ನಿರ್ವಹಣಾ ಮಂಡಳಿ ರಚನೆ ಅದೇಶವೇ ನ್ಯಾಯಾಂಗ ನಿಂದನೆ: ಅಚಾರ್ಯ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು. ಸೆಪ್ಟೆಂಬರ್ 26: "ನಿಮ್ಮ ಹತ್ತಿರ ಎರಡು ಬಕೆಟ್ ನಷ್ಟು ನೀರಿದೆ. ಮುಂದಿನ ಎರಡು ವಾರಕ್ಕೆ ಅಂತ ಇಟ್ಟುಕೊಂಡಿರ್ತೀರಿ. ನಿಮ್ಮ ಪಕ್ಕದ ಮನೆಯವರಿಗೆ ಆ ನೀರನ್ನು ಕೊಡಿ ಅಂತ ಯಾರಾದರೂ ಹೇಳಿದರೆ ನೀವೇನು ಮಾಡ್ತೀರಿ? ಕಾವೇರಿ ನೀರು ಹರಿಸುವುದಕ್ಕೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಕ್ಕೆ ಕರ್ನಾಟಕ ಹಾಗೇ ಪ್ರತಿಕ್ರಿಯಿಸಿದೆ. ಇದು ನ್ಯಾಯಾಂಗ ನಿಂದನೆ ಆಗೋದಿಲ್ಲ"

- ಹಿರಿಯ ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು ವೆಬ್ ಸೈಟ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉದಾಹರಣೆ ಸಹಿತ ವಿವರಿಸಿದ ರೀತಿ ಇದು.

ಕಳೆದ ಶುಕ್ರವಾರ ಕರ್ನಾಟಕ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ "ಜಲಾಶಯಗಳಲ್ಲಿ ಇರುವ ನೀರು ರಾಜ್ಯದಲ್ಲಿ ಕುಡಿಯುವ ಉದ್ದೇಶಕ್ಕೆ ಮಾತ್ರ ಆಗುತ್ತದೆ" ಎಂದು ಒಕ್ಕೊರಲಿನಿಂದ ಹೇಳಲಾಯಿತು. ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಎಂಟು ದಿನಗಳ ಕಾಲ ಆರು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿತು.[ಕರ್ನಾಟಕದಿಂದ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ]

Cauvery Water Management Board order is a contempt of court

'ಬಾಕಿ' ನೀರನ್ನು ಡಿಸೆಂಬರ್ ಕೊನೆಗೆ ಬಿಡುಗಡೆ ಮಾಡಬಹುದು ಎಂದು ಕರ್ನಾಟಕವು ಸುಪ್ರೀಂ ಕೋರ್ಟ್ ಗೆ ಹೇಳಿತು. 2013ರ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕವು 134 ಟಿಎಂಸಿ ಅಡಿ ನೀರನ್ನು ಜೂನ್ ಹಾಗೂ ಸೆಪ್ಟೆಂಬರ್ ಮಧ್ಯೆ ಬಿಡುಗಡೆ ಮಾಡಬೇಕಿತ್ತು.

ಆದರೆ, ನೀರಿನ ಕೊರತೆ ಆಗಿದ್ದರಿಂದ ಈ ಅವಧಿಯಲ್ಲಿ 52.4 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. "ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುವುದಕ್ಕೆ ಸಾಧ್ಯವಿಲ್ಲ" ಎಂದು ಹೇಳಿರುವುದು ಸರಿಯಾದ ನಿರ್ಧಾರ ಎನ್ನುತ್ತಾರೆ ಬಿ.ವಿ.ಆಚಾರ್ಯ.[ನಿರ್ದೇಶಕ ಗಿರಿರಾಜ್ ಕಾವೇರಿ ನೀರು ನಿರ್ವಹಣೆ' ವಿಡಿಯೋ 'ವೈರಲ್]

"ಸುಪ್ರೀಂ ಕೋರ್ಟ್ ಅದೇಶ ಹೇಗಿದೆ ಅಂದರೆ, ಅದನ್ನು ಜಾರಿಗೆ ತರುವುದಕ್ಕೆ ಸಾಧ್ಯವೇ ಇಲ್ಲ. ಇಂಥ ಆದೇಶ ನೀಡಿದ್ದಕ್ಕೆ ಕೋರ್ಟ್ ನ ಬಗ್ಗೆ ಏನಾದರೂ ಅಂದುಕೊಳ್ಳಬೇಕಷ್ಟೆ. ಇಂಥ ಸನ್ನಿವೇಶದಲ್ಲಿ ನ್ಯಾಯಾಂಗ ನಿಂದನೆ ಹೇಗೆ ಆಗುವುದಿಕ್ಕೆ ಸಾಧ್ಯ" ಎಂದು ಪ್ರಶ್ನಿಸುತ್ತಾರೆ ಆಚಾರ್ಯ.

ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಪ್ರಕಾರ: ಕರ್ನಾಟಕ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಮೀರುವ ಮೂಲಕ ಕರ್ನಾಟಕ ಸರಕಾರ ತನ್ನ ಜವಾಬ್ದಾರಿಯ ನಿರ್ವಹಣೆಯಲ್ಲಿ ವಿಫಲವಾಗಿದೆ.[ಕುಡಿಯುವುದಕ್ಕೆ ಮಾತ್ರ ಕಾವೇರಿ: ನಿರ್ಣಯದ ಪೂರ್ಣ ಪಾಠ]

ಆದರೆ, ಈ ಮಾತನ್ನು ಒಪ್ಪದ ಆಚಾರ್ಯ, ಇದರಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟಿಲ್ಲ. ನಾನು ಹೇಳೋದು ಇಷ್ಟೇ: ಸಂವಿಧಾನದ ಎರಡು ಸ್ತಂಬಗಳ ಮಧ್ಯೆ ಭಿನ್ನ ಅಭಿಪ್ರಾಯಗಳಿವೆ. ಕರ್ನಾಟಕದ ಜನರ ಮಾನವ ಹಕ್ಕನ್ನು ಸುಪ್ರೀಂ ಕೋರ್ಟ್ ನಿರ್ಲಕ್ಷಿಸಿದೆ. ನೀರಿನ ಸಂಗ್ರಹ ಬಿಡುಗಡೆ ಮಾಡಿ ಎಂದು ಆದೇಶಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುತ್ತಾರೆ.

ಕರ್ನಾಟಕ ಅಲ್ಲ, ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಎಂದು ಆದೇಶಿಸಿದರಲ್ಲ ಆ ಇಬ್ಬರ ನ್ಯಾಯಮೂರ್ತಿಗಳದು ನ್ಯಾಯಾಂಗ ನಿಂದನೆ ಆಗುತ್ತದೆ. ಮುಖ್ಯ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರ ಇನ್ನೂ ವಿಚಾರಣೆ ಹಂತದಲ್ಲಿದೆ. ಇಂಥ ಸನ್ನಿವೇಶದಲ್ಲಿ ನಿರ್ವಹಣಾ ಮಂಡಳಿ ರಚಿಸಿ ಎಂದು ಹೇಗೆ ಆದೇಶಿಸಿದರು ಎಂದು ಆಚಾರ್ಯ ಪ್ರಶ್ನಿಸುತ್ತಾರೆ.[ಜಾಣ್ಮೆಯ ನಡೆ : ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ!]

ತಮಿಳುನಾಡು ಜನರ ಹಕ್ಕಿನ ವಿಚಾರವಾಗಿ ಏನು ಹೇಳ್ತೀರಿ ಅಂದರೆ, ನೀರು ಬಿಡುವ ಪ್ರಮಾಣ ನಿರ್ಧಾರ ಆಗಿರುವುದು ಉತ್ತಮವಾಗಿ ಮಳೆಯಾದ ವರ್ಷಗಳಲ್ಲಿ. ಮಳೆ ಕಡಿಮೆಯಾದ ವರ್ಷಗಳಲ್ಲಿ ಅ ಆದೇಶ ಪಾಲನೆ ಮಾಡುವುದಕ್ಕೆ ಆಗಲ್ಲ. ಇರುವ ಸ್ವಲ್ಪ ನೀರನ್ನೇ ಕರ್ನಾಟಕ ಬಿಡುಗಡೆ ಮಾಡಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಬಿ.ವಿ.ಅಚಾರ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The order of the Supreme court is such that it cannot be implemented. The court should be blamed for passing such an order. When there is no way to implement an order, how can that amount to contempt, said by former AG B.V.Acharya.
Please Wait while comments are loading...