H.D Kumaraswamy: ಸುದ್ದಿಗೋಷ್ಠಿಯಲ್ಲೇ ಏಕಾಏಕಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ: ಆಸ್ಪತ್ರೆಗೆ ಶಿಫ್ಟ್
ಬೆಂಗಳೂರು, ಜುಲೈ 28: ಕರ್ನಾಟಕದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಮೂಗಿನಲ್ಲಿ ಏಕಾಏಕಿ ರಕ್ತಸ್ರಾವವಾಗಿದೆ. ಸುದ್ದಿಗೋಷ್ಠಿ ಮಾತನಾಡುವ ವೇಳೆಯಲ್ಲೇ ದಿಢೀರ್ ಮೂಗಿನಲ್ಲಿ ರಕ್ತ ಸೋರಲು ಆರಂಭಿಸಿದೆ. ಕುಮಾರಸ್ವಾಮಿ ಅವರು ಇದನ್ನು ಮರೆಮಾಚಲು ಯತ್ನಿಸಿದರು ಸಹ ರಕ್ತಸ್ರಾವ ಹೆಚ್ಚಾಗಿದೆ.
ಎಚ್ಡಿ ಕುಮಾರಸ್ವಾಮಿ ಅವರು ಬಳಸುತ್ತಿದ್ದ ಟವೆಲ್‌ನಲ್ಲಿ ರಕ್ತದ ಕಲೆಗಳು ಕಂಡು ಬರುತ್ತಿದ್ದಂತೆ ಸುತ್ತಲಿದ್ದವರು ಆತಂಕಗೊಂಡಿದ್ದಾರೆ.

ಅಧಿಕವಾಗಿ ರಕ್ತಸ್ರಾವವಾಗಿದೆ. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಸಿದ್ದು, ಕೂಡಲೇ ಕುಮಾರಸ್ವಾಮಿ ಅವರನ್ನು ಜೊತೆಯಲ್ಲಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ರಕ್ತಸ್ರಾವ ಹೆಚ್ಚಾದಂತೆ ಖಾಸಗಿ ಹೋಟೆಲ್ನಿಂದ ಕುಮಾರಸ್ವಾಮಿ ಅವರನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಮುಡಾ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಇಂದು (ಜುಲೈ 28) ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಈ ಘಟನೆ ನಡೆದಿದೆ.
ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂದು ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಯೋಜನೆ ರೂಪಿಸಿವೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರು ಕೇಳಿಬಂದಿದ್ದರಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.












Click it and Unblock the Notifications