Nikhil Kumaraswamy: ಸಚಿವರು ಮಾತ್ರವಲ್ಲ, ರಾಜ್ಯದ ಸಿಎಂ ಸಿದ್ದರಾಮಯ್ಯ ಕೂಡ ದೇವೇಗೌಡರ ಔಟ್‌ಪುಟ್‌ಗಳೇ : ನಿಖಿಲ್ ಕುಮಾರಸ್ವಾಮಿ
ಮಂಡ್ಯ : ಮಿಸ್ಟರ್ ಚಲುವರಾಯಸ್ವಾಮಿ ನಾವ್ಯಾವತ್ತೂ ಅಡ್ಜಸ್ಟ್‌ಮೆಂಟ್ ರಾಜಕಾರಣಕ್ಕೆ ತಲೆ ಕೊಟ್ಟವರಲ್ಲ. ನಮ್ಮ ಪಕ್ಷದಲ್ಲಿ ತಿಂದು ಬೆಳೆದು ಮಂತ್ರಿಯಾಗಿ ನಮ್ಮ ಪಕ್ಷವನ್ನೇ ಕಿತ್ತೋಗೆಯಬೇಕೆನ್ನುತ್ತಿರಾ.? ಇನ್ನೂ ಎರಡೂವರೆ ವರ್ಷ ಕಾಯಿರಿ, ಜನರೇ ಉತ್ತರ ನೀಡಲಿದ್ದಾರೆ ಎಂದು ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಮಂಡ್ಯ ಜಿಲ್ಲೆ ನಡೆದ ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಮಿಸ್ಟರ್ ಚಲುವರಾಯಸ್ವಾಮಿ ಅವರೇ, ನಿಮ್ಮಂತೆ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ರೆ ನಾನು ಮಂಡ್ಯದಲ್ಲಿ ಗೆದ್ದು ಬರಬಹುದಿತ್ತು. ಅಧಿಕಾರಗಳನ್ನ ನಿಮ್ಮ ಮನೆ ಚಾಕರಿ ಮಾಡಲು ಇಟ್ಕೊಂಡಿದ್ದೀರಾ.? ಎಂದು ಅವರು ಕಿಡಿಕಾರಿದರು.

ಜೆಡಿಎಸ್ ಪಕ್ಷವು ಶಕ್ತಿಶಾಲಿ ನಾಯಕರನ್ನು ಸೃಷ್ಟಿಸುವ ಕಾರ್ಖಾನೆಯಿದ್ದಂತೆ. ಸಚಿವರಾಗಿರುವವರು ಮಾತ್ರವಲ್ಲ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಬೆಳೆದವರೇ. ಪಕ್ಷದಲ್ಲಿ ಬೆಳೆದು, ಉಂಡು ಹೋದವರು ಇಂದು ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಅವರು ಟೀಕಿಸಿದರು.
ಅಧಿಕಾರಿಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಅಧಿಕಾರ ದುರ್ಬಳಕೆ ಮಾಡುವುದನ್ನ ಚಲುವರಾಯಸ್ವಾಮಿ ಅವರು ಹೇಳಿಕೊಡ್ತಿದ್ದಾರೆ. ಎರಡೂವರೆ ವರ್ಷ ಕಾಯಿರಿ, ನೀವು ಮಾಡ್ತಿರೋ ಕೆಲಸವನ್ನೇ ಮುಂದೆ ನಾವು ಮಾಡ್ತೀವಿ. ಜೆಡಿಎಸ್ ಪಕ್ಷದಲ್ಲಿ ಬಹಳ ತಿಂದಿದ್ದಾರೆ, ಉಂಡಿದ್ದಾರೆ ಹೋಗಿದ್ದಾರೆ ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು
ಅದೆಷ್ಟೋ ಪ್ರಾದೇಶಿಕ ಪಕ್ಷಗಳು ಸ್ವಂತ ಹಿತಾಸಕ್ತಿಗಾಗಿ ಹುಟ್ಟಿ ನೆಲಕಚ್ಚಿವೆ. ಆದರೆ ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಅಡಿಪಾಯ. ಮಂಡ್ಯದ ಮಣ್ಣಿನಿಂದಲೇ ನನ್ನ ರಾಜಕೀಯ ಪಯಣ ಆರಂಭವಾಗಿದೆ. ಕಳೆದ ಚುನಾವಣೆಗಳಲ್ಲಿನ ಸೋಲು ನನಗೆ ಬದುಕಿನ ಪರಿಪಕ್ವತೆಯನ್ನು ಕಲಿಸಿದೆ. ಅಧಿಕಾರ ಶಾಶ್ವತವಲ್ಲ. ಆದರೆ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಷ್ಟೇ ಏರಿಳಿತಗಳಾದರೂ ಜನರ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಭಾವನಾತ್ಮಕವಾಗಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.












Click it and Unblock the Notifications