ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷದಿಂದ ಆನ್‌ಲೈನ್‌ನಲ್ಲಿ ನಡೆಯಲಿದೆ ಸಿಇಟಿ ದಾಖಲೆಗಳ ಪರೀಶಿಲನೆ

|
Google Oneindia Kannada News

ಬೆಂಗಳೂರು, ಜುಲೈ 15: ಸಾಮಾನ್ಯ ಪ್ರವೇಶ ಪರೀಕ್ಷೆ (CET) ವಿದ್ಯಾರ್ಥಿಗಳು ಈ ವರ್ಷದಿಂದ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲನೆಗೆ ನೀಡಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2022-23 ಶೈಕ್ಷಣಿಕ ವರ್ಷದಿಂದ ಆನ್‌ಲೈನ್ ದಾಖಲೆ ಪರಿಶೀಲನೆ ವ್ಯವಸ್ಥೆಯನ್ನು ಯೋಜಿಸುತ್ತಿದೆ ಮತ್ತು ಇದೇ ಉದ್ದೇಶಕ್ಕಾಗಿ ವಿಶೇಷ ಸಾಫ್ಟ್‌ವೇರ್ ಅನ್ನು ಪ್ರಾರಂಭಿಸುತ್ತಿದೆ.

ಇನ್ನು ಮುಂದೆ ದಾಖಲಾತಿಗಳ ಪರಿಶೀಲನೆಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೇಂದ್ರ ಕಚೇರಿ ಮತ್ತು ಇತರ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿಲ್ಲ.

ಎಂಜಿನಿಯರಿಂಗ್, ಬಿಎಸ್ಸಿ (ಕೃಷಿ) ಮತ್ತು ಇತರ ವೃತ್ತಿಪರ ಕೋಸ್‌ ಪ್ರವೇಶ ಪರೀಕ್ಷೆಯಾದ ಸಿಇಟಿ ಈ ವರ್ಷ ಜೂನ್ 16 ರಿಂದ 18 ರ ನಡುವೆ ನಡೆದಿದ್ದು, ಶೀಘ್ರದಲ್ಲೇ ಫಲಿತಾಂಶಗಳನ್ನು ಪ್ರಕಟಿಸಲು ಕೆಇಎ ಯೋಜಿಸುತ್ತಿದೆ.

CET rank holders can get their documents verification online

ಸಿಇಟಿಯ ಇತರ ಪ್ರಕ್ರಿಯೆಗಳಾದ ಅರ್ಜಿ ಹಾಕುವುದು ಮತ್ತು ಪಾವತಿ ಮಾಡಲು ಈಗಾಗಲೇ ಆನ್‌ಲೈನ್‌ನಲ್ಲಿ ಅವಕಾಶವಿದೆ. ಆದರೆ ದಾಖಲೆಗಳ ಪರಿಶೀಲನೆಗಾಗಿ, ವಿದ್ಯಾರ್ಥಿಗಳು ಕೇಂದ್ರಗಳಲ್ಲಿ ಖುದ್ದಾಗಿ ಹಾಜರಾಗಬೇಕಾಗಿತ್ತು. ಈ ಪ್ರಕ್ರಿಯೆಯು ಕೆಲವೊಮ್ಮೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದಲ್ಲಿರುವ ಕೇಂದ್ರಗಳಿಗೆ ಹೋಗಲು ತೊಂದರೆಯಾಗುತ್ತಿತ್ತು.

"2022-23ರ ಶೈಕ್ಷಣಿಕ ವರ್ಷದಿಂದ ನಾವು ಸಿಇಟಿ ದಾಖಲೆ ಆನ್‌ಲೈನ್ ಪರಿಶೀಲನೆ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಕೆಇಎ ವಿಶೇಷ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ. ಈ ವರ್ಷದಿಂದ ವಿದ್ಯಾರ್ಥಿಗಳು ಸಿಇಟಿ ದಾಖಲೆ ಪರಿಶೀಲನೆಗಾಗಿ ಕೆಇಎ ಅಥವಾ ಇತರೆ ಯಾವುದೇ ಜಿಲ್ಲಾ ದಾಖಲೆ ಪರಿಶೀಲನೆ ಕೇಂದ್ರಗಳಿಗೆ ಬರಬೇಕಾಗಿಲ್ಲ. ಇನ್ನು ನೀಡಬೇಕಾದ ದಾಖಲೆಗಳ ಕುರಿತು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಫೋನ್‌ಗೆ ಸಂದೇಶ ಕಳುಹಿಸುತ್ತೇವೆ" ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ವಿಶೇಷ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ..?

ಕೆಇಎ ಕೌನ್ಸೆಲಿಂಗ್ ನಡೆಸುತ್ತಿದೆ, ಕೌನ್ಸೆಲಿಂಗ್ ನಡೆಸುವಾಗ ಆನ್‌ಲೈನ್ ನೋಂದಣಿ ಮತ್ತು ದಾಖಲೆ ಪರಿಶೀಲನೆ ಸೇರಿದಂತೆ ಇತರ ಪ್ರಕ್ರಿಯೆಗಳು ಸೇರಿವೆ. ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ, ವಿದ್ಯಾರ್ಥಿಗಳು ಆ ನಿರ್ದಿಷ್ಟ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ ಮತ್ತು ಇತರ ವಿವರಗಳೊಂದಿಗೆ ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ವಿಶೇಷ ವರ್ಗದ ಮೀಸಲಾತಿಯನ್ನು ಈಗಾಗಲೇ ತೆಗೆದುಕೊಂಡಿದ್ದಾರೆ. ಹೀಗಾಗಿ ಆನ್‌ಲೈನ್ ಅರ್ಜಿಯಲ್ಲಿ ದಾಖಲಾಗಿರುವ ನಿರ್ದಿಷ್ಟ ಆರ್‌ಡಿ ಸಂಖ್ಯೆಗಳ ಆಧಾರದ ಮೇಲೆ ಜಾತಿ, ಆದಾಯ ಮತ್ತು ಇತರ ಮೀಸಲಾತಿ ಪ್ರಮಾಣಪತ್ರಗಳನ್ನು ಕಂದಾಯ ಇಲಾಖೆಯ ಸಹಾಯದೊಂದಿಗೆ ಪರಿಶೀಲಿಸುತ್ತದೆ. ವಿದ್ಯಾರ್ಥಿಗಳು ಏಳು ವರ್ಷಗಳ ಅಧ್ಯಯನ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ, ಗ್ರಾಮೀಣ ಪ್ರಮಾಣಪತ್ರದಂತಹ ವಿಶೇಷ ವರ್ಗದ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಸರಿಯಾಗಿ ಸಹಿ ಮಾಡಿಸಿರಬೇಕು.

CET rank holders can get their documents verification online

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿಜಿಟಲ್ ಸಿಗ್ನೇಚರ್ ಕೀ, ಲಾಗಿನ್ ಮತ್ತು ಪಾಸ್‌ವರ್ಡ್ ಅನ್ನು ಬಿಇಒಗಳು ಮತ್ತು ಡಿಡಿಪಿಐಗೆ ಒದಗಿಸಿದೆ. ವಿದ್ಯಾರ್ಥಿಗಳು ವಿಶೇಷ ವರ್ಗದ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಿದ್ದರೆ, ಸಂಬಂಧಪಟ್ಟ ಬಿಇಒ ಅಥವಾ ಡಿಡಿಪಿಐ ವಿದ್ಯಾರ್ಥಿಗಳ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಕೆಇಎಗೆ ಕಳುಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಂಕ ಪಟ್ಟಿಯನ್ನು ನೇರವಾಗಿ SSLC ಬೋರ್ಡ್ ಮತ್ತು ಪ್ರಿ-ಯೂನಿವರ್ಸಿಟಿ ಶಿಕ್ಷಣ ಇಲಾಖೆ ಮತ್ತು ಇತರ ಮಂಡಳಿಗಳಿಂದ ಪಡೆಯಲಾಗುತ್ತದೆ. ಆನ್‌ಲೈನ್ ಅರ್ಜಿಯ ಮೂಲಕ ಸಲ್ಲಿಸಿದ ಅಂಕ ಪಟ್ಟಿಗಳ ಫೋಟೋಕಾಪಿಗಳ ಆಧಾರದ ಮೇಲೆ 2022 ರ ಮೊದಲು 12 ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಇತರ ವಿದ್ಯಾರ್ಥಿಗಳ ಅಂಕಗಳ ವಿವರಗಳನ್ನು ಪರಿಶೀಲಿಸಲಾಗುತ್ತದೆ'.

ಮೀಸಲಾತಿ ಸೌಲಭ್ಯ ಇರುವವರಿಗೆ:

ಆದರೆ, ರಕ್ಷಣೆ, ಮಾಜಿ ರಕ್ಷಣಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಡಿಯಲ್ಲಿ ಮೀಸಲಾತಿಯನ್ನು ಪಡೆಯುವ ವಿದ್ಯಾರ್ಥಿಗಳು ಮೂಲ ದಾಖಲೆಗಳೊಂದಿಗೆ ತಾವೇ ದಾಖಲೆ ಪರಿಶೀಲನೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಬೇಕು. ಇವರಿಗೆ ಅನ್‌ಲೈನ್‌ನಲ್ಲಿ ದಾಖಲೆ ಪರಿಶೀಲನೆಗೆ ಅವಕಾಶವಿಲ್ಲ.

ಇನ್ನು, ಆನ್‌ಲೈನ್‌ ಅಪ್ಲಿಕೇಶನ್‌ನೊಂದಿಗೆ ಯಾವುದೇ ದಾಖಲೆಗಳು ತಪ್ಪಿಹೋದರೆ, ಅವರು ಅಗತ್ಯ ದಾಖಲೆಗಳ ಕುರಿತು ಪ್ರಾಧಿಕಾರ ವಿದ್ಯಾರ್ಥಿಗೆ SMS ಕಳುಹಿಸುತ್ತಾರೆ. ದಾಖಲೆಗಳು ಅಥವಾ ನಿಖರವಾದ ಆರ್‌ಡಿ ಸಂಖ್ಯೆಯನ್ನು ಮತ್ತೆ ದಾಖಲಿಸಲು ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅವಕಾಶಗಳನ್ನು ನೀಡಲಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನೀಡುವಲ್ಲಿ ವಿಫಲವಾದರೆ ಅಥವಾ ತಾಂತ್ರಿಕ ದೋಷಗಳನ್ನು ಎದುರಿಸಿದರೆ, ಅವರು ನೇರವಾಗಿ ಕೇಂದ್ರ ಕಚೇರಿಗೆ ಭೇಟಿ ನೀಡಿಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
CET rank holders can get their documents verified online from this year says karnataka examinations authority,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X