ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು : ಕೊಲೆ ಪ್ರಕರಣ, ಸ್ವಾಮೀಜಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಚಿಕ್ಕಮಗಳೂರು, ಡಿ. 18 : ಮೂಡಿಗೆರೆಯ ಚಿನ್ನಿಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಾವತಿ ಕೊಲೆ ಪ್ರಕರಣದಲ್ಲಿ ಮಹಂತಿನ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2008ರ ಡಿ.10ರಂದು ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಹಮದ್ ಅಸೂದ್, ಫಾರುಖ್, ಲತೀಫ್ ಜೊತೆ ಸೇರಿಕೊಂಡು ಚಂದ್ರಾವತಿಯನ್ನು ಕೊಂದು, ಚಿನ್ನಾಭರಣ ದೋಚಿ ಶವವನ್ನು ಲಿಂಗದಹಳ್ಳಿ ಬಳಿಯ ಭೂತನಕಾಡು ಪ್ರದೇಶದಲ್ಲಿ ಎಸೆದಿದ್ದರು.

Shivayogi Shivacharya Swamiji

ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸ್ವಾಮೀಜಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ಚಿಕ್ಕಮಗಳೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಇಂದು ಈ ಕುರಿತ ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ದಂಡವನ್ನು ವಿಧಿಸಿದೆ. [ಜೋಡಿ ಕೊಲೆ,ಮಹಂತಿನ ಮಠದ ಸ್ವಾಮೀಜಿ ಸೆರೆ]

25 ಸಾವಿರ ಚಂದ್ರಾವತಿ ಕುಟುಂಬಕ್ಕೆ : ಅಪರಾಧಿಗಳ ದಂಡಮೊತ್ತದಲ್ಲಿ 25 ಸಾವಿರ ರೂ.ಗಳನ್ನು ಚಂದ್ರಾವತಿ ಅವರ ಮಗನಿಗೆ ಮತ್ತು ಪ್ರಕರಣವನ್ನು ಪತ್ತೆ ಹಚ್ಚಿದ ಲಿಂಗದಹಳ್ಳಿ ಪೊಲೀಸರಿಗೆ 10 ಸಾವಿರ ರೂ. ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.

ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರ ಮಠದ ಭಕ್ತೆ ಶಿವಗಂಗಮ್ಮ ಅವರನ್ನು 2008 ಜೂನ್ 11 ರಂದು ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಶವ ಎಸೆದಿದ್ದರು. 2008 ಡಿ.10ರಂದು ಚಂದ್ರಾವತಿ ಅವರಿಗೆ ದೂರವಾಣಿ ಕರೆ ಮಾಡಿ ಮಠಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿತ್ತು.

ಪ್ರಕರಣದಲ್ಲಿನ ಇಬ್ಬರು ಆರೋಪಿಗಳು ಮೈಸೂರು ಜೈಲಿನಲ್ಲಿದ್ದರೆ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಲತೀಫ್ ಎನ್ನುವ ಆರೋಪಿ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಾಗಿ ರಮೇಶ್ ವಾದ ಮಂಡಿಸಿದ್ದರು.

English summary
Shivayogi Shivacharya Swamiji and three men convicted in murder case of Chinnaga Grama Panchayath vice president Chandrakala in 2008 December 1. Swamiji and three other get life term in case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X