Cauvery issue: ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದ ಕಾವೇರಿ ಪ್ರಾಧಿಕಾರ

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕಕ್ಕೆ ಕಾವೇರಿ ನೀರು ವಿಚಾರದಲ್ಲಿ ಮೇಲಿಂದ ಮೇಲೆ ಶಾಕ್ ನೀಡಲಾಗುತ್ತಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾವೇರಿ ನೀರು ಹರಿಸಬೇಕು ಎಂಬ ಶಿಫಾರಸು ಅನ್ನು ಎತ್ತಿಹಿಡಿದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಮಳೆ ಕೊರತೆ ಆಗಿದ್ದರಿಂದ ವಿವಿಧ ಜಲಾಶಯಗಳಲ್ಲಿ ಒಳ ಹರಿವು ಇಲ್ಲದೇ ರೈತರು ಪರಿತಪಿಸುತ್ತಿದ್ದಾರೆ. ಇದೇ ಸ್ಥಿತಿ ಕಾವೇರಿ ಜಲಾಶಯಗಳಲ್ಲಿ ಆಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಬರಗಾಲ ಎದುರಾಗಿದೆ. ಹೀಗಾಗಿ ಸರ್ಕಾರ 190ಕ್ಕೂ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ.

Cauvery Dispute: CWMA Issued Order To Release Cauvery Water To Tamil Nadu For Next 2 weeks

ಹೀಗಿದ್ದರೂ ಸಹಿತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ವು ಕಾವೇರಿ ನೀರು ಬಿಡಲು ಕರ್ನಾಟಕ ನಿರ್ದೇಶಿಸಿದ್ದ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಶಿಫಾರಸನ್ನು ಎತ್ತಿ ಹಿಡಿದಿದೆ. ನೀರು ಬಿಡಲು ಆದೇಶಿಸಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಹಿನ್ನಡೆ ಆಗಿದೆ.

ತಮಿಳುನಾಡು ಮತ್ತು ಕರ್ನಾಟಕದ ವಾದ ವಿವಾದ ಆಲಿಸಿದ ಪ್ರಾಧಿಕಾರವು ಕೊನೆಗೆ ಪ್ರತಿನಿತ್ಯ 3000 ಕ್ಯೂಸೆಕ್ಸ್ ನಂತೆ ಅಕ್ಟೋಬರ್ 16ರಿಂದ ಒಟ್ಟು ಹದಿನೈದು ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿತು. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.

ಅಕ್ಟೋಬರ್ 11 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ತಮಿಳುನಾಡಿಗೆ ಮುಂದಿನ ಹದಿನೈದು ದಿನ ನೀರು ಹರಿಸುಂತೆ ಸೂಚಿಸಿ ಆದೇಶಿಸಿತ್ತು. ಇದಾದ ಬಳಿಕ ಇದೇ ವಿಚಾರ ಪ್ರಾಧಿಕಾರದ ಮುಂದೆ ಶುಕ್ರವಾರ ಬಂದಿತ್ತು. ಈ ವೇಳೆ ಇಲ್ಲಿನ ಆದೇಶ ತಮಿಳುನಾಡು ಪರವಾಗಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+