ಚಿಕ್ಕಮಗಳೂರು:ಸ್ವಾಮೀಜಿಯನ್ನೂ ಬಿಡದ ಕಳ್ಳರು; ಕಾರು ಅಡ್ಡಗಟ್ಟಿ ದರೋಡೆ
ಚಿಕ್ಕಮಗಳೂರು, ಫೆಬ್ರವರಿ 27: ಚಿಕ್ಕಮಗಳೂರಿನ ಸಖರಾಯಪಟ್ಟಣದ ಬಳಿ ಸ್ವಾಮೀಜಿಯ ಕಾರು ಅಡ್ಡಗಟ್ಟಿ ಕಳ್ಳರು ನಗ ನಾಣ್ಯ ದರೋಡೆ ಮಾಡಿದ್ದಾರೆ.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರನ್ನು ಸಖರಾಯಪಟ್ಟಣದ ಹನುಮಂತ ದೇವಸ್ಥಾನದ ಬಳಿ ಕಳ್ಳರು ಅಡ್ಡಗಟ್ಟಿದ್ದಾರೆ.[ಅಪಹರಣಕಾರರೆಂದು ತಿಳಿದು ದೊಡ್ಡಬಳ್ಳಾಪುರ ಪೊಲೀಸರ ಮೇಲೆ ಹಲ್ಲೆ]

ಎರಡು ಬೈಕಿನಲ್ಲಿ ಬಂದ ಕಳ್ಳರು ಕಾರು ಅಡ್ಡಗಟ್ಟಿ ಕಾರಿನಲ್ಲಿದ್ದ ಬೆಳ್ಳಿಯ ಪೂಜಾ ಸಮಾಗ್ರಿಗಳು, 1 ಲಕ್ಷ ರೂಪಾಯಿ ನಗದು ಹಾಗೂ ಮಠಕ್ಕೆ ಸೇರಿದ ಅಮೂಲ್ಯ ದಾಖಲೆಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ದುರಾಸೆಯಿಂದ ದರೋಡೆ ಮಾಡಿದ್ದ ಮೈಸೂರು ಹುಡುಗರು ಈಗ ಎಲ್ಲಿದಾರೆ?]












Click it and Unblock the Notifications