ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕುಟುಂಬಸ್ಥರ ಭೇಟಿ ಮಾಡಿದ ವಿಜಯೇಂದ್ರ ಏನಂದ್ರು?
ಶಿವಮೊಗ್ಗ, ಮೇ 30: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಸಚಿವರ ರಾಜೀನಾಮೆಗೆ ಆಗ್ರಹಿಸಿವೆ. ಶಿವಮೊಗ್ಗದ ಕೆಂಚಪ್ಪ ಬಡಾವಣೆಗೆ ಭೇಟಿ ನೀಡಿದ ವಿನಯೇಂದ್ರ. ದಿ. ಚಂದ್ರಶೇಖರನ್ ಕುಟುಂಬಕ್ಕೆ ಸಾಂತ್ವನ ನೀಡಿದರು.
ಸುಮಾರು 187 ಕೋಟಿ ರೂಪಾಯಿ ಅವ್ಯವಹಾರದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಮನೆಗೆ ಇಂದು ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಕುಟುಂಬದವರಿಗೆ ಧೈರ್ಯ ತುಂಬಿದರು.

ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಧೈರ್ಯ ವಹಿಸುವಂತೆ ತಿಳಿಸಿದರು. ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ಒಯ್ದ ಕುರಿತು ಕುಟುಂಬದವರು ಮಾಹಿತಿ ನೀಡಿದರು. ಮನೆಯಲ್ಲಿರುವ ಸಾಕ್ಷ್ಯವಸ್ತುಗಳನ್ನು ತೆಗೆದುಕೊಂಡು ಹೋಗಲು ಅಧಿಕಾರಿಗಳು ತರಾತುರಿಯಲ್ಲಿ ಬಂದಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
ಮರಣ ಪತ್ರ ಸಹ ಬಹಿರಂಗವಾಗಿದೆ. ನಿಗಮದಲ್ಲಿ ದೊಡ್ಡ ಮಟ್ಟದ ಹಣಕಾಸಿನ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಸ್.ಟಿಗೆ ಮೀಸಲು ಇಟ್ಟ ಹಣ ಪೋಲಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರಕರಣದ ಆಳ ಮತ್ತು ಅಗಲ ಪತ್ತೆ ಹಚ್ಚಬೇಕು.ಇದರಲ್ಲಿ ಮೂರ್ನಾಲ್ಕು ಜನ ಅಧಿಕಾರಿಗಳು ಸೇರಿಕೊಂಡು ನೂರಾರು ಕೋಟಿ ಅವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಚಿವ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಒತ್ತಡ ಹಾಕಲಾಗಿದೆ. ಸಚಿವ ನಾಗೇಂದ್ರ ಅನುಮತಿ ಇಲ್ಲದೇ ದೊಡ್ಡ ಮೊತ್ತದ ಹಣವನ್ನು ತೆಲಂಗಾಣಕ್ಕೆ ವರ್ಗಾವಣೆ ಆಗಲು ಸಚಿವರ ಅನುಮತಿ ಬೇಕೇ ಬೇಕು. ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅನಧಿಕೃತವಾಗಿ ಖಾತೆ ತೆರೆದು ಹಣ ವರ್ಗಾವಣೆ ಆಗಿದೆ ಎಂದರೆ ಇದರ ಹಿಂದೆ ಪಿತೂರಿ ನಡೆದಿದೆ. ರಾಜ್ಯ ಸರಕಾರಗಳ ನಡವಳಿಕೆ ಅನುಮಾನಾಸ್ಪದವಾಗಿದೆ ಎಂದು ಆರೋಪಿಸುತ್ತಾ ಬರಲಾಗುತ್ತಿದೆ. ಕರ್ನಾಟಕ ಹೈಕಮಾಂಡ್ ಗೆ ಎಟಿಎಂ ಆಗಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಆಧಾರ ಕೊಡುವಂತೆ ಸಿಎಂ ಆದಿಯಾಗಿ ಎಲ್ಲರೂ ಬಿಜೆಪಿ ಮೇಲೆ ಹರಿಹಾಯುತ್ತಿದ್ದರು. ಅದು ಈ ಪ್ರಕರಣದಲ್ಲಿ ಕಂಡುಬಂದಿದೆ. ರಾಜ್ಯದ ಇತಿಹಾಸದಲ್ಲಿ ಇಂತಹ ಅವ್ಯವಹಾರ ನಡೆದಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚರ್ಚೆ ನಡೆಯುತ್ತಿದೆ. ಬ್ಯಾಂಕ್ ಅಧಿಕಾರಿಗಳ ಇನ್ವಾಲ್ಮೆಂಟ್ ಇದೆ. 25 ಕೋಟಿ ರೂ. ತೆಲಂಗಣಕ್ಕೆ ಹೋಗಿತ್ತೋ ಅಥವಾ ಬೇರೆ ಎಲ್ಲಿಗೆ ಹೋಗಿತ್ತು, ಬೇರೆ ಬೇರೆ ಇಲಾಖೆಗಳಲ್ಲೂ ಈ ರೀತಿಯ ಅವ್ಯವಹಾರ ನಡೆದಿದೆ ಎಂಬ ಅನುಮಾನ ಇದೆ. ಬರುವ ದಿನಗಳಲ್ಲಿ ಎಲ್ಲವೂ ಹೊರಗೆ ಬರಲಿದೆ.
ಇದು ಸಣ್ಣ ಹಗರಣ ಅಲ್ಲ. ಇದರಲ್ಲಿ ದೊಡ್ಡ ದೊಡ್ಡ ಕುಳಗಳೂ ಭಾಗಿ ಆಗಿವೆ ಎಂಬ ಅನುಮಾನ ಇದೆ. ಬಿಜೆಪಿ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಂಡಿತ್ತು. ವರದಿಯನ್ನೂ ಬಂದಿತ್ತು. ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಲಾಗುತ್ತಿದೆ. ಸಚಿವರ ಕಚೇರಿಯಿಂದ ದೂರವಾಣಿ ಕರೆ ಬಂದಿತ್ತು ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿಯಿಂದ ಬೇಡಿಕೆಗಳ ಪಟ್ಟಿ ಬಿಡುಗಡೆ
* ತಕ್ಷಣ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಬೇಕು.
* ಅವ್ಯವಹಾರದ ಬಗ್ಗೆ ತನಿಖೆ ನಡೆಯಬೇಕು. ಅಂತಾರಾಜ್ಯ ಅವ್ಯವಹಾರ ಆಗಿದೆ. 25 ಕೋಟಿ ವಾಪಸ್ ಬಂದಿದೆ ಎಂದೂ ಸಚಿವರೇ ಹೇಳಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕಾದರೆ, ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಸಿಐಡಿ,ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ಪ್ರಾಮಾಣಿಕರಿದ್ದರೆ ಸಿಬಿಐಗೆ ವಹಿಸಿ.
* ಕುಟುಂಬ ಸಂಕಷ್ಟದಲ್ಲಿದೆ. ಮಾನವೀಯ ದೃಷ್ಟಿಯಿಂದ ಅವರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಪ್ರಕರಣದಲ್ಲಿ ಸಿಎಂ ಭಂಡತನ ತೋರಿಸುವ ಅಗತ್ಯ ಇಲ್ಲ.ಒದಿ ಭಂಡತನದ ಸರಕಾರವಾಗಿದೆ. ಪ್ರಕರಣದಲ್ಲಿ ಆ ರೀತಿ ವರ್ತಿಸುವುದು ಬೇಡ.
* ರಾಜೀನಾಮೆ ಹಾಗೂ ಸಿಬಿಐಗೆ ವಹಿಸಲು ಒಂದು ವಾರದ ಗಡುವು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು. ಪ್ರಕರಣವನ್ನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ.
* ಬೇಡಿಕೆಗಳನ್ನು ಸಿಎಂ ಗಂಭೀರವಾಗಿ ಪರಿಣಗಣಿಸುತ್ತಾರೆ ಎಂಬ ನಂಬಿಕೆ ಇದೆ.












Click it and Unblock the Notifications