ರಾಜ್ಯಕ್ಕೆ 450 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 9: ಮುಂಗಾರು ಮಳೆ ವೈಫಲ್ಯದಿಂದಾದ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ 450 ಕೋಟಿ ರು. ಹಣವನ್ನು ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರವು ಬರ ಪರಿಹಾರಕ್ಕಾಗಿ 4703 ಕೋಟಿ ರು. ನೆರವು ಕೋರಿತ್ತು. ಆದರೆ, ಕೇಂದ್ರ ಸರ್ಕಾರ 1782 ಕೋಟಿ ರು. ಮೊತ್ತಕ್ಕೆ ಮಂಜೂರಾತಿ ನೀಡಿತ್ತು. ಆದರೆ, ಆ ಹಣವೂ ಬಿಡುಗಡೆಯಾಗಿರಲಿಲ್ಲ.[ಬರ ಪರಿಹಾರ: ಕೇಂದ್ರದಿಂದ ರು 4703 ಕೋಟಿ ನೆರವು ಬೇಡಿದ ಸಿಎಂ]

Cetre releases Rs. 450 Cr. as drought relife fund to Karnataka

ಈ ಹಿನ್ನೆಲೆಯಲ್ಲಿ ಚಾಮರಾಜ ನಗರದ ಕಾಂಗ್ರೆಸ್ ಸಂಸದ ಧ್ರುವ ನಾರಾಯಣ್ ಲೋಕಸಭೆಯಲ್ಲಿ ಗುರುವಾರ ಈ ಬಗ್ಗೆ ದನಿಯೆತ್ತಿದ್ದರು. ಇದಕ್ಕೆ ಉತ್ತರ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಲ್ಲಿ (ಎನ್ ಡಿಆರ್ ಎಫ್) ಹಣ ಇಲ್ಲದಿರುವುದರಿಂದ ವಿಳಂಬವಾಗಿದೆ ಎಂದು ತಿಳಿಸಿದರಲ್ಲದೆ, ಬೇರೆ ನಿಧಿಯಿಂದ ಎನ್ ಡಿಆರ್ ಎಫ್ ಗೆ ಹಣ ವರ್ಗಾಯಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಅರುಣ್ ಜೇಟ್ಲಿಯವರ ಆಶ್ವಾಸನೆ ಮೇರೆಗೆ ಗುರುವಾರ ಸಂಜೆ ವೇಳೆಗೆ ಹಣ ಬಿಡುಗಡೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The centre has released Rs. 450 crores of drought relief fund to Karnataka. The centre had sactioned Rs. 1782 crores to Karnataka as drought relief fund. But, so far not a rupee was released. Congress MP Dhruvanarayan who represents Chamarajanagar, has raised the question about the delay in fund release on Thursday. In resposence to that the centre has released the fund.
Please Wait while comments are loading...