ಬದ್ಧವಿದೆ' ಹೀಗೆಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದವರು ರಾಘವೇಶ್ವರ ಸ್ವಾಮೀಜಿ ಪರ ವಕೀಲ ಶಂಭು ಶರ್ಮಾ.
ಗುರುವಾರ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಅವರಿಗೆ 12 ಪ್ರಶ್ನೆ ಕೇಳಿದ್ದ ಮಠ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು. ರಾಘವೇಶ್ವರ ಶ್ರೀಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಮಠದ ಭಕ್ತರು ಆರೋಪಿಸಿದರು. ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಕರಣದಲ್ಲಿ ಅನೇಕ ವಿಚಾರಗಳು ಒಂದಕ್ಕೊಂದು ಸಂಬಂಧವಿಲ್ಲದಂಥ ರೀತಿಯಲ್ಲಿರುವುದರಿಂದ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡುವುದು ಅನುಮಾನ ಎಂದು ಹೇಳಿದರು.[ರಾಘವೇಶ್ವರ ಶ್ರೀ ಪ್ರಕರಣ, ಶನಿವಾರ ಚಾರ್ಜ್ ಶೀಟ್ ಸಲ್ಲಿಕೆ]
ವಿವರಣೆ ನೀಡಿದ ಮಠದ ಪರ ವಕೀಲ ಶಂಭು ಶರ್ಮಾ, 'ಅವಿಚ್ಛಿನ್ನ ಪರಂಪರೆಯ ಮಠದ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಕ್ಕು ಸ್ಥಾಪನೆ ಮಾಡಲು ನಡೆಸಿರುವ ಹುನ್ನಾರದ ಭಾಗವೇ ಈ ಆಧಾರರಹಿತ ದೂರುಗಳು' ಎಂದು ಹೇಳಿದರು.[ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ರಾಮಚಂದ್ರಾಪುರ ಮಠದ 12 ಪ್ರಶ್ನೆಗಳು]
'ಸತ್ಯ ಎನೆಂಬುದು ಸಾಮಾನ್ಯ ಜನರಿಗೆ ತಿಳಿಯಬೇಕು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಇಂಥ ಪ್ರಕರಣದಲ್ಲಿ ಯಾಕೆ ಮೂಗು ತೂರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಅತ್ಯಾಚಾರ ನಡೆದಾಗ ಇವರು ಎಲ್ಲಿ ಹೋಗಿದ್ದರು' ಎಂದು ಪ್ರಶ್ನೆ ಮಾಡಿದರು. ಭಕ್ತರಾದ ವೈ.ವಿ.ಸುಬ್ರಹ್ಮಣ್ಯ, ಪ್ರಮೋದ್, ಈಶ್ವರಿ ಹಾಜರಿದ್ದರು. ಮಾಧ್ಯಮ ಗೋಷ್ಠಿಯ ಹೈಲೈಟ್ಸ್ ಮುಂದೆ ಓದಿ..

ದಾಖಲೆ ಬಿಡುಗಡೆ
ಪ್ರೇಮಲತಾ ದಿವಾಕರ್ ಟಿವಿ ವಾಹಿನಿಗಳಲ್ಲಿ ನೀಡಿರುವ ಹೇಳಿಕೆಗಳಲ್ಲಿನ ದ್ವಂದ್ವ. ಹೊನ್ನಾವರದ ಪೊಲೀಸರ ಎದುರು ನೀಡುರುವ ಹೇಳಿಕೆಯ ಪಂಚನಾಮೆಯನ್ನು ಮಠದ ಭಕ್ತರು ಬಿಡುಗಡೆ ಮಾಡಿದರು.

ಮಹಿಳಾ ಆಯೋಗದ ಅಧ್ಯಕ್ಷೆ ಏಕಪಕ್ಷೀಯ
ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಏಕ ಪಕ್ಷೀಯವಾಗಿ ಮಾತನಾಡುತ್ತಿದ್ದಾರೆ. ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಮಠ ಬದ್ಧ ಮತ್ತು ಸಿದ್ಧ. ಇಲ್ಲಿಯವರೆಗೂ ವಿಚಾರಣೆಗೆ ಸ್ವಾಮೀಜಿ ಸಹಕಾರವನ್ನೇ ನೀಡುತ್ತಾ ಬಂದಿದ್ದಾರೆ.

ಇ ಮೇಲ್ ಮಾಡ್ತಾರೆಯೇ?
ಅತ್ಯಾಚಾರದ ದೂರನ್ನು ಇಮೇಲ್ ನಲ್ಲಿ ಯಾರಾದರೂ ಬರೆದಿಟ್ಟುಕೊಳ್ಳುತ್ತಾರೆಯೇ? 169 ಸಾರಿ ಅತ್ಯಾಚಾರವಾಗುವವರೆಗೆ ಯಾರಾದರೂ ಸುಮ್ಮನಿರುತ್ತಾರೆಯೇ? ಒಮ್ಮೆ ಅವಮಾನಿತರಾದವರು ಮತ್ತೆ ಮಠದ ಸೇವೆಗೆ ಬರುತ್ತಾರೆಯೇ? ಎಂದು ಪ್ರೇಮಲತಾ ಆರೋಪವನ್ನು ಶಂಭು ಶರ್ಮಾ ಪ್ರಶ್ನೆ ಮಾಡಿದರು.

ಪೊಲೀಸ್ ಹೇಳಿಕೆಯಲ್ಲಿಯೇ ಇದೆ ಸತ್ಯ
'ಪ್ರೇಮಲತಾ ದಿವಾಕರ್ ಮತ್ತು ಅವರ ಪತಿ ಪೊಲೀಸರ ಎದುರು ನೀಡಿರುವ ಹೇಳಿಕೆಯಲ್ಲೇ ಸತ್ಯವಿದೆ. ಹೊನ್ನಾವರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನೀಡುರುವ ಹೇಳಿಕೆ ಪತ್ರದಲ್ಲಿಯೇ ಇದು ಷಡ್ಯಂತ್ರ ಎಂಬುದು ತಿಳಿಯುತ್ತಿದೆ'.

ಬೆದರಿಕೆ ಹಾಕುತ್ತಿಲ್ಲ
'ಸಾಕ್ಷಿಗಳಿಗೆ ಮತ್ತು ದೂರುದಾರರಿಗೆ ಮಠ ಬೆದರಿಕೆ ಹಾಕುತ್ತಿಲ್ಲ. ಅಂಥ ಕೆಲಸ ಮಾಡುವ ಅಗತ್ಯವೂ ಇಲ್ಲ. ಇಂಥ ವದಂತಿಗಳನ್ನು ಬೇಕಂತಲೇ ಹರಡಿಸಲಾಗುತ್ತಿದೆ'.

ಮಠ ಮೇಲೆ ಯಾಕೆ ದ್ವೇಷ?
'ಕೊಲ್ಲೂರಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಸ್ವಾಮೀಜಿ ತಡೆದರು. ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಕಾಯಕಲ್ಪ ನೀಡಿದರು. ಗೋ ಸಮ್ಮೇಳನ ನಡೆಸಿ ಭಾರತೀಯ ಚಿಂತನೆಗೆ ಒತ್ತು ನೀಡಿದರು. ಸ್ವಾಮೀಜಿ ಪ್ರಸಿದ್ಧಿಯನ್ನು ತಡೆಯಲೇ ಈ ಬಗೆಯ ಸುಳ್ಳು ಆಪಾದನೆ ಹುಟ್ಟಿಕೊಳ್ಳುತ್ತಿದೆ'.

ಭಕ್ತರ ಬೆಂಬಲ ಹೆಚ್ಚಾಗಿದೆ
ಮಠದ ಮೇಲೆ ಇಂಥ ಆರೋಪಗಳು ಬಂದ ಮೇಲೆ ಭಕ್ತರು ಮತ್ತಷ್ಟು ಬೆಂಬಲ ನೀಡುತ್ತಿದ್ದಾರೆ. ಎಲ್ಲ ಸಮುದಾಯ ಮಠದ ಪರವಾಗಿದ್ದು ಘನತೆಗೆ ಹತ್ತಿರುವ ಮಸಿ ಕೆಲವೇ ದಿನದಲ್ಲಿ ಅಳಿಸಲಿದೆ ಎಂದು ಶರ್ಮಾ ಹೇಳಿದರು.












Click it and Unblock the Notifications