ಶಸ್ತ್ರ ಚಿಕಿತ್ಸೆಗೆ ಪಾನಮತ್ತನಾಗಿ ಬಂದ ವೈದ್ಯ ಕುಸಿದು ಬಿದ್ದ: ಅನಸ್ತೇಷಿಯಾ ಪಡೆದ 9 ಮಹಿಳೆಯರು ಗತಿ ಏನಾಯ್ತು?
ಚಿಕ್ಕಮಗಳೂರು, ಮೇ 31: ಹೆಸರೇ ಹೇಳುವಂತೆ ವೈದ್ಯರು ಶಿಶ್ತು, ಜೀವನ ಕ್ರಮ, ಕಾರ್ಯ ವೈಖರಿಯಿಂದಲೇ ಆರೋಗ್ಯ ಕಾಳಜಿಯಲ್ಲಿ ಇತರರಿಗೆ ಮಾದರಿಯಾಗುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಆಪರೇಷನ್ ಥಿಯೇಟರ್‌ಗೆ ಕಂಠಪೂರ್ತಿ ಕುಡಿದು ಬಂದು ಶಸ್ತ್ರಚಿಕಿತ್ಸೆ ಮಾಡಲಾಗದೆ ಕುಸಿದು ಬಿದ್ದ ಘಟನೆ ಬುಧವಾರ ನಡೆದಿದೆ.
ಜಿಲ್ಲೆಯ ಕಳಸದ ತಾಲೂಕು ಆಸ್ಪತ್ರೆಯಲ್ಲಿ ಸಂತಾನಹರಣ ಕ್ಯಾಂಪ್ ನಡೆದಿತ್ತು. ಇಲ್ಲಿ ಮಹಿಳೆಯರಿಗೆ ಆಪರೇಷನ್ ಮಾಡಬೇಕಿದ್ದ ವೈದ್ಯನೊಬ್ಬ ಪಾನಮತ್ತನಾಗಿ ಕುಡಿದ ಅಮಲಿನಲ್ಲಿಯೇ ಆಪರೇಷನ್ ಥಿಯೇಟರ್‌ನಲ್ಲಿ ಕುಸಿದು ಬಿದಿದ್ದಾರೆ. ವೈದ್ಯರ ಈ ನಿರ್ಲಕ್ಷ್ಯಕ್ಕೆ ರೋಗಿಗಳು ಮತ್ತವರ ಕುಟುಂಬಸ್ಥರು ಪರದಾಡಿದ್ದಾರೆ.

ಕಳಸ ತಾಲೂಕು ಆಸ್ಪತ್ರೆಗೆ ಸುಮಾರು 9 ಮಂದಿ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ (Operation)ಮಾಡಬೇಕಿತ್ತು. ಈ ಸಂಬಂಧ ಬೆಳಗ್ಗೆ 9ಗಂಟೆಯಿಂದಲೇ ಮಹಿಳೆಯರು ಕಾಯುತ್ತಿದ್ದರು. ಮಧ್ಯಾಹ್ನ 3 ಗಂಟೆಗೆ ಹೊತ್ತಿಗೆ ಬಂದ ವೈದ್ಯ ಪೂರ್ತಿ ಪಾನಮತ್ತರಾಗಿ, ನಿಲ್ಲದ ಸ್ಥಿಯಲ್ಲಿ ಆಗಮಿಸಿದ್ದರು. ಇಷ್ಟೊತ್ತಿಗಾಗಲೇ ವಿಶೇಷ ವೈದ್ಯರು ಎಲ್ಲ ಮಹಿಳೆಯರಿಗೂ ಸಂತಾಹರಣ ಚಿಕಿತ್ಸೆಗಾಗಿ ಅನಸ್ತೇಷಿಯಾ ನೀಡಿದ್ದರು. ಹೀಗಾಗಿ ಆ ಮಹಿಳೆಯರಿಗೆ ಪ್ರಜ್ಞೆ ಇರಲಿಲ್ಲ.
ಅದೃಷ್ಟವಶಾತ್ ಆಪರೇಷನ್ ಮುನ್ನವೇ ಕುಸಿದು ಬಿದ್ದ ವೈದ್ಯ
ಈ ವೇಳೆ ಮದ್ಯದ ಅಮಲಿನಲ್ಲಿದ್ದ ವೈದ್ಯ ಆಸ್ಪತ್ರೆ ಸಿಬ್ಬಂದಿ ಮಾತನ್ನು ಕೇಳದೇ ಆಪರೇಷನ್‌ಗೆ ಮುಂದಾಗಿದ್ದೆ ತಡ ಸ್ವತಃ ತಾನೇ ನಿಲ್ಲಲಾಗದೇ ಕುಸಿದು ಬಿದ್ದ. ಅದೃಷ್ಟವಶಾತ್ ಆಪರೇಷನ್ ಆರಂಭಿಸಿರಲಿಲ್ಲ. ಕೂಡಲೇ ಆ ವೈದ್ಯನನ್ನು ಸಿಬ್ಬಂದಿ ಬೇರೆಡೆ ಬೆಡ್ ಮೇಲೆ ಮಲಗಿಸಿದ್ದಾರೆ. ಈ ಕಾರಣದಿಂದ ಸಂತಾನಹರಣ ಆಪರೇಷನ್ ರದ್ದು ಮಾಡಲಾಯಿತು. ಘಟನೆಯಿಂದಾಗಿ ಅನಸ್ತೇಷಿಯಾ ಪಡೆದ ಮಹಿಳೆಯರು ಕುಟುಂಬಸ್ಥರು, ಅವರೊಂದಿಗೆ ಕ್ಯಾಂಪ್‌ಗೆ ಬಂದವರು ಪರದಾಡಿದರು. ಬೇರೆ ವೈದ್ಯರು ಸ್ಥಳಕ್ಕಾಗಮಿಸಿ ವಿಚಾರಿಸುವವರೆಗೂ ಆತಂಕದಲ್ಲೇ ಕಾಲ ಕಳೆದರು.

ಕ್ರಮದ ಭರವಸೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ
ವೈದ್ಯರ ನಿರ್ಲಕ್ಷಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್, ವೈದ್ಯರ ನಡೆ ಕುರಿತು ಮತ್ತು ಕರ್ತವ್ಯದ ವೇಳೆ ಅಶಿಸ್ತಿನ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುವುದು. ಮುಲಾಜಿಲ್ಲದೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಈಡಿದರು.
ಅನಸ್ತೇಷಿಯಾದಿಂದ ಮಹಿಳೆಯರಿಗೆ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಕೆಲವು ವೈದ್ಯರನ್ನು ಆಸ್ಪತ್ರೆಗೆ ಕರೆಯಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬೆಳಗ್ಗೆ ಮತ್ತೆ ಆಪರೇಷನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications