Honey Trap: ಹನಿಟ್ರ್ಯಾಪ್ ಲೇಡಿಯ ಮೊಬೈಲಲ್ಲಿ 8 ಪ್ರಭಾವಿಗಳ ವಿಡಿಯೋ ಪತ್ತೆ, ಯಾರವರು?
ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ವಸೂಲಿಗೆ ಇಳಿದಿದ್ದ ಆರೋಪದ ಮೇರೆಗೆ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಅಧ್ಯಕ್ಷೆ ಮಂಜುಳಾ ಪಾಟೀಲ್ ಎಂಬುವರನ್ನು ಸಿಸಿಬಿ ಪೊಲೀಸರು ನಿನ್ನೆ ಅರೆಸ್ಟ್ ಮಾಡಿದ್ದರು. ಇನ್ನು ಈಕೆಯ ಮೊಬೈಲ್ ಫೋನ್‌ನಲ್ಲಿ ಪ್ರಭಾವಿಗಳ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿದ್ದ ನಾಯಕಿಯೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಕ್ಷದ ನಾಯಕಿ ಮಂಜುಳಾ ಪಾಟೀಲ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಮಂಜುಳಾ ಅಶ್ಲೀಲ ಚಾಟ್ ಮಾಡುವ ಮೂಲಕ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದರು ಎನ್ನುವ ಆರೋಪವಿದೆ. ಈ ಸಂಬಂಧ ಮಂಜುಳಾ ಹಾಗೂ ಆಕೆಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಮಂಜುಳಾ ಪಕ್ಷದ ಮಾಜಿ ಸಚಿವರಿಗೆ ವಾಟ್ಸಪ್‌ನಲ್ಲಿ ಅಶ್ಲೀಲವಾಗಿ ಸಂದೇಶಗಳನ್ನು ಕಳಿಸಿ, ನಂತರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆ ರಾಜಕಾರಣಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದರು ಎಂದು ಹೇಳಲಾಗಿದೆ.

ಈ ಸಂಬಂಧ ಮಾಜಿ ಸಚಿವನ ಪುತ್ರ ನೀಡಿದ್ದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ನಿನ್ನೆ ಬೆಂಗಳೂರಿನಲ್ಲಿ ಬಂಧಿಸಿದ್ದರು. ಹನಿಟ್ರ್ಯಾಪ್ ಹಾಗೂ ಅಶ್ಲೀಲ ಚಾಟ್‌ಗಳನ್ನು ಬಹಿರಂಗಪಡಿಸದಿರಲು ಬರೋಬ್ಬರಿ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಹಣ ಪಡೆಯಲು ನಿನ್ನೆ ಬೆಂಗಳೂರಿಗೆ ಬಂದಿದ್ದಾಗ ದಂಪತಿಯನ್ನು ಪೊಲೀಸರು ಲಾಕ್ ಮಾಡಿದ್ದರು.
ಸದ್ಯ ಸಿಸಿಬಿ ಬಲೆಯಲ್ಲಿರುವ ಮಂಜುಳಾ ಪಾಟೀಲ್ ಬ್ಯಾಗ್‌ನಲ್ಲಿ ಐದಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಅದನ್ನು ಪರಿಶೀಲಿಸಿದಾಗ ಇನ್ನೂ ಎಂಟು ಮಂದಿ ಪ್ರಭಾವಿಗಳ ಅಶ್ಲೀಲ ವಿಡಿಯೋಗಳಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಮಂಜುಳಾ ಪಾಟೀಲ್ ಮೊಬೈಲ್‌ನಲ್ಲಿ ಮಾಜಿ ಸಚಿವ ಸೇರಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ಪೊಲೀಸ್ ಅಧಿಕಾರಿ, ಪಿಡಬ್ಲ್ಯೂಡಿ ಅಧಿಕಾರಿ ಸೇರಿದಂತೆ ಎಂಟು ಮಂದಿಯ ಅಶ್ಲೀಲ ವಿಡಿಯೋಗಳು ಕೂಡ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಸದ್ಯ ಸಿಸಿಬಿ ಪೊಲೀಸರು ಈ ವಿಡಿಯೋಗಳ ಬೆನ್ನುಹತ್ತಿದ್ದಾರೆ. ಅಲ್ಲದೆ, ಮಂಜುಳಾ ಪಾಟೀಲ್ ಇದೇ ಹನಿಟ್ರ್ಯಾಪ್ ದಂಧೆ ನಡೆಸುತ್ತಿರುವುದು ಕೂಡ ಖಚಿತವಾಗಿದೆ. ಹಲವರಿಗೆ ಅಶ್ಲೀಲ ಮೆಸೇಜ್ ಕಳಿಸಿ, ಖೆಡ್ಡಾಗೆ ಬೀಳಿಸಿಕೊಂಡು ಹಣ ವಸೂಲಿಗೆ ಇಳಿದಿದ್ದಳು ಎನ್ನಲಾಗಿದೆ.
ನಿನ್ನೆಯಿಂದ ಸಿಸಿಬಿ ಪೊಲೀಸರ ವಶದಲ್ಲಿರುವ ಮಂಜುಳಾ ಪಾಟೀಲ್ ದಂಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋರ್ಟ್‌ಗೂ ಆರೋಪಿಗಳನ್ನು ಹಾಜರುಪಡಿಸಲಾಗಿದ್ದು, ಸದ್ಯ ಎಂಟು ದಿನ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ. ಮಂಜುಳಾ ಅವರ ದಂಧೆಯ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೊಬೈಲ್‌ನಲ್ಲಿ ಪತ್ತೆಯಾದ ಪ್ರಭಾವಿಗಳ ವಿಡಿಯೋಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications