ಭಾರಿ ಮಳೆಗೆ ಚಿಕ್ಕಮಗಳೂರಿನ ಪ್ರಮುಖ ಹೆದ್ದಾರಿಗಳು ಬಂದ್
ಚಿಕ್ಕಮಗಳೂರು, ಜೂನ್ 14: ಕೊಡಗು-ಚಿಕ್ಕಮಗಳೂರು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಅಕ್ಕ ಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಒದಗಿಸುವ ರಸ್ತೆಗಳು ಬಂದ್ ಆಗಿವೆ. ನೈಋತ್ಯ ಮುಂಗಾರಿನ ಹೊಡೆತಕ್ಕೆ ಸಿಲುಕಿದ ಜಿಲ್ಲೆಗಳು ತತ್ತರಿಸಿವೆ.
ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಬಂದ್ ಆಗಿದ್ದರಿಂದ ಕುದುರೆಮುಖ ಮಾರ್ಗವಾಗಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿತ್ತು. ಆದರೆ, ಬುಧವಾರ ರಾತ್ರಿಯ ಮಳೆಗೆ ಕಳಸಾ-ಕುದುರೆಮುಖ ಮಾರ್ಗವೂ ಜಲಾವೃತಗೊಂಡಿದ್ದು, ವಾಹನ ಸವಾರರು ಆತಂಕದಲ್ಲೇ ಸಾಗುತ್ತಿದ್ದಾರೆ.

ಶೃಂಗೇರಿಯಿಂದ ಎಸ್.ಕೆ.ಬಾರ್ಡರ್ ರಸ್ತೆಯಲ್ಲಿ ಮಣ್ಣು ಕುಸಿತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಜಿಲ್ಲೆಯಲ್ಲಿ ತುಂಗಾ ಭದ್ರಾ ನದಿಗಳು ತುಂಬಿ ಹರಿಯುತ್ತಿದ್ದು, ಶೃಂಗೇರಿ ದೇಗುಲ ಬಳಿ ತುಂಗೆ ಆವರಿಸಿಕೊಂಡಿದ್ದಾಳೆ. ಭಾರಿ ಮಳೆಯಿಂದಾಗಿ ವಾಹನಗಳ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.











Click it and Unblock the Notifications