ಚನ್ನಪಟ್ಟಣದಲ್ಲಿ ಚುನಾವಣೆ ಬಹಿಷ್ಕರಿಸಿದ ಕಾಂಗ್ರೆಸ್, ಕಾರಣ ತಿಳಿಯಿರಿ!

ರಾಮನಗರ: ಚನ್ನಪಟ್ಟಣದಲ್ಲಿ ಇತ್ತಿಚೆಗೆ ಕೇಳಿಬಂದ ಟಿಎಪಿಸಿಎಂಎಸ್ ಅಕ್ಕಿ ಹಗರಣ ಖಂಡಿಸಿ ತಾಲೂಕು ಕಾಂಗ್ರೆಸ್, ಮುಂದೆ ನಡೆಯುವ ಟಿಎಪಿಸಿಎಂಎಸ್ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾಂಗಾಧರ್ ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಈ ಮಾಹಿತಿಯನ್ನ ನೀಡಿದರು.

ತಾಲೂಕು ವ್ಯವಸಾಯ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕಾಗಿ ಡಿ. 24 ಭಾನುವಾರ ನಿಗದಿ ಆಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಿಂದ ಹೊರಗುಳಿತ್ತಾರೆ ಎಂದರು. ತಾಲೂಕು TAPCMS ವಿರುದ್ಧ ಕೇಳಿಬಂದ 1600 ಕ್ವಿಂಟಾಲ್ ಪಡಿತರ ಅಕ್ಕಿ ಗೋಲ್‌ಮಾಲ್ ಖಂಡಿಸಿ ಚುನಾವಣೆಯ ಮುಂದೂಡಲು ಕಾಂಗ್ರೆಸ್ ಆಗ್ರಹಿಸಿತ್ತು. ಇದೀಗ ಚುನಾವಣೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೊಶ ಹೊರಹಾಕಿದ್ದಾರೆ.

Channapatna Congress Leaders Decided To Boycott Election

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಆರೋಪ

ಇನ್ನು ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಅಕ್ಕಿ ಹಗರಣ ಮುಚ್ಚಿ ಹಾಕೋದಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ತಮ್ಮ ಗೆಲುವಿಗೆ ವಾಮ ಮಾರ್ಗದಲ್ಲಿ ಎಲ್ಲಾ ಪ್ರಯತ್ನ ನಡೆಸಿದ್ದಾರೆ. ಮತ್ತೆ JDS ಬೆಂಬಲಿತ ಅಡಳಿತ ಮಂಡಳಿನ ಅಧಿಕಾರಕ್ಕೆ ತಂದು ಅಕ್ಕಿ ಹಗರಣ ಮುಚ್ಚಿಹಾಕುತ್ತಾರೆ ಎಂದು ಗಂಗಾಧರ್ ಆರೋಪ ಮಾಡಿದ್ರು. ಟಿಎಪಿಸಿಎಂಎಸ್ ಮಳಿಗೆಯಲ್ಲಿ ದಾಸ್ತಾನು ಇಟ್ಟಿದ್ದ. ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಬಡವರ ಅನ್ನ ಭಾಗ್ಯದ 1600 ಕ್ವಿಂಟಾಲ್ ಅಕ್ಕಿ ಕಳ್ಳತನವಾಗಿದೆ. ಇದಕ್ಕೆ ಸಂಘದ ಸದಸ್ಯರೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಆರೋಪಿಸಿದ್ದಾರೆ.

ಇದೇ ಕಾರಣಕ್ಕೆ ಚುನಾವಣೆ ಮುಂದೂಡಿ ಅಕ್ಕಿ ಹಗರಣ ತನಿಖೆ ನಡೆದು ತಪ್ಪಿತಸ್ಥರನ್ನ ಪತ್ತೆ ಮಾಡಬೇಕು. ಆರೋಪಿಗಳು ಪತ್ತೆಯಾದ ಬಳಿಕ ಚುನಾವಣೆ ನಡೆಸಿ ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯ. ಹೀಗಾಗಿ ನಾವು ಈ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಈ ಸಂದರ್ಭದಲ್ಲಿ ಗಂಗಾಧರ್ ಅವರು ತಿಳಿಸಿದರು.

Channapatna Congress Leaders Decided To Boycott Election

ಏನಿದು ಅಕ್ಕಿ ಹಗರಣದ ಹಿನ್ನೆಲೆ?

ಚನ್ನಪಟ್ಟಣ ಟಿಎಪಿಸಿಎಂಎಸ್ ಒಡೆತನದ ಸಗಟು ಮಳಿಗೆಯಲ್ಲಿ, ತಾಲೂಕಿನ 65 ನ್ಯಾಯಬೆಲೆ ಅಂಗಡಿಗಳಿಗೆ ಸಗಟು ಪಡಿತರ ಧಾನ್ಯ ವಿತರಣೆ ಮಾಡ್ತಿದ್ದ ನೌಕರನೇ ಅಕ್ಕಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿತ್ತು. 1600 ಕ್ವಿಂಟಾಲ್ ಅಕ್ಕಿ ಕಾಣೆ ಆಗಿದ್ದು ಗೋದಾಮಿನ ವ್ಯವಸ್ಥಾಪಕನನ್ನ ಚನ್ನಪಟ್ಟಣ ಟೌನ್ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಕೆಲ ದಿನದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ ಎನ್ನಲಾಗಿದೆ.

ಅಕ್ಕಿಗೋಲ್ ಮಾಲ್ ವಿಷಯ ತಿಳಿಯುತ್ತಿದ್ದಂತೆಯೇ, ಆಹಾರ ಇಲಾಖೆ ಉಪನಿರ್ದೇಶಕಿ ರಮ್ಯಾ ಹಾಗೂ ಚನ್ನಪಟ್ಟಣ ತಹಸೀಲ್ದಾರ್ ಮಹೇಂದ್ರ ಟಿಎಪಿಸಿಎಂಎಸ್ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಗೋದಾಮಿನಲ್ಲಿ ದಾಸ್ತಾನು ಆಗಿರುವ ಅಕ್ಕಿ ಪ್ರಮಾಣ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿರುವ ಪ್ರಮಾಣದ ಮಾಹಿತಿ ಸಂಗ್ರಹಿಸಿ. ಬಳಿಕ ಗೋದಾಮು ಸೀಜ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+