ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದಲ್ಲಿ ಯಾವ ಜಾತಿಯ ಶಾಸಕರ ಬಲ ಎಷ್ಟು? ಇಲ್ಲಿದೆ ಮಾಹಿತಿ

By Manjunatha
|
Google Oneindia Kannada News

Recommended Video

ಯಾವ ಜಾತಿಯ ಎಷ್ಟು ಶಾಸಕರು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದ್ದಾರೆ? | Oneindia Kannada

ಬೆಂಗಳೂರು, ಮೇ 21: ಈ ಬಾರಿ ಚುನಾವಣೆ ಅಧಿಕಾರಿ ವಿರೋಧಿ ಅಲೆಯಿಂದ ಅಲ್ಲ ಜಾತಿ ಆಧಾರದಲ್ಲಿ ನಡೆದಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ಫಲಿತಾಂಶಗಳನ್ನು ನೋಡಿದರೆ ಅದು ನಿಜವೂ ಇದ್ದಂತಿದೆ.

ಚುನಾವಣೆಗೆ ಪೂರ್ವವೂ ಜಾತಿ ಧೃವೀಕರಣ ಮಾಡಲು ರಾಜಕೀಯ ಪಕ್ಷಗಳು ಪ್ರಯ್ನಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸೇರಿದಂತೆ ಹಲವು ನಾಯಕರು ಜಾತಿಯನ್ನೇ ಮುಂದಾಗಿ ಇಟ್ಟುಕೊಂಡು ರಾಜಕೀಯ ನಡೆಸಿದ್ದು ಸ್ಪಷ್ಟ.

ಉಪಮುಖ್ಯಮಂತ್ರಿ ಸ್ಥಾನಗಳಿಗೆ ದಲಿತ, ಲಿಂಗಾಯತ ನಾಯಕರ ನೇಮಕ? ಉಪಮುಖ್ಯಮಂತ್ರಿ ಸ್ಥಾನಗಳಿಗೆ ದಲಿತ, ಲಿಂಗಾಯತ ನಾಯಕರ ನೇಮಕ?

ಪ್ರಚಾರಕ್ಕೆ ಬಂದ ಉತ್ತರ ರಾಷ್ಟ್ರ ಮುಖಂಡರೂ ಕೂಡ ಸಮುದಾಯದ ಪ್ರಮುಖ ಮಠಗಳಿಗೆ ಭೇಟಿ ನೀಡಿ ಅವರೂ ಜಾತಿ ರಾಜಕಾರಣಕ್ಕೆ ತೊಡಗಿದರು. ಕೆಲವು ನಾಯಕರಂತೂ ಜಾತಿಯ ಚಿಹ್ನೆಗಳನ್ನು ಧರಿಸಿ ಫೊಟೊಕ್ಕೆ ಫೋಸು ನೀಡಿದರು.

ಹಾಗಿದ್ದರೆ ಯಾವ ಜಾತಿಯ ಎಷ್ಟು ಶಾಸಕರು ಗೆದ್ದಿದ್ದಾರೆ. ಯಾವ ಜಾತಿಯ ಶಾಸಕರು ಹೆಚ್ಚು ಆಯ್ಕೆಯಾಗಿದ್ದಾರೆ, ಯಾವ ಜಾತಿಯ ಅಭ್ಯರ್ಥಿಗಳು ಕಡಿಮೆ ಗೆದ್ದಿದ್ದಾರೆ ಇಲ್ಲಿದೆ ನೋಡಿ ಮಾಹಿತಿ.

ವೀರಶೈವ-ಲಿಂಗಾಯತ ಶಾಸಕರೇ ಹೆಚ್ಚು

ವೀರಶೈವ-ಲಿಂಗಾಯತ ಶಾಸಕರೇ ಹೆಚ್ಚು

ಈ ಬಾರಿ ವಿಧಾನಸೌಧ ಪ್ರವೇಶಿಸಿರುವ ಶಾಸಕರಲ್ಲಿ ಲಿಂಗಾಯತ ಶಾಸಕರ ಸಂಖ್ಯೆಯೇ ಹೆಚ್ಚಿದೆ. 222 ಶಾಸಕರಲ್ಲಿ 58 ಮಂದಿ ಲಿಂಗಾಯತ ಶಾಸಕರು ಮೂರು ಪಕ್ಷಗಳಿಂದ ಆಯ್ಕೆ ಆಗಿದ್ದಾರೆ. ಬಿಜೆಪಿಯಿಂದ ಅತಿ ಹೆಚ್ಚು ಅಂದರೆ 38 ವೀರಶೈವ ಲಿಂಗಾಯತ ಶಾಸಕರು ವಿಧಾನಸೌಧ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನಿಂದ 18 ವೀ-ಲಿಂಗಾಯತ ಶಾಸಕರು ಮತ್ತು ಜೆಡಿಎಸ್‌ನಿಂದ 4 ಈ ಜಾತಿಯ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ.

ದಲಿತರಿಗೆ ಸಿಎಂ ಪಟ್ಟ: ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಸೂಚನೆ?! ದಲಿತರಿಗೆ ಸಿಎಂ ಪಟ್ಟ: ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಸೂಚನೆ?!

ಒಕ್ಕಲಿಗರದ್ದು ಎರಡನೇ ದೊಡ್ಡ ಸಂಖ್ಯೆ

ಒಕ್ಕಲಿಗರದ್ದು ಎರಡನೇ ದೊಡ್ಡ ಸಂಖ್ಯೆ

ಲಿಂಗಾಯತ ಬಿಟ್ಟರೆ ಒಕ್ಕಲಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ವಿಧಾನಸಭೆ ಪ್ರವೇಶಿಸಿದ್ದಾರೆ. ಒಟ್ಟು 42 ಮಂದಿ ಒಕ್ಕಲಿಗ ಅಭ್ಯರ್ಥಿಗಳು ಈ ಬಾರಿ ಗೆದ್ದು ಶಾಸಕರಾಗಿದ್ದಾರೆ. ಅದರಲ್ಲಿ ಜೆಡಿಎಸ್‌ ಗೆದ್ದಿರುವ 37 ಸೀಟುಗಳಲ್ಲಿ 23 ಮಂದಿ ಒಕ್ಕಲಿಗ ಅಭ್ಯರ್ಥಿಗಳೇ ಆಗಿರುವುದು ವಿಶೇಷ. ಕಾಂಗ್ರೆಸ್‌ನಿಂದ 11 ಬಿಜೆಪಿಯಿಂದ 8 ಜನ ಒಕ್ಕಲಿಗ ಅಭ್ಯರ್ಥಿಗಳು ಈ ಬಾರಿ ಗೆದ್ದಿದ್ದಾರೆ.

ಪರಿಶಿಷ್ಟ ಜಾತಿಯ ಎಷ್ಟು ಅಭ್ಯರ್ಥಿ ಗೆದ್ದಿದ್ದಾರೆ

ಪರಿಶಿಷ್ಟ ಜಾತಿಯ ಎಷ್ಟು ಅಭ್ಯರ್ಥಿ ಗೆದ್ದಿದ್ದಾರೆ

ಪರಿಶಿಷ್ಟ ಜಾತಿಯ ಒಟ್ಟು 36 ಅಭ್ಯರ್ಥಿಗಳು ಈ ಬಾರಿ ವಿಧಾನಸೌಧ ಪ್ರವೇಶಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ 12 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯ 16 ಅಭ್ಯರ್ಥಿಗಳು, ಜೆಡಿಎಸ್‌ನ 6 ಮತ್ತು ಇತರೆ ಪಕ್ಷಗಳ 2 ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ಪರಿಶಿಷ್ಟ ಪಂಗಡದ ಶಾಸಕರ ಬಲ ಎಷ್ಟು

ಪರಿಶಿಷ್ಟ ಪಂಗಡದ ಶಾಸಕರ ಬಲ ಎಷ್ಟು

ಪರಿಶಿಷ್ಟ ಪಂಗಡದ ಒಟ್ಟು 19 ಶಾಸಕರು ಈ ಬಾರಿ ವಿಧಾನಸೌಧ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 9 ಪ.ಪಂಗಡದ ಅಭ್ಯರ್ಥಿಗಳು ಗೆದ್ದಬಂದಿದ್ದಾರೆ. ಜೆಡಿಎಸ್‌ನಿಂದ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದಿದ್ದಾರೆ.

ವಿಧಾನಸಭೆಯಲ್ಲಿ ಬ್ರಾಹ್ಮಣರ ಬಲವೆಷ್ಟು

ವಿಧಾನಸಭೆಯಲ್ಲಿ ಬ್ರಾಹ್ಮಣರ ಬಲವೆಷ್ಟು

ಈ ಬಾರಿ 14 ಜನ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಅತಿ ಹೆಚ್ಚು ಅಂದರೆ 10 ಬ್ರಾಹ್ಮಣ ಅಭ್ಯರ್ಥಿಗಳು ಆಯ್ಕೆ ಆಗಿದ್ದರೆ, ಕಾಂಗ್ರೆಸ್‌ನಿಂದ 04 ಜೆಡಿಎಸ್‌ನಿಂದ ಒಬ್ಬರೂ ಆಯ್ಕೆ ಆಗಿಲ್ಲ.

ವಿಧಾನಸಭೆಯಲ್ಲಿ ಕುರುಬ ಜನಾಂಗದ ಬಲಾಬಲ ಎಷ್ಟು

ವಿಧಾನಸಭೆಯಲ್ಲಿ ಕುರುಬ ಜನಾಂಗದ ಬಲಾಬಲ ಎಷ್ಟು

ಸಿದ್ದರಾಮಯ್ಯ ಅವರು ನಾಯಕರಾಗಿರುವ ಕುರುಬ ಜನಾಂಗದ 13 ಅಭ್ಯರ್ಥಿಗಳು ಈ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಒಟ್ಟು 09 ಮಂದಿ ಕುರುಬ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದಾರೆ. ಒಬ್ಬ ಅಭ್ಯರ್ಥಿ ಬಿಜೆಪಿಯಿಂದ, 2 ಅಭ್ಯರ್ಥಿಗಳು ಜೆಡಿಎಸ್‌ನಿಂದ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.

ಎಲ್ಲ ಮುಸ್ಲಿಂ ಶಾಸಕರೂ ಕಾಂಗ್ರೆಸ್‌ನವರೇ

ಎಲ್ಲ ಮುಸ್ಲಿಂ ಶಾಸಕರೂ ಕಾಂಗ್ರೆಸ್‌ನವರೇ

ಈ ಬಾರಿ ಏಳು ಜನ ಮುಸ್ಲಿಂ ಅಭ್ಯರ್ಥಿಗಳು ವಿಧಾನಸೌಧ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಏಳೂ ಜನ ಕಾಂಗ್ರೆಸ್‌ನಿಂದಲೇ ಆಯ್ಕೆ ಆಗಿ ಬಂದಿದ್ದಾರೆ. ಬಿಜೆಪಿಯು ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡರಲಿಲ್ಲ ಜೆಡಿಎಸ್ ಟಿಕೆಟ್ ನೀಡಿತ್ತಾದರೂ ಆ ಅಭ್ಯರ್ಥಿ ಗೆದ್ದಿಲ್ಲ.

ಕೊಡವ ಮತ್ತು ಕ್ರಿಶ್ಚಿಯನ್‌ ಸಂಖ್ಯೆ ಎಷ್ಟು

ಕೊಡವ ಮತ್ತು ಕ್ರಿಶ್ಚಿಯನ್‌ ಸಂಖ್ಯೆ ಎಷ್ಟು

ಎರಡು ಕೊಡವ ಜನಾಂಗದ ಮತ್ತು ಒಬ್ಬ ಕ್ರಿಶ್ಚಿಯನ್‌ ಅಭ್ಯರ್ಥಿಗಳು ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಗೆದ್ದಿರುವ ಇಬ್ಬರು ಕೊಡವರು ಬಿಜೆಪಿ ಅಭ್ಯರ್ಥಿಗಳಾಗಿದ್ದರೆ, ಗೆದ್ದಿರುವ ಒಬ್ಬ ಕ್ರಿಶ್ಚಿಯನ್ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ.

ಇತರೆ ಜಾತಿಯ ಎಷ್ಟು ಶಾಸಕರಿದ್ದಾರೆ

ಇತರೆ ಜಾತಿಯ ಎಷ್ಟು ಶಾಸಕರಿದ್ದಾರೆ

ಬಲಿಜ, ಕ್ಷತ್ರೀಯ, ಗಾಣಿಗ, ಉಪ್ಪಾರ, ಕೋಳಿ ಇನ್ನೂ ವಿವಿಧ ಇತರೆ ಜಾತಿಗಳಿಗೆ ಸೇರಿದ 21 ಜನ ಅಭ್ಯರ್ಥಿಗಳು ಗೆದ್ದು ವಿಧಾನಸೌಧ ಪ್ರವೇಶಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಿಂದ 5 ಜನ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯ 16 ಅಭ್ಯರ್ಥಿಗಳು ಗೆದ್ದಿದ್ದಾರೆ.

English summary
Veerashiva-Lingayatha community MLA's were in higher number in Vidhan Soudha this time, second place goes to Okkaliga community. full detail of all caste MLAs here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X