ದಾರಿ ಕಾಣದೇ ಪೆದ್ದನಂತೆ ಮಾತನಾಡಲು ಆರಂಭಿಸಿರುವ ಯಡಿಯೂರಪ್ಪ

Recommended Video

      ಯಡಿಯೂರಪ್ಪ ಒಬ್ಬ ಪೆದ್ದ ಅಂತ ಹೇಳಿದ್ದು ಯಾರು ಗೊತ್ತಾ..? | Oneindia Kannada

      ಬೆಂಗಳೂರು, ಜ 27: ಈ ಬಾರಿಯ ರಾಜ್ಯ ಆಯವ್ಯಯದಲ್ಲಿ ರೈತರಿಗೆ ಬಂಪರ್ ಗಿಫ್ಟ್ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು, ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ.

      ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಗಳನ್ನು ಪೆದ್ದನಿಗೆ ಹೋಲಿಸಿದ್ದಾರೆ. "ಮುಖ್ಯಮಂತ್ರಿ @BSYBJP ಅವರು ದುಡ್ಡನ್ನು ಮಾಯ ಮಂತ್ರ ಮಾಡಿ ಸೃಷ್ಟಿ ಮಾಡುತ್ತಾರಾ?" ಎಂದು ಪ್ರಶ್ನಿಸಿದ್ದಾರೆ.

      ಮುಂದುವರಿಯುತ್ತಾ, "ಬಜೆಟ್ ಅಂದ್ರೆ ಮುಂದಿನ ಹನ್ನೆರಡು ತಿಂಗಳವರೆಗೆ ಸಂಗ್ರಹವಾಗುವ ತೆರಿಗೆ ಮತ್ತು ಖರ್ಚು ಮಾಡಬಹುದಾದ ಅಂದಾಜು ಮೊತ್ತದ ಲೆಕ್ಕ, ಈಗ ಖರ್ಚಾದ ಹಣದ ಲೆಕ್ಕ ಕೊಡುವುದಲ್ಲ. ಯಡಿಯೂರಪ್ಪ ಕೈಸೋತು, ದಾರಿ ಕಾಣದೆ ಪೆದ್ದನಂತೆ ಮಾತನಾಡಲು ಆರಂಭಿಸಿದ್ದಾರೆ" ಇದು ಸಿದ್ದರಾಮಯ್ಯ ಮಾಡಿರುವ ಟ್ವೀಟ್.

      Chief Minister Yediyurappa Acting Like Stupid, Siddaramaiah Tweet

      ಸಿಎಎ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಸಿಎಎ ಹಾಗೂ ಎನ್‌ಆರ್‌ಸಿ ಅನ್ನು ದಲಿತರು, ಆದಿವಾಸಿಗಳು, ಅಲೆಮಾರಿ ಜನಾಂಗದ ಜನ ಸೇರಿದಂತೆ ವಿವಿಧ ಸಮುದಾಯದವರು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ".

      "ಆದರೆ ಬಿಜೆಪಿಯವರು ಅದನ್ನು ಮುಸ್ಲಿಂಮರಿಗೆ ಸೀಮಿತಗೊಳಿಸಿ ಜನರ ದಾರಿತಪ್ಪಿಸಲು ಹೊರಟಿದ್ದಾರೆ. ಸಿಎಎ, ಎನ್‌ಆರ್‌ಸಿ ಇಡೀ ದೇಶದ ಸಮಸ್ಯೆ, ಒಂದು ಸಮುದಾಯದ್ದಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

      "ಕೇಂದ್ರ ಸರ್ಕಾರದ ನೇರ ತೆರಿಗೆ ಸಂಗ್ರಹ ಈ ಸಾಲಿನಲ್ಲಿ ರೂ.2 ಲಕ್ಷ ಕೋಟಿ ಕಡಿಮೆಯಾಗಿದೆ. ಅವರ ಬಳಿ ರಾಜ್ಯ ಸರ್ಕಾರಗಳಿಗೆ ಕೊಡಲು ಹಣವೇ ಇಲ್ಲ, ಹೀಗಾಗಿ ಕರ್ನಾಟಕದ ಖಜಾನೆ ಖಾಲಿಯಾಗಿದೆ. ನರೇಂದ್ರ ಮೋದಿ ದೇಶವನ್ನು ಮತ್ತು ಯಡಿಯೂರಪ್ಪ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದ್ದಾರೆ" ಎನ್ನುವ ಇನ್ನೊಂದು ಟ್ವೀಟ್ ಅನ್ನು ಸಿದ್ದರಾಮಯ್ಯ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+