• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಜಿಕಲ್ ಸ್ಟ್ರೈಕ್ 2: ಕರ್ನಾಟಕಾದ್ಯಂತ ಸಂಭ್ರಮಾಚರಣೆ

|

ಬೆಂಗಳೂರು, ಫೆಬ್ರವರಿ 26: ಎಲ್ಲೆಡೆ ಭಾರತ ಮಾತೆಗೆ, ಯೋಧರಿಗೆ ಜೈಕಾರ ಉಗ್ರರು ನೀಡಿದ್ದ ನೋವಿಗೆ ಸ್ವಲ್ಪವಾದರೂ ತಿರುಗಿ ನೀಡಿದ್ದೇವಲ್ಲ ಎನ್ನುವ ಕೊಂಚ ನೆಮ್ಮದಿ ಇದರ ಮಧ್ಯೆ ಕರ್ನಾಟಕ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿತ್ತು.

ಪಟಾಕಿ ಸಿಡಿಸಿ, ಭಾರತ ಮಾತೆಗೆ ಜೈ ಎಂದು ಉದ್ಘರಿಸುತ್ತಾ ಇಂದಿನ ಸರ್ಜಿಕಲ್ ಸ್ಟ್ರೈಕ್ ಗೆ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಯುಸೇನೆ ಜೈಷ್ ಸಂಘಟನೆಯ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ರಿಂದ ಸಂತಸಗೊಂಡಿರುವ ಭಾರತೀಯರು ಕರ್ನಾಟಕಾದ್ಯಂತ ವಿವಿಧೆಡೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್

ಕೊಪ್ಪಳ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರತೀಯ ಸೇನೆಗೆ ಜೈಕಾರ ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಉಗ್ರರ ದಾಳಿಯ ಎರಡು ವಾರಗಳ ಬಳಿಕ ಭಾರತೀಯ ಸೇನೆ ದಾಳಿ ಸೇಡು ತೀರಿಸಿಕೊಂಡಿದ್ದು, ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ಎಂದೇ ಹೇಳಲಾಗುತ್ತಿದೆ.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

ಅಡಗುತಾಣಗಳ ಮೇಲೆ ಮುಂಜಾನೆ 3.30ರ ವೇಳೆಗೆ ನಡೆಸಿದ ದಾಳಿಯಲ್ಲಿ 1000 ಕೆ.ಜಿ ಬಾಂಬ್ ಹಾಕಿ ಉಗ್ರರ ನೆಲೆಯನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ. ದಾಳಿಯಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

English summary
Across the state celebration have started after Surgical strike 2 conducted against Pakistan terror group by Our Indian Air Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X