Cauvery Dispute Timeline: ಕಾವೇರಿ ಜಲವಿವಾದ- ಶತಮಾನದಷ್ಟು ಹಳೆಯ ಸಂಘರ್ಷದ ಘಟನಾವಳಿಗಳ ಮೆಲುಕು
ಕಾವೇರಿ ಜಲವಿವಾದ ಮತ್ತೆ ಭುಗಿಲೆದ್ದಿದೆ. ಶತಮಾನದಷ್ಟು ಹಳೆಯ ಸಂಘರ್ಷವು ದೇಶದ ಎರಡು ರಾಜ್ಯಗಳಲ್ಲಿ ಹಲವು ರಕ್ತಸಿಕ್ತ ಅಧ್ಯಾಯಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ವಿವಾದದ ಟೈಮ್‌ಲೈನ್ ಇಲ್ಲಿದೆ.
1872 ಮತ್ತು 1924ರ ಅಂತರರಾಜ್ಯ ಒಪ್ಪಂದಗಳ ಅಡಿಯಲ್ಲಿ ಎರಡೂ ರಾಜ್ಯಗಳು ಕಾವೇರಿ ನೀರನ್ನು ಹಂಚಿಕೊಳ್ಳುತ್ತಿದ್ದವು. ಆದರೆ, 1960 ರ ದಶಕದಲ್ಲಿ ಕರ್ನಾಟಕ ಸರ್ಕಾರವು ಕಾವೇರಿಯ ಉಪನದಿಗಳಿಗೆ ಹೊಸ ಜಲಾಶಯಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿತು. ಅದನ್ನು ಯೋಜನಾ ಆಯೋಗ ಮತ್ತು ಕೇಂದ್ರ ಸರ್ಕಾರ ತಿರಸ್ಕರಿಸಿತು.

ಕರ್ನಾಟಕ ಸರ್ಕಾರ ತನ್ನ ಸ್ವಂತ ಹಣದಲ್ಲಿ ನಾಲ್ಕು ಜಲಾಶಯಗಳನ್ನು ನಿರ್ಮಿಸುವ ಯೋಜನೆಗೆ ಮುಂದಾಯಿತು. ಇದು ತಮಿಳುನಾಡಿನಲ್ಲಿ ಪ್ರತಿಭಟನೆಗೆ ಕಾರಣವಾಯಿತು.
1970 ರ ದಶಕ
1970 ರ ದಶಕದಲ್ಲಿ 'ಕಾವೇರಿ ಸತ್ಯಶೋಧನಾ ಸಮಿತಿ'ಯನ್ನು ರಚಿಸಲಾಯಿತು. 1973 ರಲ್ಲಿ ಕಾವೇರಿ ನದಿನೀರು ಹಂಚಿಕೆ ಕುರಿತ ವರದಿ ಬಂದಿತು. ಇದರ ಆಧಾರದ ಮೇಲೆ ಚರ್ಚೆಗಳು ನಡೆದವು. 1976 ರಲ್ಲಿ ಕಾವೇರಿ ಸತ್ಯಶೋಧನಾ ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಅಂತಿಮ ಕರಡನ್ನು ಸಿದ್ಧಪಡಿಸಲಾಯಿತು. ಈ ಕರಡನ್ನು ಎರಡೂ ರಾಜ್ಯಗಳು ಒಪ್ಪಿಕೊಂಡವು.
1980 ರ ದಶಕ
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ 1980 ರ ದಶಕದಲ್ಲಿ ಮತ್ತೆ ವಿವಾದಗಳು ಹುಟ್ಟಿಕೊಂಡವು. ಎರಡು ರಾಜ್ಯಗಳು ಮತ್ತೆ ಮಾತುಕತೆ ಆರಂಭಿಸಿದವು. ಈ ಮಾತುಕತೆಗಳು ಏಪ್ರಿಲ್ 1990 ರ ವರೆಗೆ ಮುಂದುವರೆದವು. ಆದರೆ, ಯಾವುದೇ ಮಾತುಕತೆಯಾಗಲಿ, ಚರ್ಚೆಯಾಗಲಿ ಇಲ್ಲಿಯವರೆಗೆ ಯಾವುದೇ ಫಲಿತಾಂಶಗಳನ್ನು ನೀಡಿಲ್ಲ.

90 ರ ದಶಕ
ಕಾವೇರಿ ಜಲವಿವಾದ ಸಂಬಂಧ ನ್ಯಾಯಾಧಿಕರಣವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಆಗಿನ ಪ್ರಧಾನಿ ವಿಪಿ ಸಿಂಗ್ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆ ಬಳಿಕ ನ್ಯಾಯಮೂರ್ತಿ ಚಿತ್ತತೋಷ್ ಮುಖರ್ಜಿ ನೇತೃತ್ವದ ಕಾವೇರಿ ಜಲ ವಿವಾದಗಳ ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು.
ಎರಡೂ ರಾಜ್ಯಗಳು ನ್ಯಾಯಮಂಡಳಿ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿದವು. ಕರ್ನಾಟಕವು 465 ಟಿಎಂಸಿಎಫ್‌ಟಿ ನೀರನ್ನು ಬಳಸಿಕೊಳ್ಳುವುದಾಗಿ ಮನವಿ ಮಾಡಿತು. ಆದರೆ, ತಮಿಳುನಾಡು 1892 ಮತ್ತು 1924 ರ ಒಪ್ಪಂದಗಳ ನಿಯಮಗಳಿಗೆ ಅನುಗುಣವಾಗಿ ಹರಿಯಬೇಕೆಂದು ಬಯಸಿತು.
1991
ತಮಿಳುನಾಡಿಗೆ ತಕ್ಷಣ ನೀರು ಬಿಡಬೇಕೆಂದು ಕರ್ನಾಟಕಕ್ಕೆ ನ್ಯಾಯಮಂಡಳಿ ಆದೇಶಿಸಿತು. ಜೂನ್ 1991 ರಲ್ಲಿ ತಮಿಳುನಾಡಿಗೆ ಮಧ್ಯಂತರ ನೀರನ್ನು ಹರಿಸಲು ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಇದು ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು. ಎರಡೂ ರಾಜ್ಯಗಳಲ್ಲಿ ಪ್ರಾಣಹಾನಿಗಳಾದವು. ಕುಟುಂಬಗಳು ರಾಜ್ಯಗಳನ್ನು ತೊರೆದವು.

1995
1995ರಲ್ಲಿ ಕರ್ನಾಟಕದಲ್ಲಿ ಬರಗಾಲದ ಛಾಯೆ ಆವರಿಸಿತು. ಮಧ್ಯಂತರ ಆದೇಶವನ್ನು ಪಾಲಿಸಲು ರಾಜ್ಯಕ್ಕೆ ಕಷ್ಟವಾಯಿತು. ತಮಿಳುನಾಡು ಈ ಸಮಸ್ಯೆಯನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿತು. ಆದರೆ ನ್ಯಾಯಾಲಯವು ನ್ಯಾಯಾಧಿಕರಣವನ್ನು ಸಂಪರ್ಕಿಸಲು ರಾಜ್ಯ ಸರ್ಕಾರವನ್ನು ಕೇಳಿತು. ಅಂದಿನ ಪ್ರಧಾನಿ ಪಿಎಂ ರಾವ್ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕರ್ನಾಟಕಕ್ಕೆ 6 ಟಿಎಂಸಿ ಅಡಿ ನೀರು ಬಿಡುವಂತೆ ಮನವಿ ಮಾಡಿದರು. ಕರ್ನಾಟಕದಲ್ಲಿ ಮತ್ತೆ ಹಿಂಸಾಚಾರದ ಘಟನೆಗಳು ವರದಿಯಾದವು.
1997
1997 ರಲ್ಲಿ ಮಧ್ಯಂತರ ಆದೇಶದ ಅನುಷ್ಠಾನ ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಾವೇರಿ ನದಿ ಪ್ರಾಧಿಕಾರವನ್ನು ರಚಿಸಲಾಯಿತು. ಮಧ್ಯಂತರ ಆದೇಶವನ್ನು ಈಡೇರಿಸದಿದ್ದರೆ ಅಣೆಕಟ್ಟುಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರಕ್ಕೆ ಅಧಿಕಾರ ಇದೆ ಎಂದು ಕೋರ್ಟ್ ಹೇಳಿತು. ಇದನ್ನು ಕರ್ನಾಟಕ ವಿರೋಧಿಸಿತು. ಆ ನಂತರ ಕೇಂದ್ರ ಸರ್ಕಾರವು ಎರಡು ಸಂಸ್ಥೆಗಳನ್ನು ಸ್ಥಾಪಿಸಿತು. ಕಾವೇರಿ ನದಿ ಪ್ರಾಧಿಕಾರ ಮತ್ತು ಕಾವೇರಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿತು.
2002
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮುಂಗಾರು ಮಳೆ ಕಡಿಮೆಯಾಯಿತು. ಎರಡೂ ರಾಜ್ಯಗಳ ಜಲಾಶಯಗಳು ಕಡಿಮೆ ಮಟ್ಟಕ್ಕೆ ಕುಸಿದವು. ಕರ್ನಾಟಕವು ನೀರಿನ ಅಭಾವವನ್ನು ಅನುಭವಿಸಿದ್ದರಿಂದ ತಮಿಳುನಾಡಿಗೆ ನೀರು ಬಿಡಲು ಹಿಂದೇಟು ಹಾಕಿತು. ಈ ಕುರಿತು ಮಾತುಗಳು ಆರಂಭಗೊಂಡವು. ಅಂದಿನ ತಮಿಳುನಾಡು ಸಿಎಂ ಜಲಲಲಿತಾ ಅವರು ಸಿಆರ್‌ಎ ಸಭೆಯಿಂದ ಹೊರನಡೆದರು. ಪ್ರತಿ ದಿನ 1.25 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತು.

ತಮಿಳುನಾಡು ಸಿಎಂ ಮತ್ತೆ ಸಭೆಯನ್ನು ಬಹಿಷ್ಕರಿಸಿದರು. ಕರ್ನಾಟಕ ಸರ್ಕಾರ ನೀರು ಬಿಡಲು ನಿರಾಕರಿಸಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡೂ ರಾಜ್ಯಗಳ ಚಲನಚಿತ್ರ ನಟರು ಮತ್ತು ಜನರು ಬೀದಿಗೆ ಬಂದು ಪ್ರತಿಭಟನೆ ಆರಂಭಿಸಿದರು.
ಕರ್ನಾಟಕದಲ್ಲಿ ತಮಿಳು ಟಿವಿ ಚಾನೆಲ್‌ಗಳು ಮತ್ತು ತಮಿಳು ಚಿತ್ರಗಳ ಪ್ರದರ್ಶನವನ್ನು ನಿರ್ಬಂಧಿಸಲಾಯಿತು. ತಮಿಳುನಾಡಿನಿಂದ ಪ್ರವೇಶಿಸುವ ಬಸ್‌ಗಳನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು.
2005
ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆ ಸೂತ್ರವನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ನಿರಾಕರಿಸಿತು. ಆರು ಸುತ್ತಿನ ಮಾತುಕತೆಯ ನಂತರ ಕರ್ನಾಟಕ ಮತ್ತು ತಮಿಳುನಾಡು ರೈತ ನಾಯಕರು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.

2007
16 ವರ್ಷಗಳ ನಂತರ ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅಂತಿಮ ಆದೇಶ ನೀಡಿತು. 419 ಟಿಎಂಸಿ ಅಡಿ ನೀರು ಹಂಚಿಕೆಗೆ ಆದೇಶ ನೀಡಿತು. ಈ ನಿರ್ಧಾರವನ್ನು ಪರಿಶೀಲಿಸಲು ರಾಜ್ಯಗಳು ಅರ್ಜಿಗಳನ್ನು ಸಲ್ಲಿಸಿದ್ದರಿಂದ ವಿವಾದ ಮುಂದುವರೆಯಿತು.
2012
2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದ್ದರು. ಈ ನಿರ್ದೇಶನಕ್ಕೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಜಗದೀಶ್ ಶೆಟ್ಟರ್ ಅವರು ವಿರೋಧ ವ್ಯಕ್ತಪಡಿಸಿದರು. ಆಗ ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು.
2016
ತಮಿಳುನಾಡಿಗೆ ಪ್ರತಿದಿನ 15,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿತು. ರಾಜ್ಯ ಸರ್ಕಾರ ನೀರು ಬಿಡಲು ಆರಂಭಿಸುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಕರ್ನಾಟಕ ತಮಿಳುನಾಡಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದವು. ಬಸ್‌ಗಳಿಗೆ ಬೆಂಕಿ ಹಚ್ಚಲಾಯಿತು. ಬೆಂಗಳೂರಿನಲ್ಲಿ ಕರ್ಪ್ಯೂ ಹೇರಲಾಯಿತು.
ತೀವ್ರಗೊಂಡ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಮಣಿದ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಮಾರ್ಪಡಿಸುವಂತೆ ಮನವಿ ಸಲ್ಲಿಸಿತು. ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಆದರೆ, ನ್ಯಾಯಾಲಯವು ಬಿಡುಗಡೆ ಮಾಡಬೇಕಿದ್ದ ನೀರಿನ ಪ್ರಮಾಣವನ್ನು 15,000 ಕ್ಯೂಸೆಕ್‌ನಿಂದ 12,000 ಕ್ಯೂಸೆಕ್‌ಗೆ ಇಳಿಸಿತು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications