Bellary: ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ: ಕಂಪನಿಗೆ ದಂಡ ಹಾಕುವ ಶಿಫಾರಸಿಗೆ ಅಂಗೀಕಾರ
ಬಳ್ಳಾರಿ, ನವೆಂಬರ್ 20: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಾಯ್ದಿರಿಸಿದ್ದ ಅರಣ್ಯ ಪ್ರದೇಶದಲ್ಲಿ ದಶಕಗಳಿಂದಲೂ ಗಣಿಗಾರಿಕೆ ನಡೆಸಿಕೊಂಡು ಬಂದಿದ್ದ NMDC ಕಂಪನಿಗೆ ಸರ್ಕಾರ ಬಿಸಿ ಮುಟ್ಟಿಸಲಿದೆ. ಕಂಪನಿಗೆ ದಂಡ ವಿಧಿಸಿರುವ ಕಳುಹಿಸಿದ್ದ ಶಿಫಾರಸಿಗೆ ಕೇಂದ್ರ ಸಮಿತಿ ಅನುಮತಿ ನೀಡಿದೆ. ಈ ಮೂಲಕ ಗಣಿಗಾರಿಕೆಯು ಈ ಕಂಪನಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.
ಸಂಡೂರಿನಲ್ಲಿ 239 ಎಕರೆ ಕಾಯ್ದಿರಿಸಿದ ಅರಣ್ಯ ಭೂಮಿಯಲ್ಲಿ ಕಳೆದ 44 ವರ್ಷಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿಗೆ ರಾಜ್ಯ ಸರ್ಕಾರ ದಂಡ ವಿಧಿಸಲಿದೆ. ಈ ಎನ್‌ಎಂಡಿಸಿ ಕಂಪನಿಯು ಅರಣ್ಯ (ಸಂರಕ್ಷಣೆ) ಕಾಯಿದೆ ಬರುವ ಅಂದರೆ 1977 ರಲ್ಲಿ 1,502 ಎಕರೆ ಗಣಿಗಾರಿಕೆ ಗುತ್ತಿಗೆ ಪಡೆದು ಕೆಲಸ ಆರಂಭಿಸಿತ್ತು. 1980 ರಲ್ಲಿ ಕಾಯಿದೆ ಜಾರಿಗೆ ಬಂತು. ಬಳಿಕವೇ ಈ ಗಣಿಗಾರಿಕೆ ಕಂಪನಿಯು 249.37 ಎಕರೆಗೆ ಅನುಮತಿ ಪಡೆಯುವಲ್ಲಿ ನಿಯಮ ಉಲ್ಲಂಘಿಸಿದೆ ಎಂಬುದು ಗೊತ್ತಾಗಿದೆ.

ಇದಾದ ಮೇಲೆ 1997 ರಲ್ಲಿ ಗುತ್ತಿಗೆಗಳನ್ನು ನವೀಕರಿಸಿದರೂ ಸಹಿತ ಗಣಿಗಾರಿಕೆಗೆ ಪಡೆದ ಒಟ್ಟು 582.27 ಎಕರೆ ಅರಣ್ಯ ಭೂಮಿಯಲ್ಲಿ ಅಲ್ಲಲ್ಲಿ (ಪ್ಯಾಚ್‌ಗಳಲ್ಲಿ) ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ 2022ರಲ್ಲಿ ಕಂಪನಿಯು ಉಲ್ಲಂಘನೆಯನ್ನು ಕ್ರಮ ಬದ್ಧಗೊಳಿಸಲು ಕೋರಿ ಅರ್ಜಿ ಸಲ್ಲಿಸಿತ್ತು ಎಂದು ಡಿಎಚ್ ವರದಿ ಮಾಡಿದೆ.
ಸಮೃದ್ಧ ವನ್ಯಜೀವಿ ಪ್ರದೇಶ ಇಲ್ಲಿದೆ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಅಧಿಕಾರಿಗಳು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಕ್ರಮ ಬದ್ಧಗೊಳಿಸಲು ಕೋರಲಾದ ಅರಣ್ಯ ಪ್ರದೇಶವು ಚಿರತೆ, ಕರಡಿ, ನರಿ ಮತ್ತು ಹುಲಿಗಳನ್ನು ಒಳಗೊಂಡ ಸಮೃದ್ಧ ವನ್ಯಜೀವಿ ತಾಣವಾಗಿದೆ ಎಂಬುದು ಗೊತ್ತಾಗಿದೆ. ವಿವಿಧ ಜಾತಿಯ ಪಕ್ಷಗಳು ಇಲ್ಲಿವೆ.

ಇದೆಲ್ಲ ಅಂಶಗಳನ್ನು ಅರಣ್ಯ ಸಲಹಾ ಸಮಿತಿಯು ಉಲ್ಲೇಖಿಸಿದ್ದು, ಎನ್‌ಎಂಡಿಸಿ ಅಧಿಕಾರಿಗಳು ನಿಯಮ ಪಾಲನೆಯಲ್ಲಿ ವಿಫಲವಾಗಿದ್ದಾರೆ. ಹೀಗಿದ್ದರೂ ಗಣಿಗಾರಿಕೆ ಮುಂದುವರಿಸಿದ್ದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಸದ್ಯ ಅರಣ್ಯ ಪರಿಸರಕ್ಕೆ ಆದ ಅನ್ಯಾಯ ಸರಿದೂಗಿಸಲು, ಕಂಪನಿಯು ಗುಡೇಕೋಟೆ ಸ್ಲಾತ್ ಕರಡಿ ಅಭಯಾರಣ್ಯದ ಪಕ್ಕದ 95 ಎಕರೆ ಪ್ರದೇಶದಲ್ಲಿ ಸಂರಕ್ಷಣೆ ಮಾಡಲು ಮುಂದಾಗಿದೆ.
ನಿರ್ವಹಣಾ ಯೋಜನೆ ರೂಪಿಸಲು ನಿರ್ದೇಶನ
ಗಣಿಗಾರಿಕೆ ಕಂಪನಿಯಿಂದ ಒಟ್ಟು 582.27 ಎಕರೆ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘನೆ ಆಗಿದೆ. ಇದರ ಆಧಾರದಲ್ಲಿ ರಾಜ್ಯ ಅರಣ್ಯ ಇಲಾಖೆಯು ಗುತ್ತಿಗೆ ಪಡೆದ ಸಂಪೂರ್ಣ ಪ್ರದೇಶವನ್ನೇ ಪರಿಶೀಲಿಸುವಂತೆ ಸೂಚಿಸಲಾಗಿದೆ. ಕೇಂದ್ರ ಸಮಿತಿ ದಂಡವನ್ನು 249.37 ಎಕರೆಗೆ ಸೀಮಿತಗೊಳಿಸದೇ ಉಳಿದ 342.92 ಎಕರೆಗೆ ಅರಣ್ಯ ಪ್ರದೇಶಕ್ಕೂ ನಿರ್ವಹಣಾ ಯೋಜನೆ ರೂಪಿಸಲು ಸಮಿತಿ ನಿರ್ದೇಶಿಸಿದೆ.
ಕರ್ನಾಟಕ ಸರ್ಕಾರ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಸಂಯೋಜಿತ ವನ್ಯಜೀವಿ ನಿರ್ವಹಣಾ ಯೋಜನೆ ಸಿದ್ಧಪಡಿಸುತ್ತಿದೆ. ಅದನ್ನು ಕಂಪನಿಯ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯೋಚಿಸಿದೆ ಎಂದು ಹೆಚ್ಚುವರಿ ಅರಣ್ಯ ನಿರ್ದೇಶಕರು (ಅರಣ್ಯ ಸಂರಕ್ಷಣೆ) ಎಸ್‌ಪಿ ಯಾದವ್ ತಿಳಿಸಿದರು. ಸದ್ಯ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದು ಸಮಿತಿ ತಿಳಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications