• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವದ ಹಂಗು ತೊರೆದು ಪ್ರಾಣ ಉಳಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರದಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ಪ್ರಯುಕ್ತ ಮುಂದೂಡಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಡಿ. 5ರಂದು ನಡೆಯಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ.

ಡಿ. 05 ರಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನ ಜವಹರ ಬಾಲಭವನದಲ್ಲಿ ನಡೆಸಲಾಗುತ್ತಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಮಕ್ಕಳ ದಿನಾಚರಣೆಯಂದು ಕೈದಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ಜೈಲು ಸಿಬ್ಬಂದಿಮಕ್ಕಳ ದಿನಾಚರಣೆಯಂದು ಕೈದಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ಜೈಲು ಸಿಬ್ಬಂದಿ

ಈ ಸಮಾರಂಭದಲ್ಲಿ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ಕಾಪಾಡಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. ಈ ಮಕ್ಕಳಿಗೆ ರೂ.10,000/- ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆಯನ್ನು ನೀಡಲಾಗುತ್ತದೆ. 2018-19ನೇ ಸಾಲಿಗೆ ಈ ಕೆಳಕಂಡ 8 ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

1. ಮಾ|| ನಿಖಿಲ ದಯಾನಂದ ಜಿತೂರಿ,
ತಂದೆ: ದಯಾನಂದ ಮೊತಿಲಾಲಸಾ ಜಿತೂರಿ,
#113, ರೇಣುಕಾ ನಿಲಯ, ಸಿದ್ಧಿ ವಿನಾಯಕ ಮಾರ್ಗ, ವಜೆಗಲ್ಲಿ, ವಡಗಾಂವ, ಬೆಳಗಾವಿ ಜಿಲ್ಲೆ
ಜ.ದಿ: 16-10-2000
(17 ವರ್ಷ), ಡಿಪ್ಲೋಮ (ದ್ವಿತೀಯ ವರ್ಷ)

ಇವರು ದಿನಾಂಕ: 13-04-2018 ರಂದು ಮನೆಯ ಬಳಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದುದ್ದನ್ನು ಕಂಡು ತನ್ನ ಪ್ರಾಣವನ್ನು ಲೆಕ್ಕಿಸದೆ ನೀರೆತ್ತುವ ಮೋಟಾರಿನ ಪೈಪನ್ನು ಹಿಡಿದು ಬಾವಿಯೊಳಗೆ ಇಳಿದು ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿರುತ್ತಾರೆ.

ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

2. ಮಾ||ಶಿವಾನಂದ ಹೊಸಟ್ಟಿ,
ತಂದೆ: ದಶರಥ ಹೊಸಟ್ಟಿ, ವಡೇರಹಟ್ಟಿ, ಗೋಕಾಕ ತಾಲ್ಲೂಕು, ಬೆಳಗಾವಿ ಜಿಲ್ಲೆ
ಜ.ದಿ:11.12.2007
(10 ವರ್ಷ) , 5ನೇ ತರಗತಿ

ದಿನಾಂಕ:08.05.2018ರಂದು ವಡೇರಹಟ್ಟಿ ಗ್ರಾಮದಲ್ಲಿ ಭಜಂತ್ರಿಯವರ ಓಣಿಯಲ್ಲಿರುವ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿಹೋಗುತ್ತಿದ್ದ ಹುಡುಗನನ್ನು ಪ್ರಾಣಾಪಾಯ ದಿಂದ ರಕ್ಷಿಸಿರುತ್ತಾರೆ.

3. ಮಾ|| ಸಿದ್ದಪ್ಪಾ ಕೆಂಪಣ್ಣಾ ಹೊಸಟ್ಟಿ,
ತಂದೆ:- ಕೆಂಪಣ್ಣ ಹೊಸಟ್ಟಿ
ವಡೇರಹಟ್ಟಿ, ಗೋಕಾಕ, ಬೆಳಗಾವಿ
ಜ.ದಿ:-10-06-2004
(14 ವರ್ಷ), 8ನೇ ತರಗತಿ

ದಿನಾಂಕ:08.05.2018ರಂದು ವಡೇರಹಟ್ಟಿ ಗ್ರಾಮದಲ್ಲಿ ಭಜಂತ್ರಿಯವರ ಓಣಿಯಲ್ಲಿರುವ ಇಂದ್ರವೇಣಿ ಹಳ್ಳದಲ್ಲಿ ಬಿದ್ದು ತೇಲಿಹೋಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿರುತ್ತಾರೆ.

4. ಮಾ|| ಜೆ. ಪ್ರಮಿತ್ ರಾಜ್,
ತಂದೆ:ಜೀವನ್ ರಾಜ್
ಡ್ರೀಮ್ ನೆಸ್ಟ್ ವಸತಿ ನಿಲಯ
#203, 2ನೇ ಮಹಡಿ,
ಇಡ್ಯಾ, ಕೃಷ್ಣಪುರ ಕ್ರಾಸ್ ರಸ್ತೆ, ಸುರತ್ಕಲ್, ದಕ್ಷಿಣ ಕನ್ನಡ ಜಿಲ್ಲೆ
ಜ.ದಿ:-16-05-2002
(16 ವರ್ಷ), ಪ್ರಥಮ ಪಿ.ಯು.ಸಿ

ದಿನಾಂಕ:29.05.2018ರಂದು ತೀವ್ರ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಸಂಪೂರ್ಣವಾಗಿ ಮುಳುಗುತ್ತಿದ್ದ ಹಿರಿಯ ದಂಪತಿಯನ್ನು ಹಗ್ಗದ ಸಹಾಯದಿಂದ ಮನೆಯೊಳಗೆ ನುಗ್ಗಿ ಪ್ರಾಣಾಪಾಯದಿಂದ ರಕ್ಷಿಸಿರುತ್ತಾರೆ.

ಆಸೆ ಆಮಿಷವಿಲ್ಲದ ನಿಷ್ಕಲ್ಮಷ ಮಗುವಿನ ಮನಸು!

ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

5. ದಿವಂಗತ ಹೇಮಂತ್ ಎಸ್.ಎಂ,
ತಂದೆ: ಶ್ರೀನಿವಾಸ ಆಚಾರ್ಯ,
ಕೇರ್/ಆಫ್ ಭಾಗೀರಥಿ. ಜಿ. ನಾಯ್ಕ, ವಾರ್ಡ್ ನಂ.84,
ಲಲಿತ ಇಂಡಸ್ಟ್ರಿ ಎದುರು,
ಗಣೇಶ ನಗರ, ಶಿರಸಿ,
ಕಾರವಾರ- 581 401
ಜ.ದಿ: 29.07.2003

ಇವರು ದಿನಾಂಕ: 02.10.2017ರಂದು ಶಿರಸಿ ತಾಲ್ಲೂಕಿನ ಗುರುವಳ್ಳಿ ಬಿಲ್ಲೂಗದ್ದೆಯ ಸಮೀಪವಿರುವ ಪಟ್ಟಣದ ಹೊಳೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಸ್ನೇಹಿತರನ್ನು ರಕ್ಷಿಸಿ, ನೀರಿನ ಸೆಳೆತಕ್ಕೆ ಸಿಲುಕಿ ಮರಣ ಹೊಂದಿರುತ್ತಾರೆ. ದಿವಂಗತ ಹೇಮಂತ್ ಎಸ್.ಎಂ. ತನ್ನ ಇಬ್ಬರು ಸ್ನೇಹಿತರನ್ನು ರಕ್ಷಿಸಿ ಶೌರ್ಯ ಮೆರೆದಿರುತ್ತಾರೆ.

6. ಕುಮಾರಿ ಆರತಿ ಕಿರಣ್ ಶೇಟ್,
ತಂದೆ: ಕಿರಣ್ ಪಿ,
ನವಿಲುಗೋಣ,
ಹೊನ್ನಾವರ ತಾಲ್ಲೂಕು,
ಉತ್ತರ ಕನ್ನಡ ಜಿಲ್ಲೆ-581 338
ಜ.ದಿ:- 22.05.2009
(9 ವರ್ಷ), 4ನೇ ತರಗತಿ

ತನ್ನ ಎರಡು ವರ್ಷದ ಸಹೋದರನನ್ನು ಆಟವಾಡಿಸುತ್ತಿದ್ದಾಗ ಹೋರಿ ಬಂದು ಸಹೋದರನ ಮೇಲೆ ದಾಳಿ ಮಾಡಿತ್ತು. ಆಗ ಬಾಲಕಿ ತನ್ನ ಬೆನ್ನನ್ನು ಅಡ್ಡವಾಗಿ ನೀಡಿ, ಹೋರಿ ತಿವಿದರೂ ಅದನ್ನು ಲೆಕ್ಕಿಸದೇ ತಮ್ಮನನ್ನು ಎತ್ತಿಕೊಂಡು ಓಡಿ ಹೋಗಿ ಪ್ರಾಣಾಪಾಯದಿಂದ ರಕ್ಷಿಸಿರುತ್ತಾರೆ.

7. ಮಾ|| ಎಸ್.ಎನ್.ಮೌರ್ಯ,
ತಂದೆ: ಎಸ್.ಆರ್. ನಂದೀಶ್,
#556, ದೇವನ್ಯ ರಸ್ತೆ, ಚಾಮರಾಜನಗರ ಮಹಲ್, ಮೈಸೂರು.
ಜ.ದಿ: 06-08-2005,
(13 ವರ್ಷ), 8ನೇ ತರಗತಿ

ದಿನಾಂಕ:15-07-2018ರಂದು ಸ್ನೇಹಿತನೊಂದಿಗೆ ಹಾರಂಗಿ ಜಲಾಶಯ ನೋಡಲು ಹೋಗಿದ್ದು, ತಿಂಡಿ ತಿಂದು ತಟ್ಟೆ ತೊಳೆಯಲು ನದಿಯ ಹತ್ತಿರ ಹೋದಾಗ 60 ವಯಸ್ಸಿನ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದನ್ನು ಕಂಡು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿರುತ್ತಾರೆ.

8. ಮಾ|| ಸುಜಯ,
ತಂದೆ: ರವಿ,
ಪಂಡಿಜೆ ಮನೆ, ನಿಟ್ಟಡೆ ಗ್ರಾಮ, ಬೆಳ್ತಂಗಡಿ ತಾಲ್ಲೂಕು,
ದಕ್ಷಿಣ ಕನ್ನಡ ಜಿಲ್ಲೆ,
ಜ.ದಿ: 02.04.2008
(10 ವರ್ಷ), 5ನೇ ತರಗತಿ

ದಿನಾಂಕ:21.06.2018ರಂದು ತಾನು ಮತ್ತು ತನ್ನ ಸ್ನೇಹಿತ ಇಬ್ಬರೂ ಶಾಲೆಯಿಂದ ಮನೆಗೆ ಹೋಗುತ್ತಿರುವಾಗ 20 ಅಡಿ ಆಳವಿರುವ ತೋಡನ್ನು ದಾಟಲು ಅಳವಡಿಸಲಾಗಿದ್ದ ಅಡಿಕೆ ಮರದ ಸೇತುವೆಯಿಂದ ಕಾಲು ಜಾರಿ ಬೀಳುವ ಸಮಯದಲ್ಲಿ ತನ್ನ ಸ್ನೇಹಿತನ ಕಾಲನ್ನು ಹಿಡಿದು ನೀರಿಗೆ ಬೀಳದಂತೆ ಹಿಡಿದುಕೊಂಡು ಕಾಪಾಡಿದ್ದಾರೆ.

ಮಕ್ಕಳ ಕಲ್ಯಾಣ ಪ್ರಶಸ್ತಿಗಳು
ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಅದರಂತೆ 2018ನೇ ಸಾಲಿನಲ್ಲಿ 4 ಸಂಸ್ಥೆಗಳು ಹಾಗೂ 4 ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ರೂ.1,00,000/- ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ವೈಯಕ್ತಿಕ ಪ್ರಶಸ್ತಿ ರೂ.25,000/- ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಆಸೆ ಆಮಿಷವಿಲ್ಲದ ನಿಷ್ಕಲ್ಮಷ ಮಗುವಿನ ಮನಸು! ಆಸೆ ಆಮಿಷವಿಲ್ಲದ ನಿಷ್ಕಲ್ಮಷ ಮಗುವಿನ ಮನಸು!

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

1. ಸುರಭಿ ಫೌಂಡೇಶನ್ ಟ್ರಸ್ಟ್ (ರಿ),
#22, 1ನೇ ಅಡ್ಡ ರಸ್ತೆ,
ಸಿದ್ದಪ್ಪ ಬಡಾವಣೆ, ಗುಬ್ಬಲಾಳ, ಕನಕಪುರ ಮುಖ್ಯ ರಸ್ತೆ,
ಸುಬ್ರಹ್ಮಣ್ಯಪುರ ಅಂಚೆ,
ಬೆಂಗಳೂರು-560061

ಈ ಸಂಸ್ಥೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹೊಂಗಿರಣ ಕೇಂದ್ರ, ವಿದ್ಯಾ ಸುರಭಿ ಕೇಂದ್ರ, ಸುರಭಿ ಸನಿಹ ಕೇಂದ್ರ, ಸುರಭಿ ಡೇ ಸ್ಕೂಲ್ ಮತ್ತು ವಸತಿ ರಹಿತ ನಾಗರಿಕರಿಗಾಗಿ ರಾತ್ರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ, ಇವುಗಳ ಮೂಲಕ ಅವಕಾಶ ವಂಚಿತ ಮಕ್ಕಳಿಗೆ ಪುನರ್ವಸತಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಪಾಠದ ಕೇಂದ್ರಗಳನ್ನು ನಡೆಸುತ್ತಿದೆ. ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ವಿವಿಧ ಆಟೋಟ ತರಬೇತಿ, ಶೈಕ್ಷಣಿಕ ಪ್ರವಾಸ, ನೀತಿ ಶಿಕ್ಷಣ, ಯೋಗ ತರಬೇತಿ ಹಾಗೂ ಪೌಷ್ಟಿಕಾಂಶ ಆಹಾರ ನೀಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈವರೆಗೆ ಸುಮಾರು 1 ಲಕ್ಷ ಮಕ್ಕಳು ಪ್ರಯೋಜನವನ್ನು ಪಡೆದಿರುತ್ತಾರೆ.

2. ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್,
#93, ಸಿದ್ದಾಪುರ ರಸ್ತೆ,
ಪಾಲಿಬೆಟ್ಟ, ಕೊಡಗು-571215

ಈ ಸಂಸ್ಥೆಯು ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಿ, ಪುನರ್ವಸತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ. ಮಕ್ಕಳಿಗೆ ಯೋಗ, ಸಂಗೀತ, ಕ್ರೀಡೆ, ಕಸೂತಿ, ಕಂಪ್ಯೂಟರ್ ತರಬೇತಿಗಳನ್ನು ನೀಡುತ್ತಿದೆ. ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ವಿಕಲಚೇತನ ಮಕ್ಕಳಿಗೆ ಕೃತಕ ಕಾಲುಗಳನ್ನು ಅಳವಡಿಸಲಾಗಿದೆ. ಈ ಸಂಸ್ಥೆಯ ಮಕ್ಕಳು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಸುಮಾರು 524 ಮಕ್ಕಳು ಸಂಸ್ಥೆಯಿಂದ ಪ್ರಯೋಜನವನ್ನು ಪಡೆದಿರುತ್ತಾರೆ.

3. ನಂದನ ಮಕ್ಕಳ ಧಾಮ,
ರೈಲ್ ನಗರ,
ಪ್ಲಾಟ್ ನಂ.38,
ಬೆಳಗಾವಿ 590001

ಈ ಸಂಸ್ಥೆಯಿಂದ ಸುಮಾರು 10 ಹೆಚ್.ಐ.ವಿ. ಸೋಂಕಿತ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಪ್ರವಾಸ ಏರ್ಪಡಿಸುವುದರ ಜೊತೆಗೆ ಕ್ರೀಡೆ, ಯೋಗ ತರಬೇತಿ ನೀಡುತ್ತಾ, ಒಟ್ಟಾರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ನಂದನ ಮಕ್ಕಳ ಧಾಮದ ಅನಾಥ ಆಶ್ರಮದಿಂದ ಸುಮಾರು 165 ಮಕ್ಕಳು ಸದುಪಯೋಗ ಪಡೆದಿರುತ್ತಾರೆ.

ಡಾನ್ ಬಾಸ್ಕೋ ಸೊಸೈಟಿ

ಡಾನ್ ಬಾಸ್ಕೋ ಸೊಸೈಟಿ

4. ಡಾನ್ ಬಾಸ್ಕೋ ಸೊಸೈಟಿ,
# 617, ಜಿ.ಡಿ.ಎ.ಲೇಔಟ್,
ನಾಗನಹಳ್ಳಿ ರಸ್ತೆ,
ಕಲಬುರ್ಗಿ-585102

ಈ ಸಂಸ್ಥೆಯು ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಒದಗಿಸಲು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಬಾಲ್ಯ ವಿವಾಹಗಳನ್ನು ತಡೆದು ಮಕ್ಕಳು ಬಾಲ್ಯವನ್ನು ಅನುಭವಿಸುವಂತೆ ಪೋಷಕರಿಗೆ ಮನವರಿಕೆ ಮಾಡಿರುತ್ತದೆ. ಮಕ್ಕಳ ಮಾರಾಟ ಮಾಹಿತಿ ತಿಳಿದು ಬಂದ ತಕ್ಷಣ ಅವರನ್ನು ಕಾಪಾಡಿ ಸಂಸ್ಥೆಗೆ ಕರೆದುಕೊಂಡು ಬಂದು ಅವರಿಗೆ ನ್ಯಾಯ ಒದಗಿಸಿರುತ್ತದೆ. ಅನಾಥ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದು, ಮಕ್ಕಳ ಕಾವಲು ಸಮಿತಿ, ಗ್ರಾಮ ಸಭೆ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್ ರಚಿಸಿರುತ್ತದೆ. ಸುಮಾರು 2,140 ಮಕ್ಕಳು ಪ್ರಯೋಜನವನ್ನು ಪಡೆದಿರುತ್ತಾರೆ.

1. ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಸುದರ್ಶನ ನಿಲಯ,
ಗಾಯತ್ರಿ ಚಿತ್ರಮಂದಿರದ ಹತ್ತಿರ, ಬಿ.ಹೆಚ್. ರಸ್ತೆ,
ತುಮಕೂರು ಜಿಲ್ಲೆ-572101

ಇವರು ಕಳೆದ 25 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಬಾಲ ಮಂದಿರದ ಹಾಗೂ ಇತರೆ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಬೇಸಿಗೆ ಶಿಬಿರಗಳನ್ನು ಏರ್ಪಡಿಸಿರುತ್ತಾರೆ. ಹಬ್ಬಗಳಲ್ಲಿ ಬಟ್ಟೆ, ಸಿಹಿ ಮತ್ತು ಪುಸ್ತಕ ವಿತರಿಸಿರುತ್ತಾರೆ. 1980 ರಿಂದ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಗಳ ಜೊತೆಗೂಡಿ ಪಲ್ಸ್ ಪೋಲಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಪ್ರಯೋಜನವನ್ನು ಪಡೆದಿರುತ್ತಾರೆ.

2.ಶ್ರೀಮತಿ ಜಯಶ್ರೀ ಭಟ್,
ಪ್ರಜ್ಞಾ, #8-1-116ಬಿ,
ಶಾರದಾ ಕಲ್ಯಾಣ ಮಂಟಪದ ಹತ್ತಿರ, ಬೀಡಿನಗುಡ್ಡೆ ರಸ್ತೆ,
ಕುಂಜಿಬೆಟ್ಟು ಅಂಚೆ, ಉಡುಪಿ ಜಿಲ್ಲೆ

ಇವರು ಸುಮಾರು 13 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಹಿಳೆಯರ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೋರಾಟದ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡಿರುತ್ತಾರೆ. ಮಕ್ಕಳ ಹಕ್ಕುಗಳು, ಮಕ್ಕಳ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯಿದೆ ಮತ್ತು ಮಕ್ಕಳ ಶಿಕ್ಷಣ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿರುತ್ತಾರೆ. ಬಾಲ ಕಾರ್ಮಿಕ ಮತ್ತು ಭಿಕ್ಷೆ ಬೇಡುವ ಮಕ್ಕಳನ್ನು ರಕ್ಷಿಸಿ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟವರನ್ನು ಸಂಪರ್ಕಿಸಿ ಆಪ್ತ ಸಮಾಲೋಚನೆ ನಡೆಸಿ, ಅವರ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

3. ಉಮೇಶ.ಜಿ.ಕಲಘಟಗಿ,
ಗಣೇಶ ಪಾರ್ಕ್,
ಜಿ-2, "ಸಿ"ವಿಂಗ್ ಕ್ರಾಸ್,
ನಂ-2, ಭಾಗ್ಯನಗರ,
ಬೆಳಗಾವಿ-590006

ಇವರು ಸುಮಾರು 20 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ವಿಮ್ಮರ್ಸ್ ಕ್ಲಬ್ ಆಫ್ ಬೆಳಗಾವಿ ಸಂಸ್ಥೆಯಲ್ಲಿ ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ದೈಹಿಕ ವಿಕಲಚೇತನ ಮಕ್ಕಳಿಗೆ ವಿಶೇಷ ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಜು ತರಬೇತಿ ಪಡೆಯುವ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿದ್ದಾರೆ. 2000 ಕ್ಕೂ ಹೆಚ್ಚು ಮಕ್ಕಳು ಪ್ರಯೋಜನವನ್ನು ಪಡೆದಿರುತ್ತಾರೆ.

4. ಎಚ್.ಸಿ.ರಾಘವೇಂದ್ರ,
ರಾಮಸಾಗರ ಅಂಚೆ,
ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ-583132

ಇವರು ಸುಮಾರು 15 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವೇಕಾನಂದ ಯೂತ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ. ಶಾಲೆ ಬಿಟ್ಟ ಮಕ್ಕಳ ಮನವೊಲಿಸಿ ಸುಮಾರು 400 ಕ್ಕೂ ಹೆಚ್ಚು ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಿದ್ದಾರೆ. ಅನೇಕ ಅನಾಥ ಮಕ್ಕಳನ್ನು ಗುರುತಿಸಿ ಪ್ರಾಯೋಜಕತ್ವ ಕಾರ್ಯಕ್ರಮ ಹಾಗೂ ವಿಶೇಷ ಪಾಲನೆ ಯೋಜನೆಯ ಲಾಭ ಕೊಡಿಸುವಲ್ಲಿ ಶ್ರಮಿಸಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕಾನೂನು ಅರಿವಿಲ್ಲದೆ ಆಯೋಜಿಸಿದ್ದ ಸುಮಾರು 26 ಬಾಲ್ಯ ವಿವಾಹಗಳನ್ನು ತಡೆದು ಮಕ್ಕಳನ್ನು ರಕ್ಷಿಸಿದ್ದಾರೆ.

English summary
Bravery award for children and achievers in the sector will be honoured by the state government in the Children's day on Wednesday, at Balabhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X