ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ-ದೇವೇಗೌಡರ ಹುಡುಕಿಕೊಂಡ ಬಂದ ಚಂದ್ರಬಾಬು ನಾಯ್ಡು

|
Google Oneindia Kannada News

ಬೆಂಗಳೂರು, ಮೇ 21: ಆಂಧ್ರ ಪ್ರದೇಶ ಸಿಎಂ ಮತ್ತು ತೃತೀಯ ರಂಗ ರಚನೆ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಚಂದ್ರಬಾಬು ನಾಯ್ಡು ಅವರು ಇಂದು ದೇವೇಗೌಡ ಅವರ ನಿವಾಸಕ್ಕೆ ಆಗಮಿಸಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿದರು.

ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಇಬ್ಬರೂ ಸಹ ಇಂದು ದೆಹಲಿಗೆ ತೆರಳಿ ತೃತೀಯ ರಂಗದ ನಾಯಕರ ಜೊತೆಯಲ್ಲಿ ಸಭೆ ನಡೆಸಬೇಕಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಇಬ್ಬರೂ ದೆಹಲಿಗೆ ಹೋಗಿರಲಿಲ್ಲ, ಕೊನೆಗೆ ಚಂದ್ರಬಾಬು ನಾಯ್ಡು ಅವರೇ ನಗರಕ್ಕೆ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚುನಾವಣಾ ಫಲಿತಾಂಶದ ನಂತರದ ಕ್ರಮಗಳು, ತೃತೀಯ ರಂಗದ ಬಗ್ಗೆ, ಇವಿಎಂ ಕುರಿತು ಚರ್ಚೆ, ಸಮೀಕ್ಷೆಗಳು ಮತ್ತು ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯ ರಾಜಕೀಯದ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Chandrababu Naidu met Deve Gowda and Kumaraswamy

ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ದಿನ ಇದ್ದಾಗ ಚಂದ್ರಬಾಬು ನಾಯ್ಡು ಅವರು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ನಿನ್ನೆಯಷ್ಟೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗಿದ್ದರು. ಇಂದೂ ಸಹ ಅವರ ಉಪಸ್ಥಿತಿಯಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಿತು.

ಮೈತ್ರಿ ಬಗ್ಗೆ 'ಕೈ' ನಿರಾಸಕ್ತಿ? ಅತೃಪ್ತರ ಮೇಲೆ ಹಿಡಿತ ಕೈಬಿಟ್ಟ ಕಾಂಗ್ರೆಸ್ಮೈತ್ರಿ ಬಗ್ಗೆ 'ಕೈ' ನಿರಾಸಕ್ತಿ? ಅತೃಪ್ತರ ಮೇಲೆ ಹಿಡಿತ ಕೈಬಿಟ್ಟ ಕಾಂಗ್ರೆಸ್

ಮೇ 23ರ ಫಲಿತಾಂಶದಂದು ಯಾರಿಗೂ ಬಹುಮತ ಬರದೇ ಇದ್ದಲ್ಲಿ ಪ್ರಾದೇಶಿಕ ಪಕ್ಷ ಹಾಗೂ ಕಾಂಗ್ರೆಸ್‌ ಅನ್ನು ಒಟ್ಟುಗೂಡಿಸುವಲ್ಲಿ ದೇವೇಗೌಡ ಅವರು ಮಹತ್ವದ ಪಾತ್ರವಹಿಸಲಿದ್ದಾರೆ ಹಾಗಾಗಿಯೇ ಚಂದ್ರಬಾಬು ನಾಯ್ಡು ಅವರು ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ? ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ?

English summary
Andhra Pradesh CM Chandrababu Naidu today met Deve Gowda and Karnataka CM Kumaraswamy in Bengaluru. They talked about third front formation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X