Cauvery Issue: ತಮಿಳುನಾಡಿನ ಜತೆಗಿನ ಒಪ್ಪಂದದಿಂದ ಈ ಪರಿಸ್ಥಿತಿ ಬಂದಿದೆ: ಬೊಮ್ಮಾಯಿ

ಮಂಡ್ಯ, ಅಕ್ಟೋಬರ್ 02: ಮಂಡ್ಯ: ರಾಜ್ಯ ಸರ್ಕಾರ ಕಾವೇರಿಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಕಾನೂನು ತಜ್ಞರು, ಹೋರಾಟಗಾರರು ಹಾಗೂ ಪ್ರತಿಪಕ್ಷಗಳ ಅಭಿಪ್ರಾಯ ಪಡೆದು ಸರ್ವ ಸಮ್ಮತವಾದ ಸಂಕಷ್ಟ ಸೂತ್ರ ಸಿದ್ದಪಡಿಸಿ CWMA ಹಾಗೂ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಜಿಲ್ಲೆಯ ರೈತ ಹಿತರಕ್ಷಣಾ ಸಮಿತಿಯವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯದಲ್ಲಿ ಕಾವೇರಿ ಹೋರಾಟವನ್ನು ಜಿವಂತ ಇಟ್ಡಿರುವ ಸುನಂದಮ್ಮ, ಅಂಬುಜಮ್ಮ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.

cauvery-issue-basavaraj-bommai

ನಾವು ಕಾವೇರಿ ವಿಚಾರದಲ್ಲಿ ಹೋರಾಟಗಾರರ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಜನ ಹೋರಾಟಗಾರರ ಜೊತೆಗೆ ಇದ್ದೇವೆ. ಕಾವೇರಿ ವಿವಾದ ಯಾಕೆ ಪದೇ ಪದೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಪರಿಹಾರ ಯಾವಾಗ ಅನ್ನುವುದರ ಆಧಾರದ ಮೇಲೆ ನಮ್ಮ ಹೋರಾಟ ನಡೆಯುತ್ತದೆ. ಕಾವೇರಿ ನದಿ ಹುಟ್ಟಿ ಅತೀ ಹೆಚ್ಚು ನೀರು ಹರಿಯುವುದು ನಮ್ಮ ರಾಜ್ಯದಲ್ಲಿ. ಕಡಿಮೆ ಕ್ಯಾಚ ಮೆಂಟ್ ಏರಿಯಾ ಇದ್ದರೂ ಅತೀ ಹೆಚ್ಚು ನೀರು ಹರಿಯುತ್ತಿದೆ.

ಡ್ಯಾಂ ಕಟ್ಟುವಾಗ ವಿರೋಧ: ಅಂದಿನ ಒಪ್ಪದಿಂದ ಈ ಪರಿಸ್ಥಿತಿ

ತಮಿಳುನಾಡಿಗೆ ಎರಡು ಮಾನ್ಸೂನ್ ಗಳಿವೆ ಅವರಿಗೆ ನೀರಿನ ಕೊರತೆಯಿಲ್ಲ. ಅವರು ಹೆಚ್ಚುವರಿ ನೀರು ಸಮುದ್ರಕ್ಕೆ ಬಿಡುತ್ತಾರೆ. ನಾವು ನೀರು ಉಳಿಸಿಕೊಳ್ಳಲು ನಾಲ್ಕು ಡ್ಯಾಮ್ ಕಟ್ಟಿದ್ದೇವೆ. ಅವರು ಕಾವೇರಿ ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನೇ ಮಾಡಲಿಲ್ಲ. ಕೇವಲ ಎರಡು ಡ್ಯಾಮ್ ಕಟ್ಟಿದ್ದಾರೆ. ಶತಮಾನಗಳಿಂದಲೂ ಕಣ್ಣಂಬಾಡಿ ಕಟ್ಟುವಾಗಲೇ ತಮಿಳುನಾಡಿನ ವಿರೋಧ ಇತ್ತು ಅವರ ಜೊತೆಗೆ ಮಾಡಿಕೊಂಡ ಒಪ್ಪಂದದಿಂದಲೇ ಇಂದು ಈ ಪರಿಸ್ಥಿತಿ ಬಂದಿದೆ ಎಂದರು.

ಟ್ರಿಬ್ಯುನಲ್ ನಲ್ಲಿ ನಮ್ಮ ವಿರುದ್ದ ಆದೇಶ ಆಗಿರುವುದು ನಮ್ಮ ದುರಂತ. ಸಿಡಬ್ಲುಆರ್ ಸಿ, ಸಿಡಬ್ಲುಎಂಎ ಅಧಿಕಾರಿಗಳು ನ್ಯಾಯ ಮಂಡಳಿ ಆದೇಶವನ್ನು ಒಮ್ಮೆ ಓದಿ, ತಮಿಳುನಾಡು ಎಷ್ಟು ನಿರು ಬಳಕೆ ಮಾಡಬೇಕು ಯಾವ ಬೆಳೆ ಬೆಳೆಯಬೇಕು. ಕರ್ನಾಟಕವೂ ಯಾವ ಬೆಳೆ ಬೆಳೆಯಬೇಕು, ಎಷ್ಟು ಜೀರು ಬಳಕೆ ಮಾಡಬೇಕು ಎಂದು ಹೇಳಿದೆ.

ರಾಜ್ಯ ಸರ್ಕಾರ ಇದನ್ನು ಬಲವಾಗಿ ವಾದಿಸಬೇಕಿತ್ತು. ತಮಿಳುನಾಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ನೀರಾವರಿ ಮಾಡಿದೆ. ಸುಮಾರು 67 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ‌. ರಾಜ್ಯ ಸರ್ಕಾರದ ಅಧಿಕಾರಿಗಳು ಇದನ್ನು ಯಾಕೆ ಹೇಳುತ್ತಿಲ್ಲ. ಎಲ್ಲಿಯವರೆಗೂ ಇದನ್ನು ಹೇಳುವುದಿಲ್ಲವೊ ಅಲ್ಲಿಯವರೆಗೂ ಅವರು ನಮ್ಮ ನೀರನ್ನು ಕೇಳುತ್ತಾರೆ ಎಂದು ವಿವರಿಸಿದರು.

ನಾನು ನೀರು ಬಿಡುವುದಿಲ್ಲ ಎಂದು ಹೇಳಿದ್ದೆ

2012 ರಲ್ಲಿ ಸುಪ್ರೀಂ 12 ಟಿಎಂಸಿ ನೀರು ಬಿಡುವಂತೆ ಹೇಳಿತ್ತು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೀರಾ ಇಲ್ಲಾ ನೀರು ಬಿಡುತ್ತಿರಾ ಎಂದು ಕೇಳಿದರು. ನಾನು ಆಗ ನೀರಾವರಿ ಸಚಿವನಾಗಿದ್ದೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೇನೆ ನೀರು ಬಿಡುವುದಿಲ್ಲ ಎಂದು ಹೇಳಿದೆ. ದೆಹಲಿಗೆ ತೆರಳಿ ನಮ್ಮ ವಕೀಲರನ್ನು ಭೇಟಿ ಮಾಡಿ, ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಹೇಳುವಂತೆ ತಿಳಿಸಿದೆ.

ಅವರು ನೀರು ಬಿಟ್ಡರೆ ಮಾತ್ರ ಸುಪ್ರೀಂ ಕೋರ್ಟ್ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಮಾಜಿ ಅಡ್ವೋಡೇಟ್ ಉದಯಹೊಳ್ಳ ಅವರನ್ನು ಕರೆದು, ವಸ್ತು ಸ್ಥಿತಿ ಹೇಳಲು ಹೇಳಿದೆ, ಅವರು ವಾದ ಮಾಡುತ್ತೇನೆ ಎಂದಾಗ ನಮ್ಮ ವಕೀಲರು ತಾವೇ ವಾದ ಮಾಡುವುದಾಗಿ ಹೇಳಿ ಬಲವಾಗಿ ವಾದ ಮಾಡಿದರು ಅದರ ಪರಿಣಾಮ ಕಡಿಮೆ ನೀರು ಬಿಡುವಂತಾಯಿತು. ಸುದೈವ ವಶಾತ್ ಮಳೆಯೂ ಆಯಿತು. ಸಮಸ್ಯೆ ಪರಿಹಾರವಾಯಿತು ಎಂದು ಹಳೆಯ ಘಟನೆಗಳನ್ನು ಬೊಮ್ಮಾಯಿ ಸ್ಮರಿಸಿದರು.

cauvery-issue-basavaraj-bommai

ಸರ್ಕಾರ ಸಮ ಸಮ್ಮತ ಸಂಕಷ್ಟ ಸೂತ್ರ ರಚಿಸಲಿ

ರಾಜ್ಯ ಸರ್ಕಾರ ಕಾವೇರಿ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ತನ್ನ ಕಾನೂನು ತಜ್ಞರೊಂದಿಗೆ ಕುಳಿತು ಸಂಕಷ್ಟ ಸೂತ್ರ ಏನಿರಬೇಕುವೆಂದು ತೀರ್ಮಾನ ಮಾಡಿ, ಪ್ರತಿಪಕ್ಷಗಳು ಹಾಗೂ ಹೋರಾಟಗಾರರ ಅಭಿಪ್ರಾಯ ಪಡೆದು ಸಂಕಷ್ಟ ಸೂತ್ರ ರಚನೆ ಮಾಡಬೇಕು. ಸಂಕಷ್ಟ ಸೂತ್ರ ಸರ್ವ ಸಮ್ಮತವಾಗಿರಬೇಕು ಎಂದು ಸಲಹೆ ನೀಡಿದರು.

ಇನ್ನು ಮೇಕೆದಾಟು ಯೋಜನೆ ಜಾರಿ ಕುರಿತು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಬಲವಾಗಿ ವಾದ ಮಾಡಬೇಕು. ಇದು ತಕ್ಷಣ ಆಗದಿದ್ದರೂ ಮುಂದಿನ ಜನಾಂಗಕ್ಕಾದರೂ ಅನುಕೂಲ ಆಗುತ್ತದೆ ಎಂದು ಹೇಳಿದರು.

ಎಡವಿದ ಸರ್ಕಾರ: ಮೇಕದಾಟು ಬಗ್ಗೆ ವಾದಿಸಲಿ

ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ಎಡವುತ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ನೀರು ಕಡಿಮೆ ಬಿಡುತ್ತಿರುವುದೇ ಸಾಧನೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಸುಪ್ರೀಂ ಕೊರ್ಟ್ ನಲ್ಲಿ ಐಎ ಹಾಕಿದ್ದರೆ ನಮಗೆ ವಾಸ್ತವ ಸ್ಥಿತಿ ಹೇಳಲು ಹೆಚ್ಚು ಅವಕಾಶ ಇರುತ್ತದೆ. ರಾಜ್ಯ ಸರ್ಕಾರ ಮೊದಲು ಐಸಿಸಿ ಮೀಟಿಂಗ್ ಮಾಡಿ ರಾಜ್ಯದ ರೈತರ ಜಮೀನುಗಳಿಗೆ ನೀರು ಬಿಟ್ಟಿದ್ದರೆ ಈಗ ರಾಜ್ಯದ ರೈತರಿಗೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.

ಆಗಸ್ಟ್ ನಲ್ಲಿ ಐಸಿಸಿ ಸಭೆ ನಡೆಸಿದ್ದರಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುವಂತೆ ಆಯಿತು. ಈಗಾಗಲೇ ತಡವಾಗಿದೆ. ಸರ್ಕಾರ ಸಂಕಷ್ಟ ಸೂತ್ರ ಮೇಕೆದಾಟು ಬಗ್ಗೆ ತಕ್ಷಣ ವಾದ ಮಾಡಬೇಕು. ನಾವೆಲ್ಲ ಸರ್ಕಾರದ ಜೊತೆಗೆ ಇದ್ದೇವೆ. ಸರ್ಕಾರ ದಾರಿ ತಪ್ಪಿದಾಗ ರೈತರ ಪರವಾಗಿ ಇದ್ದೇವೆ. ಈ ಸರ್ಕಾರವನ್ನು ಎಚ್ಚರಿಸಲು ಹೋರಾಟ ಅಗತ್ಯವಿದೆ. ನಿಮ್ಮ ಹೋರಾಟಕ್ಕೆ ನಿರಂತರ ನಮ್ಮ ಬೆಂಬಲ ಇದೆ. ಈ ಹೋರಾಟ ಯಶಸ್ವಿಯಾಗಲಿದೆ. ಇಲ್ಲಿಯೇ ವಿಜಯೋತ್ಸವ ಆಚರಿಸೋಣ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗಳು ಹಾಗೂ ಮತ್ತಿತರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+