Bus Ticket Price Hike: ʼಕರ್ನಾಟಕದಲ್ಲಿ ಬಸ್ ಟಿಕೆಟ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣʼ
ಕರ್ನಾಟಕದಲ್ಲಿ ಸಾರಿಗೆ ಬಸ್ ದರ ಜಾಸ್ತಿ ಮಾಡುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಅಂತ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದ್ದು. ಇದರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಅಂತ ಹೇಳ್ತಿದೆ. ಸಾರಿಗೆ ಬಸ್ ದರ ಏರಿಕೆಗೆ ಕೇಂದ್ರ ಸರ್ಕಾರವೇ ಮುಖ್ಯ ಕಾರಣ ಅಂತ ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸಾರಿಗೆ ಬಸ್ ದರ ಜಾಸ್ತಿ ಮಾಡುವ ಅನಿವಾರ್ಯ ಎದುರಾಗಿತ್ತು. ನಾವು ಈ ರೀತಿ ಬಸ್ ದರ ಹೆಚ್ಚಳ ಮಾಡುವುದಕ್ಕೆ ಕಾರಣ ಕೂಡ ಇದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಬಸ್ ದರ ಹೆಚ್ಚಳ ಮಾಡಿರುವುದಕ್ಕೆ ಈಗಾಗಲೇ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸಂತೋಷ್ ಲಾಡ್ ಅವರು, ರಾಜ್ಯದ ಸಾರಿಗೆಯಲ್ಲಿ ನಿತ್ಯ 1.16 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಇದರಲ್ಲಿ 65 ಲಕ್ಷ ಜನ ಹೆಣ್ಣು ಮಕ್ಕಳಿದ್ದಾರೆ. ಅಲ್ಲದೆ 5,300 ಹೊಸ ಬಸ್‌ಗಳನ್ನು ಸಹ ನಾವು ಖರೀದಿ ಮಾಡಿದ್ದೇವೆ. 8000 ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಫೈನಾನ್ಸ್ ಡಿಪಾರ್ಟ್ಮೆಂಟ್ ಅನುಮತಿ ಕೊಟ್ಟಿದೆ ಅಂತನೂ ಅವರು ಹೇಳಿದ್ದಾರೆ.

ಈಗಾಗಲೇ ನಾಲ್ಕರಿಂದ ಐದು ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ ಬಸ್ ದರ ಏರಿಕೆ ಮಾಡಲಾಗಿದೆ.
ಬಿಜೆಪಿ ಅವರು ದರ ಏರಿಕೆಯ ವಿಚಾರವಾಗಿ ಮಾತನಾಡುತ್ತಿದ್ದಾರೆ. ಚರ್ಚೆಗೆ ಬಂದರೆ ಮಾತನಾಡಬಹುದು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ. ಡೀಸೆಲ್ ಬೆಲೆಯನ್ನು 30 ರೂಪಾಯಿಯಿಂದ 40 ರೂಪಾಯಿ ಕೊಡಲು ಅವಕಾಶವಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು 103 ಡಾಲರ್‌ಗೆ 1 ಬ್ಯಾರಲ್ ಖರೀದಿ ಮಾಡಿದ್ದರು. ಆಗ 90 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತಿದ್ದರು. ಆದರೆ,
ಡಿಸೇಲ್ ಮತ್ತು ಪೆಟ್ರೋಲ್ ಜಾಸ್ತಿ ಆಗುವ ಸಂದರ್ಭದಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗುತ್ತವೆ ಎಂದಿದ್ದಾರೆ.

ಸಾಗಾಟ ವೆಚ್ಚ ಜಾಸ್ತಿಯಾದರೆ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಆಗುತ್ತೆ. 2004 ರಿಂದ 2014ರವರೆಗೆ 60ರಿಂದ 56 ರೂಪಾಯಿ ಇತ್ತು. ಇದನ್ನು ಕಡಿಮೆ ಮಾಡುವುದಕ್ಕೆ ಅವಕಾಶ ಇದೆ. ಆದರೆ ರಿಲಯನ್ಸ್ ಪೆಟ್ರೋಲ್ ಬಂಕ್ ಉಳಿಬೇಕು ಎನ್ನುವ ಉದ್ದೇಶದಿಂದ ಕೊಡುತ್ತಿಲ್ಲ. ಕೇಂದ್ರದಲ್ಲಿ ಸಬ್ಸಿಡಿ ಜಾಸ್ತಿ ಮಾಡಿದರೆ ರಿಲಯನ್ಸ್ ಪೆಟ್ರೋಲ್ ಬಂಕ್‌ಗಳು ಹಾಗೂ ನಮ್ಮೊಂದಿಗೆ ಕಾಂಪಿಟೇಷನ್ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ನೀಡಿದ್ದ ಸಬ್ಸಿಡಿ ಮಾದರಿಯನ್ನು ಮತ್ತೆ ಜಾರಿ ಮಾಡಿದರೆ. ಭಾರತದಲ್ಲಿರುವ ರಿಲಯನ್ಸ್ ಬ್ಯಾಂಕ್‌ಗಳೆಲ್ಲಾ ಮುಚ್ಚಿ ಹೋಗುತ್ತವೆ. ಸಬ್ಸಿಡಿ ಜಾರಿ ಮಾಡಿದ ಮೇಲೆ ಉಳಿದೆಲ್ಲಾ ವಸ್ತುಗಳ ಬೆಲೆ ಕಡಿಮೆ ಆಗಲಿದೆ. ಎಲ್ಲಾ ವಿಚಾರಕ್ಕೂ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯ ನಾಯಕರು ಜಿಎಸ್‌ಟಿಗಾಗಿ ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೈ ಪ್ಯಾಜ್ ನಹಿ ಕಾತಿ (ನಾನು ಈರುಳ್ಳಿ ತಿನ್ನುವುದಿಲ್ಲ) ಹೂ ಅಂತ ಹೇಳಿದ್ದರು.
ಕೇಂದ್ರ ಹಣಕಾಸು ಸಚಿವರು ಈ ರೀತಿ ಹೇಳಿಕೆಗಳನ್ನು ಕೊಡಬಹುದೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಅವರು ಈ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತು ಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, ನಾವು ಉಚಿತವಾಗಿ ಸೇವೆ, ಸೌಲಭ್ಯ ಕೊಡುತ್ತಿದ್ದೇವೆ. ಆದರೆ,
ಬಿಜೆಪಿ ಅವರು ಜನರಿಗೆ ಏನಾದರೂ ಕೊಟ್ಟಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ಕಿ ಗ್ಯಾರಂಟಿ ಅಂತ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದಾರಲ್ಲ, ಇದನ್ನು ಯಾರು ಕೊಟ್ಟಿದ್ದು. ದೇಶದಲ್ಲಿ 1.10 ಲಕ್ಷ ಕೋಟಿ ಕೇಂದ್ರದಲ್ಲಿ ಬಜೆಟ್ ಇರಿಸಿ. ಆಹಾರ ಭದ್ರತೆ ಕಾಯ್ದೆ ತಂದವರು. ಆದರೆ, ಇವರು 2 ರೂಪಾಯಿ ಸಬ್ಸಿಡಿ ಕೊಟ್ಟು, 20 ಸಾವಿರ ಕೋಟಿಯಷ್ಟು ಪ್ರಚಾರ ತೆಗೆದುಕೊಂಡಿದ್ದಾರೆ. ಒಂದೊಮ್ಮೆ ಕೇಂದ್ರ ಸರ್ಕಾರವು ತೈಲ ಬೆಲೆ ಇಳಿಸಿದರೆ. ಬಸ್ ಪ್ರಯಾಣದ ಬೆಲೆಯು ತನ್ನಿಂದ ತಾನೇ ಇಳಿಯಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications