ಶಿಂಷಾ ನದಿಗೆ ಬಿದ್ದ ಕಾರು, ಮೂವರ ಸಾವು

ಬೆಂಗಳೂರು, ಆ.4 : ಮದ್ದೂರು ಸಮೀಪ ಶಿಂಷಾ ನದಿಗೆ ಕಾರು ಉರುಳಿ ಬಿದ್ದ ಪರಿಣಾಮ ಬೆಂಗಳೂರಿನ ಮೂವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಕಾರಿನಲ್ಲಿದ್ದವರು ಮೈಸೂರು ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆಯಲ್ಲಿ ಈ ಘಟನೆ ನಡೆದಿದೆ.

ಮೃತಪಟ್ಟವರನ್ನು ಬೆಂಗಳೂರಿನ ವಿಜಯನಗರದ ಅನುರಾಗ್ (23), ಪ್ರಕಾಶ್ ನಗರದ ಸುಹಾಸ್ (30) ಮತ್ತು ಕಾರು ಚಾಲಾಯಿಸುತ್ತಿದ್ದ ಬಸವೇಶ್ವರ ನಗರದ ದಯಾನಂದ ಸೋಮಶೇಖರ್ (23) ಎಂದು ಗುರುತಿಸಿಲಾಗಿದೆ. ಬಿಸಿಎ ವ್ಯಾಸಂಗ ಮುಗಿಸಿದ್ದ ಈ ಮೂವರು ಕೆಲಸದ ಹುಡುಕಾಟದಲ್ಲಿದ್ದರು.

Shimsha

ಭಾನುವಾರ ಬೆಳಗ್ಗೆ ಮೈಸೂರಿಗೆ ತೆರಳಿ ನಂತರ ವಾಪಸ್ ಬೆಂಗಳೂರಿನಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಕೆಎ 02- ಎಂ.ವಿ 3204 ನಂಬರ್ ಇನೋವಾ ಕಾರು ಶಿಂಷಾ ಸೇತುವೆ ಸಮೀಪದ ರಸ್ತೆಯ ವಿಭಜಕದ ಕಲ್ಲಿಗೆ ಡಿಕ್ಕಿ ಹೊಡೆದು ಸೇತುವೆಯಿಂದ ಕೆಳಗೆ ಬಿದ್ದಿದೆ.

ಇದರಿಂದಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಕಲ್ಲಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಸೇತುವೆಯಿಂದ ಕೆಳಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಮೃತಪಟ್ಟ ಯುವಕರೆಲ್ಲರೂ ಬಿಸಿಎ ವ್ಯಾಸಂಗ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಯೋಗೇಂದ್ರನಾಥ್ ಮುಂತಾದವರು ಅಗ್ನಿ ಶಾಮಕ ದಳದ ನೆರವಿನೊಂದಿಗೆ ನದಿಗೆ ಇಳಿದು ಕಾರಿನಿಂದ ಶವಗಳನ್ನು ಹೊರ ತೆಗೆದು ಪರಿಹಾರ ಕಾರ್ಯಕೈಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+