ಶಾಸಕ ಕೃಷ್ಣಾರೆಡ್ಡಿ ವಿರುದ್ಧದ ಪ್ರಕರಣ ಸಿಐಡಿಗೆ
ಬೆಂಗಳೂರು,
ಜು.2: ಚಿಂತಾಮಣಿ ಶಾಸಕ ಎಂ. ಕೃಷ್ಣಾರೆಡ್ಡಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. id="toptextpromo">ವಿಧಾನ
ಸಭೆಯಲ್ಲಿ ನಿಯಮ 69 ರ ಮೇರೆಗೆ ಅಲ್ಪ ಕಾಲಾವಧಿ ಚರ್ಚೆಯ ಸಂದರ್ಭದಲ್ಲಿ ಶಾಸಕ ವೈ.ಎಸ್.ವಿ.ದತ್ತ ಅವರು ಮಾತನಾಡಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಸಂಬಂಧದಲ್ಲಿ ಕಾರ್ಯನಿರತರಾಗಿದ್ದ ವಿಧಾನಸಭೆ ಸದಸ್ಯ ಎಂ. ಕೃಷ್ಣಾರೆಡ್ಡಿ ಅವರ ಮೇಲೆ ಸುಳ್ಳು ಕೊಲೆ ಮೊಕದ್ದಮೆ ದಾಖಲಿಸಲಾಗಿದೆ. ತಹಸೀಲ್ದಾರರ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದ್ದು, ಇದರ ನಿಷ್ಪಕ್ಷಪಾತ ತನಿಖೆಯಾಗಬೇಕು. ಅದಕ್ಕಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು.[ href="/news/bangalore/hungund-mla-vijayanand-kashappanavar-slaps-police-constable-085815.html" target="_blank">ಪೊಲೀಸ್ ಪೇದೆಗಳಿಗೆ ಥಳಿಸಿದ ಹುನಗುಂದ ಶಾಸಕ] id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಉತ್ತರ ನೀಡಿದ ಗೃಹ ಸಚಿವರು ಕೃಷ್ಣಾರೆಡ್ಡಿ ಅವರ ವಿರುದ್ಧ ಯಾವುದೇ ಕೊಲೆ ಪ್ರಕರಣ ದಾಖಲಾಗಿಲ್ಲ. ಜನರನ್ನು ಪ್ರಚೋದಿಸಿ ಸರ್ಕಾರಿ ಸ್ಥಳದಲ್ಲಿ ಮೃತನ ಶವವನ್ನು ದಫನ್ ಮಾಡಲು ಪ್ರಚೋದಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು. ನಂತರ ಈ ಪ್ರಕರಣವನ್ನು ಸಿಐಡಿಗೆ ನೀಡುವುದಾಗಿ ತಿಳಿಸಿದರು.











Click it and Unblock the Notifications