ಕುಂದಾಪುರದಲ್ಲಿ ಕಾರ್ಟೂನ್ ಲೋಕ ತೆರೆದಿದೆ, ಹೋಗಿಬನ್ನಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಕುಂದಾಪುರ, ಡಿಸೆಂಬರ್, 10: ಅದು ರಾಜಕೀಯ, ರಾಜಕಾರಣಿಗಳ ಹುಳುಕುಗಳನ್ನು ತೋರಿಸಿ ಕೊಡ್ತಿತ್ತು, ಸಮಾಜದ ಹಲವು ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ದುಂದು ವೆಚ್ಚ ಮಾಡುವವರಿಗೆ ಆರ್ಥಿಕ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸ್ತಿತ್ತು, ಕಲಾವಿದರಿಗೆ ಗೆರೆಗಳ ನಾಜೂಕುತನ ತೋರಿಸ್ತಿತ್ತು. ಮಕ್ಕಳಿಗೆ ನಗೆ ಹುಟ್ಟಿಸ್ತಿತ್ತು

ಈ ಮೇಲಿನ ಎಲ್ಲಾ ಸಂಗತಿಗಳು ವ್ಯಕ್ತವಾಗಿದ್ದು, ಕುಂದಾಪುರದ ಕಲಾಮಂದಿರದಲ್ಲಿ ಇಂದು ಚಾಲನೆಗೊಂಡ ವ್ಯಂಗ್ಯಚಿತ್ರ ಹಬ್ಬದಲ್ಲಿ. ಕಾರ್ಟೂನ್ ಕುಂದಾಪುರ ಹಾಗೂ ಪಾರಿಜಾತ ಪ್ರೀತಿ ಫಾರ್ಮ್ ಇವರ ಸಹಯೋಗದೊಂದಿಗೆ ಗುರುವಾರದಿಂದ ಭಾನುವಾರದವರೆಗೆ ನಡೆಯುವ ವ್ಯಂಗ್ಯಚಿತ್ರ ಹಬ್ಬ ನೋಡುಗರಿಗೆ ಮುದ ನೀಡಲಿದೆ.[ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ]

Cartoon festival starts at Kundapur, Udupi on Thursday

ಕುಂದಾಪುರದ ಮತ್ಸೋದ್ಯಮಿ ದಾನಿ ಆನಂದಸಿ ಕುಂದಾರ್ ವ್ಯಂಗ್ಯ ಚಿತ್ರ ಬಿಡಿಸುವ ಮೂಲಕ ವ್ಯಂಗ್ಯಚಿತ್ರ ಹಬ್ಬಕ್ಕೆ ಚಾಲನೆ ನೀಡಿದರು. ಜೊತೆಗೆ ಸೆಲ್ಫಿ ತೆಗೆಯುವ ಮೂಲಕ ಸೆಲ್ಫಿ ಕಾರ್ನರ್ ಅನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದರು.

ಈ ಹಬ್ಬದಲ್ಲಿ ಪಾಲ್ಗೊಂಡಿದ್ದ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೂಲಹಳ್ಳಿ ಮಾತನಾಡಿ, 'ಕಾರ್ಟೂನ್ ಗಳಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಇನ್ನೂ ತೀವ್ರಗತಿಯಲ್ಲಿ ಆಗಬೇಕು. ಕಾರ್ಟೂನ್ ಗಳು ಹಲವಾರು ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಇದರಿಂದ ಸಮಾಜಕ್ಕೆ ಸಾಕಷ್ಟು ಉಪಯೋಗವಾಗಲಿ' ಎಂದು ಶುಭ ಹಾರೈಸಿದರು.[ಅಂಗವಿಕಲತೆ ಮೆಟ್ಟಿನಿಂತ ವ್ಯಂಗ್ಯಚಿತ್ರ ಕಲಾವಿದ]

ಈ ಸಂದರ್ಭದಲ್ಲಿ ಸರಕಾರಿ ಜ್ಯೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ಜೋಶಿ, ವಿದ್ಯುತ್ ಗುದ್ದಿಗೆದಾರರಾದ ಆರ್. ಕೆ. ನಾಯಕ್, ಅಸಿಸ್ಟೆಂಟ್ ಪಿ ಎಸ್ ಐ ಸುದರ್ಶನ್, ಪತ್ರಕರ್ತ ಉದಯಾಚಾರಿ, ಹವ್ಯಾಸಿ ವ್ಯಂಗ್ಯಚಿತ್ರಕಾರ ಕೇಶವ್ ಸಸಿಹಿತ್ಲು, ಕಾರ್ಯಕ್ರಮ ಸಂಯೋಜಕರಾದ ಸತೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಟೂನಿಸ್ಟ್ ಆಫ್ ಕರ್ನಾಟಕ ವೆಬ್ ಸೈಟ್ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cartoon festival starts at Kundapur Kalamandir, Kundapur Taluk, Udupi District, on Thursday, December 10th. This festival is going on 4 days (Thursday to Sunday)
Please Wait while comments are loading...