ಚಿಕ್ಕಮಂಗಳೂರು: ಲಂಚ ಸ್ವೀಕಾರ, ಗ್ರಾ ಪಂ ಕಾರ್ಯದರ್ಶಿ ಎಸಿಬಿ ಬಲೆಗೆ

Posted By:
Subscribe to Oneindia Kannada

ಚಿಕ್ಕಮಂಗಳೂರು, ಜೂನ್ 14 : ಮನೆಯ ಇ-ಸ್ವತ್ತು ಖಾತಾ ಪತ್ರ ನೀಡಲು ಲಂಚ ಪಡೆಯುತ್ತಿದ್ದ ತರೀಕೆರೆ ತಾಲ್ಲೂಕಿನ ಎಂಸಿ ಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಹಾಸ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಎಂಸಿ ಹಳ್ಳಿ ನಿವಾಸಿಯಿಂದ ಬುಧವಾರ ಮಧ್ಯಾಹ್ನ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಮಗಳೂರಿನ ಎಸಿಬಿ ಅಧಿಕಾರಿಗಳು ಚಂದ್ರಹಾಸ ಅವರನ್ನು ಬಂಧಿಸಿದ್ದಾರೆ.

Chikkamagaluru Acb arrest MC Halali Gram Panchayat Secretary taking bribe

ಎಂಸಿ ಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಖಾತಾ ಪತ್ರ ನೀಡಲು 3000 ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಪೈಕಿ 2,000 ರು. ಮುಂಗಡವಾಗಿ ಪಡೆದಿದ್ದರು.

ಬುಧವಾರ ಖಾತಾಪತ್ರ ವಿತರಿಸುವಾಗ ಬಾಕಿ ಮೊತ್ತ 1000 ರು. ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ಚಂದ್ರಶೇಖರ್‌ ನೇತೃತ್ವದ ತಂಡ ದಾಳಿ ಮಾಡಿದೆ.

ಆರೋಪಿ ಎಂಸಿ ಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಹಾಸ ಅವರ ವಿರುದ್ಧ 1988 ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಎಸಿಬಿ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Chikkamagaluru Anti-Corruption Bureau officers trapped MC Halali Gram Panchayat Secretary Chandrahas for accepting a bribe of Rs 1000.
Please Wait while comments are loading...