ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ನೂರಾರು ಕನ್ನಡಿಗರ ಜೀವ ಉಳಿಸಿದ ಚೀನಾ ಕ್ಯಾಲೆಂಡರ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಚೀನಾ ಹೊಸ ವರ್ಷವು ಕೊರೊನಾದಿಂದ ಕನ್ನಡಿಗರನ್ನು ಪಾರು ಮಾಡಿದೆ.

ಚೀನಾ ಕ್ಯಾಲೆಂಡರ್‌ನ ಹೊಸ ವರ್ಷದ ರಜೆ ಹಿನ್ನೆಲೆಯಲ್ಲಿ ನಾಡಿಗಾಮಿಸಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯರು ಕಾಕತಾಳೀಯವೆಂಬಂತೆ ಕೊರೊನಾ ಆತಂಕದಿಂದ ಪಾರಾಗಿದ್ದಾರೆ. ಚೀನಾದಲ್ಲಿ ಇದುವರೆಗೆ ಕೊರೊನಾಕ್ಕೆ ತುತ್ತಾದವರ ಸಂಖ್ಯೆ 908ಕ್ಕೇರಿದೆ.

 ಚೀನಾದ ನಿಯಾನ್ ಕ್ಯಾಲೆಂಡರ್ ಪದ್ಧತಿ

ಚೀನಾದ ನಿಯಾನ್ ಕ್ಯಾಲೆಂಡರ್ ಪದ್ಧತಿ

ಚೀನಾದಲ್ಲಿ ನಿಯಾನ್ ಕ್ಯಾಲೆಂಡರ್ ಪದ್ಧತಿ ಅನುಸರಿಸಲಾಗುತ್ತಿದ್ದು, ಅದರಂತೆ ಜ.25ರಂದು ಅಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಅಲ್ಲಿ ಹೊಸ ವರ್ಷ ಆರಂಭವಾಗುವ ವಾರದ ಹಿಂದಿನಿಂದ 10 ದಿನಗಳ ಕಾಲ ದೇಶದೆಲ್ಲೆಡೆ ಸರ್ಕಾರಿ ರಜೆ ಇರುತ್ತದೆ.

ಕೊರೊನಾ ವೈರಸ್: ಚೀನಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರಕೊರೊನಾ ವೈರಸ್: ಚೀನಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ

 ಒಂದು ತಿಂಗಳು ರಜೆ ನೀಡುವ ಕ್ರಮ

ಒಂದು ತಿಂಗಳು ರಜೆ ನೀಡುವ ಕ್ರಮ

ಕೈಗಾರಿಕೆ ಮತ್ತಿತರೆ ಸಂಸ್ಥೆಗಳಲ್ಲಿ ಒಂದು ತಿಂಗಳವರೆಗೂ ರಜೆ ನೀಡಲಾಗುತ್ತದೆ. ಹೀಗಾಗಿ ರಜೆ ಘೋಷಣೆಯಾದ ಕೂಡಲೇ ಅಲ್ಲಿದ್ದ ಬಹುತೇಕ ಭಾರತೀಯರು ತಾಯ್ನಾಡಿಗೆ ಹಿಂತಿರುಗಿದ್ದರು.

 300ಕ್ಕೂ ಹೆಚ್ಚು ಮಂದಿ ಕರ್ನಾಟಕದವರು

300ಕ್ಕೂ ಹೆಚ್ಚು ಮಂದಿ ಕರ್ನಾಟಕದವರು

ಚೀನಾದಲ್ಲಿ 300ಕ್ಕೂ ಹೆಚ್ಚು ಕನ್ನಡಿಗರು ನಮ್ಮ ಸಂಪರ್ಕದಲ್ಲಿದ್ದಾರೆ. ಹೊಸ ವರ್ಷಾಚರಣೆ ರಜೆ ಘೋಷಣೆಯಾದ ಬಳಿಕ ಅರ್ಧಕ್ಕೂ ಹೆಚ್ಚು ಮಂದಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಚೀನಾದ ಶಾಂಘೈನಲ್ಲಿ ಯೋಜ ಶಿಕ್ಷಕರಾಗಿರುವ ಸುಧೀರ್ ತಿಳಿಸಿದ್ದಾರೆ.

 ಕರಾವಳಿಯ 15ಕ್ಕೂ ಹೆಚ್ಚು ಮಂದಿ ಅಲ್ಲಿದ್ದಾರೆ

ಕರಾವಳಿಯ 15ಕ್ಕೂ ಹೆಚ್ಚು ಮಂದಿ ಅಲ್ಲಿದ್ದಾರೆ

ಕರಾವಳಿಯ 15ಕ್ಕೂ ಹೆಚ್ಚು ಸ್ನೇಹಿತರು ಅಲ್ಲಿದ್ದಾರೆ. ನಾವೆಲ್ಲರೂ ತಾಯ್ನಾಡಿಗೆ ಮರಳಿದ್ದೇವೆ. ನಾವು ಭಾರತಕ್ಕೆ ಮರಳಿದ ವಾರದ ಬಳಿಕ ಚೀನಾದಲ್ಲಿ ಕೊರೊನಾ ಬಾಧೆಯ ವಿಚಾರ ನಮಗೆ ತಿಳಿದುಬಂತು. ಫೆ.4ಕ್ಕೆ ಚೀನಾಕ್ಕೆ ಮರಳಿ ಹೋಗಲು ಟಿಕೆಟ್ ಪಡೆದಿದ್ದೆ. ಈಗ ರದ್ದು ಮಾಡಿದ್ದೇನೆ. ಕೊರೊನಾ ಸಮಸ್ಯೆ ಬಗೆಹರಿದ ಬಳಿಕವೇ ಅಲ್ಲಿಗೆ ತೆರಳಲಿದ್ದೇನೆ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

English summary
China New Year has saved Kannadigas from Deadly Corona Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X