ಚಿಕ್ಕಮಗಳೂರು: ಕೊಪ್ಪದಲ್ಲಿ 'ಕಾನ್ಮನೆಯ ಕತೆಗಳು' ಮರುಬಿಡುಗಡೆ

Subscribe to Oneindia Kannada

ಕೊಪ್ಪ,ಜುಲೈ, 19: ಪರಿಸರ ಚಿಂತಕ ಶಿವಾನಂದ ಕಳವೆಯವರ "ಕಾನ್ಮನೆಯ ಕತೆಗಳು" ಪುಸ್ತಕ ಮರು ಬಿಡುಗಡೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಕಾರ್ಯನಿರತ ಪತ್ರಕರ್ತರ ಸಂಘ ಜುಲೈ 24 ರಂದು ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಮತ್ತೊಮ್ಮೆ ಲೋಕಾರ್ಪಣೆ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಶಿವಾನಂದ ಕಳವೆ ಭಾಗವಹಿಸಲಿದ್ದು ಉಪನ್ಯಾಸ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿವಾನಂದ ಕಳವೆ ಪರಿಸರ ಪತ್ರಕರ್ತರಾಗಿ ಹೆಸರು ಮಾಡಿದವರು.[ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ದಯವಿಟ್ಟು ತಿಳಿಸಿ]

Chikkamagaluru: Koppa taluk Patrika Dinacharane on 24th July

ಶಿರಸಿ ಸಮೀಪದ ತಮ್ಮ ಸ್ವಂತ ಊರು ಕಳವೆಯಲ್ಲಿ ಶಿವಾನಂದ ಅವರು ಹಮ್ಮಿಕೊಳ್ಳುತ್ತಿರುವ ಪರಿಸರ ಜಾಗೃತಿ, ಕೆರೆ ಸಂರಕ್ಷಣೆ ಅಭಿಯಾನಗಳು ಸರ್ಕಾರಕ್ಕೆ ಮಾದರಿಯಾಗಿವೆ. ವಿದೇಶಗಳಿಂದ ಆಗಮಿಸಿ ಸಂಶೋಧಕರು ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕಳವೆಯವರು ಪರಿಸರ ಸಂರಕ್ಷಣೆ ಜಾಗೃತಿಯನ್ನು ನಿರಂತರವಾಗಿ ಮೂಡಿಸುತ್ತ ಬಂದಿದ್ದಾರೆ.[15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]

ಕೊಪ್ಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಜೀವರಾಜ್, ಮುಖಂಡರಾದ ಟಿ ಡಿ ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್ ರಾಜು, ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೀನೇಶ್ ಇರ್ವತ್ತೂರು ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Koppa: Chikkamagaluru District Koppa Taluk working Journalist association will conducting Patrika dinacharane on 24th July, 2016.
Please Wait while comments are loading...